ಬಾಲಕಿ ಸಿಂಚನಾಳ ಹೃದಯ ಚಿಕಿತ್ಸೆಗೆ ತಕ್ಷಣ ಸ್ಪಂದಿಸಿದ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು

ಅಕ್ಷಯ ಕಿರಣದ ಸದಸ್ಯರಾದ ಶಂಕರ್ ಅಂಕದಕಟ್ಟೆ, ಪ್ರವೀಣ್ ದೇವಾಡಿಗ, ಪುರುಷೋತ್ತಮದಾಸ್ ನಿನ್ನೆ ದಿನ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾಳಾವರದ 5 ವರ್ಷದ ಮಗು ಸಿಂಚನಾ ದೇವಾಡಿಗಳ ಮನೆಗೆ ಭೇಟಿ ನೀಡಿದ್ದರು. 

ಆಗ ನಮ್ಮ ಗಮನಕ್ಕೆ ಬಂದಿರುವ ವಿಚಾರವನ್ನು ಅಕ್ಷಯ ಕಿರಣದ ಸದಸ್ಯರ ಮುಂದಿಡುತ್ತಿದ್ದೇವೆ. ಇವರು ತಗಡಿನ ಚಪ್ಪರದ ಸಣ್ಣ ಜೋಪಡಿಯಲ್ಲಿ ವಾಸಿಸುತ್ತಿದ್ದು ಸಿಂಚನಳ ತಂದೆಯಾದ ಚಂದ್ರ ದೇವಾಡಿಗರು ಕುಂದಾಪುರದ ಹೋಟೆಲ್ ಒಂದರಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ದೈನಂದಿನ ಬದುಕು ಸಾಕುವುದೇ ತುಂಬಾ ಕಷ್ಟಕರವಾಗಿರುವ ಅವರಿಗೆ ಲಕ್ಷಾನುಗಟ್ಟಲೇ ಸಾಲ ಇದೆಯಂತೆ. ಇವೆಲ್ಲದರ ನಡುವೆ ಸಿಂಚನಾಳ ಹೃದಯ ಚಿಕಿತ್ಸೆ ಮಾಡಿಸುವುದು ಇವರಿಗೆ ತುಂಬಾ ಕಷ್ಟ. ಇವರ ಹತ್ತಿರ ಬಿಪಿಲ್ ಕಾರ್ಡ್ ಇದ್ದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಿಚಾರಿಸಿದಾಗ ಉಚಿತ ಹೃದಯ ಚಿಕೆತ್ಸೆ ಆಗೋದಿಲ್ಲ ಅಂತಾ ವಾಪಸು ಕಳಿಸಿದ್ದಾರೆ. ಇದೀಗ ಚಂದ್ರ ದೇವಾಡಿಗರು ಮಂಗಳೂರಿನ AJ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಉಚಿತವಾಗಿ ಹ್ರದಯ ಚಿಕಿತ್ಸೆ ಜನವರಿ 11 ಕ್ಕೆ ಮಾಡುತ್ತೇವೆ ಬನ್ನಿ ಅಂತ ಭರವಸೆ ಕೊಟ್ಟಿದ್ದಾರೆ.

ಆಗ ನಮ್ಮ ಸದಸ್ಯರಾದ ಶಂಕರ ಅಂಕದಕಟ್ಟೆಯವರು ಅವರಿಗೆ ಧೈರ್ಯ ತುಂಬಿ ನೀವು ಹೆದರುವ ಅವಶ್ಯಕತೆಯಿಲ್ಲ. ಅಕ್ಷಯ ಕಿರಣದ ಸದಸ್ಯರಾದ ನಾವಿದ್ದೇವೆ. ಈಗಾಗಲೇ ಈ ವಿಚಾರವಾಗಿ ನಾರಾಯಣ ಹ್ರದಯಾಲಯದ ತಜ್ಞ ವೈದ್ಯರಾದ ಡಾ. ಮಂಜುನಾಥ್ ದೇವಾಡಿಗರ ಹತ್ತಿರ ದಯಾನಂದ ದೇವಾಡಿಗರು ಸಮಾಲೋಚನೆ ನೆಡೆಸಿದ್ದು ಉಚಿತವಾಗಿ ನಾರಾಯಣ ಹ್ರದಯಾಲಯದಲ್ಲಿ ಹ್ರದಯ ಶಸ್ತ್ರ ಚಿಕೆತ್ಸೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಅಂತ ಭರವಸೆ ನೀಡಿದ್ದೇವೆ. ಬೇಕಿದ್ದರೆ ಬೆಂಗಳೂರಿಗೆ ಹೋಗಿ ಬರುವ ಖರ್ಚನ್ನು ಅಕ್ಷಯ ಕಿರಣದ ಸದಸ್ಯರಾದ ನಾವು ನೀಡುತ್ತೇವೆ ಎಂದು ಭರವಸೆ ನೀಡಿ ಬಂದೆವು. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಲವೇ ದಿನದಲ್ಲಿ ಚಂದ್ರ ದೇವಾಡಿಗರು ನೀಡುತ್ತಾರೆ.

ಎ ಜೇ  ಆಸ್ಪತ್ರೇಯ ಪ್ರಾಧಿಕಾರ ವಿನಾ ಮೂಲ್ಯ ಚಿಕಿತ್ಸೇ ಕೊಡುವ ವಿಚಾರ ತಿಳಿದು ಎಲ್ಲರ ಮನಸ್ಸು ಹಗುರವಾಯಿತು. ಇತ್ತಲಿಂದ ಗಣೇಶ ಶೇರಿಗಾರ್ ಅವರು ಇಂದು ಬೆಳಿಗ್ಗೆ ವೇನ್ಲೌಕ  ಆಸ್ಪತ್ರೇಯಲ್ಲಿ ಕೇಲಸ ಮಾಡುವ ಎನ್ ಜಿ  ಓ  ದ ಸಂಪರ್ಕ ಸಾಧಿಸಿ ಅಲ್ಲಿ ಒಂದು ವೇಳೇ ಶಸ್ತ್ರ ಚಿಕಿತ್ಸೇ ಅಲ್ಲಿ ಅಸಾದ್ಯವಾದರೇ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸ್ವಿಫ್ಟ ಮಾಡಿಸಿ ವಿನಾ ಮೂಲ್ಯ ಚಿಕಿತ್ಸೆ ಕೊಡಿಸುವ ಬಗ್ಗೇ ಭರವಸೆ  ಪಡೇದಿದ್ದಾರೆ. ಬಿ ಪಿ ಎಲ್ ಮತ್ತು ಆಧಾರ ಕಾರ್ಡು ಎರಡು ಇದ್ದರೆ ಸಾಕು ಎಂಬ ಭರವಸೆ ಸಿಕ್ಕಿದೆ.

ತಕ್ಷಣ ಪ್ರತಿಕ್ರಿಯೆ ನೀಡಿದ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರರಿಗೆ ಧನ್ಯವಾದಗಳು.....


Share