ದೇವಾಡಿಗ ಬಂಧುಗಳೇ ಈ  5 ವರ್ಷದ ಮಗು ಸಿಂಚನಾಳ ಹೃದಯ ಚಿಕಿತ್ಸೆಗೆ ನೆರವು ನೀಡಿ

ಕುಂದಾಪುರ:  ಕಾಳವರ ಗ್ರಾಮದ ನರಿಕೋಡ್ಲು ಎಂಬಲ್ಲಿಯ ನಿವಾಸಿ ಚಂದ್ರ ದೇವಾಡಿಗ ಮತ್ತು ಪುಷ್ಪಾ ಇವರಿಗೆ ಜನಿಸಿದ 5 ವರ್ಷದ ಮುದ್ದಾದ ಮಗಳು ಸಿಂಚನ.

ಆದರೆ, ಮಗು ಜನಿಸಿದ 3 ತಿಂಗಳಿಗೆ ಮಗುವಿಗೆ ಹೃದಯದಲ್ಲಿ ತೂತು (hole)ಇರುವ ಬಗ್ಗೆ ವೈದ್ಯರು  ತಿಳಿಸಿರುತ್ತಾರೆ. ದಿಕ್ಕು ತೋಚದ ದಂಪತಿಗಳು ವೈದ್ಯರ ಬಳಿ ಪುನಃ ಹೋದಾಗ ಕ್ರಮೇಣ ಸರಿ ಹೋಗಬಹುದು ನೋಡೋಣ ಎಂದು ಧೈರ್ಯ ತುಂಬಿರುತ್ತಾರೆ.  ಇತ್ತೀಚೆಗೆ ಎ ಜೆ ಆಸ್ಪತ್ರೆ ಮಂಗಳೂರಿನ ವೈದ್ಯರಾದ ಪ್ರೇಮ ಆಳ್ವ ಬಳಿ  ಮಗುವನ್ನು ತೋರಿಸಿದಾಗ ಅವರು ಕೂಡಲೇ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ ಎಂದು ತಿಳಿಸಿರುತ್ತಾರೆ. ಹೃದಯ ಶಸ್ತ್ರಚಿಕಿತ್ಸೆ ಮಾಡಿಸುವುದು ತಡವಾದರೆ ಮಗುವಿನ ಜೀವಕ್ಕೆ ಅಪಾಯ ಇರುವುದಾಗಿ ತಿಳಿಸಿರುತ್ತಾರೆ.

ಇದೀಗ ಐದು ವರ್ಷದ ಪುಟಾಣಿ ಸಿಂಚನಾಳಿಗೆ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ದಿನಾಂಕ 11/01/2019 ರಂದು ವೈದ್ಯರ ಸಲಹೆಯಂತೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸುವುದೆಂದು ತೀರ್ಮಾನಿಸಿದ್ದೇವೆ.

ಚಿಕಿತ್ಸೆಯ ವೆಚ್ಚ ಸುಮಾರು 3,00,000( ಮೂರು ಲಕ್ಷ ರೂಪಾಯಿ) ಖರ್ಚಾಗುದೆಂದು ವೈದ್ಯರು ತಿಳಿಸಿರುತ್ತಾರೆ. 

ಇದರಿಂದ ಈಗ ನಿಮ್ಮಂತಹ ದಾನಿಗಳ ಸಹಾಯವನ್ನು ಯಾಚಿಸುತ್ತಿದ್ದಾರೆ. ಬಡವರಾದಇವರಿಗೆ ಕುಟುಂಬ ನಿಭಾಯಿಸುದೇ ಕಷ್ಟವಾಗಿರುವಾಗ ಆಸ್ಪತ್ರೆ ಬಿಲ್, ವೈದ್ಯಕೀಯ ವೆಚ್ಚ ಭರಿಸಲು ಹೆಣಗಾಡುತಿದ್ದಾರೆ.3 ಲಕ್ಷ ವೆಚ್ಚ ಬರಿಸಿ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸುವ ಸಾಮರ್ಥ್ಯ ಕೂಲಿನಾಲಿ ಮಾಡಿ ಬದುಕುವ ಈ ಕುಟುಂಬಕಿಲ್ಲ.

ಈ ಮಗುವಿಗೆ ಚಿಕಿತ್ಸೆ ನೀಡಿ ಆರೋಗ್ಯವಂತಳಾಗಿ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕೈಯಲ್ಲಿದೆ. ಈ ಕಂದಮ್ಮಳನ್ನು ಉಳಿಸಲು ಮಾತೃ ಹೃದಯ ಹೆಣಗಾಡುತ್ತಿದೆ. ತಂದೆ ತಾಯಿಯ ಅಲೆದಾಟ, ಮೂಕವೇದನೆಯ ಜೊತೆಗೆ ಹಣದ ತುರ್ತು ಅಗತ್ಯವಿದೆ. ಈ ಮಗುವನ್ನು ಉಳಿಸುವ ಸಲುವಾಗಿ ಇದೀಗ ದಾನಿಗಳು,ಮಾನವೀಯ ಅಂತಃಕರಣ ಇರುವವರು ಹಾಗೂ ಸಾರ್ವಜನಿಕರು ಗರಿಷ್ಠ ಮೊತ್ತವನ್ನು ಈ ಬಡ ಕುಟುಂಬಕ್ಕೆ ನೀಡಿ ಸಿಂಚನಾಳನ್ನು ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸೋಣ.  

 (ಮಗುವಿನ ಪೋಷಕರ ಮೊಬೈಲ್ ಸಂಖ್ಯೆ:8151929010)      

Account No:1402500102598001
IFSC code:KARB0000140

Account holder name:Pushpa,

Bank Name: Karnataka Bank  

Branch: Kundapura              


Share