ಯಡ್ತರೆ ಮತ್ತು ಬೈಂದೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 8 ದೇವಾಡಿಗ ಅಭ್ಯರ್ಥಿಗಳ ಜಯಭೇರಿ

ಜ್ಯೋತಿ ದೇವಾಡಿಗ, ಮಹಾಬಲ ದೇವಾಡಿಗ  ಮತ್ತು ಮುಕಾಂಬು ದೇವಾಡಿಗ)

ಬೈಂದೂರು: ಯಡ್ತರೆ ಮತ್ತು ಬೈಂದೂರು ಗ್ರಾ.ಪಂ ಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಸ್ಥಳೀಯ ಚುನಾವಣೆಯಾದ ಕಾರಣ ಹಾಗೂ ತಾಲೂಕು ಕೇಂದ್ರದ ಪ್ರಮುಖ ಗ್ರಾಮಗಳಾಗಿರುವ ಯಡ್ತರೆ ಮತ್ತು ಬೈಂದೂರಿನಲ್ಲಿ ಕಾರ್ಯಕರ್ತರ ನಡುವೆ ಗೆಲುವಿಗಾಗಿ ಸಾಕಷ್ಟು ಪೈಪೋಟಿಗೆ ಕಸರತ್ತು ನಡೆದಿತ್ತು.

ಯಡ್ತರೆ ಗ್ರಾಮದಲ್ಲಿ 21 ಹಾಗೂ ಬೈಂದೂರು ಗ್ರಾಮದಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆದಿದೆ. 

ತ್ರೀವ್ರ ಕುತೂಹಲ ಕೆರಳಿಸಿರುವ ಯಡ್ತರೆ, ಬೈಂದೂರು ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯತ್ ಪಲಿತಾಂಶ  ಪ್ರಕಟವಾಗಿದ್ದು

ಯಡ್ತರೆ ಗಾ.ಪಂ ನಲ್ಲಿ ಒಟ್ಟು 25 ಸ್ಥಾನಗಳಲ್ಲಿ ಕಾಂಗ್ರೆಸ್ 19, ಬಿಜೆಪಿ 6 ಸ್ಥಾನ ಗಳಿಸಿಕೊಳ್ಳವುದರ ಮೂಲಕ ಕಾಂಗ್ರೆಸ್ ಮತ್ತೆ ಅಧಿಕಾರ ಉಳಿಸಿಕೊಂಡಿದೆ ಆದರೆ 

ಬೈಂದೂರು ಗ್ರಾ.ಪಂ ನಲ್ಲಿ ಬಿಜೆಪಿ 17, ಕಾಂಗ್ರೆಸ್ 4 ಸ್ಥಾನ ಪಡೆಯುದರ ಮೂಲಕ ಬಿಜೆಪಿ ಜಯಭೇರಿ ಬಾರಿಸುವುದರ ಮೂಲಕ ಗದ್ದುಗೆ ಎರಿದೆ.

ಈ ನಡುವೆ ನಮ್ಮ ಸಮುದಾಯದ ರಾಜಕೀಯ ಕಾರ್ಯಕರ್ತರಿಗೆ ಸಂತಸದ ವಿಷಯವೇನೆಂದರೆ  ಈ ಚುನಾವಣೆಯಲ್ಲಿ 7 ಜನ ದೇವಾಡಿಗ ಅಭ್ಯರ್ಥಿಗಳು ವಿಜಯಶಾಲಿಯಾಗಿರುತ್ತಾರೆ.

ಯಡ್ತರೆಯಲ್ಲಿ ಮುಕಾಂಬು ದೇವಾಡಿಗ, ರಾಧಾ ದೇವಾಡಿಗ, ಉಮೇಶ್ ದೇವಾಡಿಗ, ಸುಧಾಕರ್ ದೇವಾಡಿಗ, ಕಾವೇರಿ ದೇವಾಡಿಗ ಹಾಗೂ ಬೈಂದೂರಿನಲ್ಲಿ ಮಹಾಬಲ ದೇವಾಡಿಗ , ಜಲಜ ದೇವಾಡಿಗ  ಮತ್ತು ಜ್ಯೋತಿ ದೇವಾಡಿಗ ವಿಜಯ ಗಳಿಸಿರುತ್ತಾರೆ.

ಇವರೆಲ್ಲರಿಗೂ ದೇವಾಡಿಗ.ಕಾಮ್ ನ ಓದುಗಾರರು ಹಾಗೂ ನಮ್ಮೆಲ್ಲರ ಅಭಿನಂದನೆ ಹಾಗೂ ಶುಭ ಹಾರೈಕೆಗಳು.

(ವರದಿ - ಚಿತ್ರ: ಪುರುಶೋತ್ತಮ ದಾಸ್, ಉಪ್ಪುಂದ)


Share