ಸುಧಾಕರ ದೇವಾಡಿಗರಿಗೆ ಸಮ್ಮಾನ 'ಅಹರ್ನಿಶಿ ದುಡಿತಕ್ಕೆ ಸಂದ ಗೌರವ'

ಉಡುಪಿ, ಜ. 17: ಅಂಚೆ ಇಲಾಖೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಮೇಘದೂತ ಪ್ರಶಸ್ತಿಯು ಈ ವರ್ಷ ಮಣಿಪಾಲ ಅಂಚೆ ವ್ಯವಹಾರ ಕೇಂದ್ರದ ಅಧೀಕ್ಷಕ ಸುಧಾಕರ ದೇವಾಡಿಗರಿಗೆ ಸಿಕ್ಕಿರುವುದು ಅವರು ಇಲಾಖೆಗೆ ಸಲ್ಲಿಸಿದ ಅಹರ್ನಿಶಿ ಸೇವೆಗೆ ಸಂದ ಗೌರವ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ ಭಟ್ ಹೇಳಿದರು.

ಅಂಚೆ ಮನೋರಂಜನಾ ಕೂಟ ಉಡುಪಿ ಆಶ್ರಯದಲ್ಲಿ ಮೇಘದೂತ ಪ್ರಶಸ್ತಿ ಪುರಸ್ಕೃತ ಸುಧಾಕರ ದೇವಾಡಿಗ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಸೂರ್ಯನಾರಾಯಣ ರಾವ್‌ ಸ್ವಾಗತಿಸಿದರು. ಉಪ ಅಂಚೆ ಅಧೀಕ್ಷಕ ಶ್ರೀನಾಥ್‌ ಎನ್‌. ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಅಂಚೆ ಅಧೀಕ್ಷಕ ಸದಾಶಿವ ನಾಯ್ಕ ದೇವಾಡಿಗ , ಉಪ ಅಂಚೆ ನಿರೀಕ್ಷಕ ವಸಂತ್‌ ಸುರೇಖಾ ಸುಧಾಕರ್‌, ಶಕುಂತಲಾ ಉಪಸ್ಥಿತರಿದ್ದರು.

ಶಾರದಾ ಉಪಾಧ್ಯಾಯ, ಸವಿತಾ ಶೆಟ್ಟಿಗಾರ್‌, ಭಾರತಿ ನಾಯಕ್‌ ಶುಭ ಹಾರೈಸಿದರು. ಪೂರ್ಣಿಮಾ ಜನಾರ್ದನ್‌ ಕಾರ್ಯಕ್ರಮ ನಿರೂಪಿಸಿದರು.

ನರಸಿಂಹ ನಾಯಕ್‌ ವಂದಿಸಿದರು.

ಹಿಂದಿನ ವರದಿ:

ಸುಧಾಕರ ದೇವಾಡಿಗರಿಗೆ ಅಂಚೆ ಇಲಾಖೆಯ ಅತ್ಯುನ್ನತ " ಮೇಘದೂತ ಪ್ರಶಸ್ತಿ"


Share