ಕೋಟೆಶ್ವರ ದೇವಾಡಿಗ ಸಮಾಜ ಸೇವಾ ಸಂಘ : ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣೆ

ಕುಂದಾಪುರ : ದೇವಾಡಿಗರ ಸಮಾಜ ಸೇವಾ ಸಂಘ ಕೋಟೇಶ್ವರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಕೋಟೇಶ್ವರ ಶ್ರೀ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಐತಾಳ್ ಬೆಟ್ಟು ರಮೇಶ ದೇವಾಡಿಗರ ಅಧ್ಯಕ್ಷತೆಯಲ್ಲಿ  ಇತ್ತೀಚೆಗೆ ನಡೆಯಿತು.

ಮುಂಬಯಿ ದೇವಾಡಿಗರ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ., ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಭಾಗವಹಿಸಿದರು.

ಸಂಘದ ಉಪಾಧ್ಯಕ್ಷರಾದ ವಾಸು ದೇವಾಡಿಗ, ಮಹಿಳಾ ಸಂಘಟನೆಯ ಅಧ್ಯಕ್ಷೆ ಭಾರತಿ ಆನಂದ ದೇವಾಡಿಗ, ಯುವ ಸಂಘಟನೆ ಅಧ್ಯಕ್ಷ ಪ್ರದೀಪ ದೇವಾಡಿಗ ಬೀಜಾಡಿ ಉಪಸ್ಥಿತರಿದ್ದರು.

ಮಾಜಿ ಸೈನಿಕ ಚಂದ್ರ ದೇವಾಡಿಗ, ಎಂ.ಎಸ್ಸಿ. ಬೌತಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತೆ ಶ್ರೀಷ್ಮಲ್ ಭವ್ಯ ದೇವಾಡಿಗ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದು ಸೌಜನ್ಯ ದೇವಾಡಿಗರನ್ನು ಸನ್ಮಾನಿಸಲಾಯಿತು.

ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು.

2019-2020ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ರಘುರಾಮ ದೇವಾಡಿಗ ತೆಕ್ಕಟ್ಟೆ;  ಕಾರ್ಯದರ್ಶಿ ಭಾಸ್ಕರ ದೇವಾಡಿಗ ವಕ್ವಾಡಿ; ಮಹಿಳಾ ಸಂಘಟನೆಯ ಅಧ್ಯಕ್ಷ ಶ್ಯಾಮಲ ದೇವಾಡಿಗ ಬೀಜಾಡಿ; ಕಾರ್ಯದರ್ಶಿ ಜ್ಯೋತಿ ಎಂ. ದೇವಾಡಿಗ ಉಳ್ತೂರು; ಯುವ ಸಂಘಟನೆಯ ಅಧ್ಯಕ್ಷ ಅರುಣ ದೇವಾಡಿಗ ವಕ್ವಾಡಿ; ಕಾರ್ಯದರ್ಶಿ ಚಂದ್ರ ದೇವಾಡಿಗ ಮಕ್ಕಿಬೆಟ್ಟು ತೆಕ್ಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.

ಸುಮಿತ್ರಾ ಶಂಕರ ಅಂಕದಕಟ್ಟೆ ಪ್ರಾರ್ಥಿಸಿದರು. ಸಂಜೀವ ದೇವಾಡಿಗ ತೆಕ್ಕಟ್ಟೆ ಸ್ವಾಗತಿಸಿದರು. ಶಂಕರ ಅಂಕದಕಟ್ಟೆ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂತೋಷ ದೇವಾಡಿಗ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕುಸುಮ ದೇವಾಡಿಗ ದೊಡ್ಡೋಣಿ ವಂದಿಸಿದರು.


Share