ದೇವಾಡಿಗ ಸಂಘ ಮುಂಬೈ ಇದರ 54ನೇ ಕ್ರೀಡಾ ಮಹೋತ್ಸವ (ಪರಿಷ್ಕೃತ ವರದಿ-ಚಿತ್ರಗಳು)

ಮುಂಬೈ: ದೇವಾಡಿಗ ಸಂಘ ಮುಂಬೈಯ 54ನೇ ಕ್ರೀಡಾ ಸ್ಪರ್ದೆಯು ಜನವರಿ 13ನೇ ಆದಿತ್ಯವಾರ ಸೊಮಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಬಹಳ  ಉತ್ಸುವಿಕೆಯಿಂದ ಸಂಪನ್ನಗೊಂಡಿತು.

ಬೆಳಿಗ್ಗೆ 9 ಗಂಟೆಗೆ ಕ್ರೀಡಾ ಸ್ಪರ್ದೆಯ ಉದ್ಘಾಟನೆಯನ್ನು  ಸಂಘದ ಉಪಾದ್ಯಕ್ಷರಾದ ಶ್ರೀ ಸುರೇಶ್ ಎಸ್ ರಾವ್  ನೆರವೇರಿಸಿದರು.  ಕ್ರೀಡೋತ್ಸವದ ಪ್ರಮುಖ ಪ್ರಾಯೋಜಕತ್ವವನ್ನು  ರಿಲೈಯನ್ಸ್ ಗ್ರೂಪೀನ ಉಪಾದ್ಯಕ್ಷರಾದ ಶ್ರೀ ವಿಶ್ವಾಸ್ ಅತ್ತಾವರ್ರವರ ನೆರವಿನ ಮೂಲಕ ರಿಲೈಯನ್ಸ್ ಗ್ರೂಪ್  ವಹಿಸಿಕೊಂಡರೆ, ಇನ್ನುಳಿದ ಭಾಗವನ್ನು ಸೀತಾ ಬುಕ್ಸ್ ಅಂಡ್ ಪಬ್ಲಿಶರ್ಸ್ನ ಮುಖ್ಯಸ್ಥ ಶ್ರೀ ಸುರೇಶ್ ರಾವ್ ಇವರು ವಹಿಸಿದರು. 

3 ವರ್ಷದಿಂದ 60 ವರ್ಷ ಮತ್ತು 60 ವರ್ಷ ಮೇಲ್ಪಟ್ಟವರಿಗೂ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಉದ್ದ ಜಿಗಿತ , ಗುಂಡು ಎಸೆತ, 100, 200, 400, 800 ಮೀಟರ್ ಓಟ,  ಬಾಲ್ ಎಸೆತ, ನಡಿಗೆ ಸ್ಪರ್ದೆ,  ಹಗ್ಗ ಜಗ್ಗಾಟ,   ರಿಲೆ ಓಟ, ಚಾಕ್ಲೇಟ್ ಪಿಕ್ಕಿಂಗ್,  ಬಾಲ್ ಕಲೆಕ್ಟಿಂಗ್  ಓಟ  ಇತ್ಯಾದಿ  ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾ ಆಯೋಜನೆಯ ಯಶಸ್ವಿಗಾಗಿ ಸಂಘದ ಕ್ರೀಡಾ ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ದೇವಾಡಿಗರು ಹಾಗೂ ಅವರ ತಂಡದವರಾದ ಸುರೇಶ್ ದೇವಾಡಿಗ, ಮೋಹನ್ ದಾಸ್ ಗುಜರನ್, ನಿತೇಶ್ ದೇವಾಡಿಗರು ಶ್ರಮಿಸಿದರು.  ಸಂಘದ ನಿಕಟ ಪೂರ್ವ ಅಧ್ಯಕ್ಷರಾದ  ಶ್ರೀ  ಕೆ. ಕೆ. ಮೋಹನ್ದಾಸ್,  ಶ್ರೀ ಗೋಪಾಲ್ ಮೊಯಿಲಿ , ಶ್ರೀ ಹಿರಿಯಡ್ಕ ಮೋಹನ್ದಾಸ್,  ಶ್ರೀ ವಾಸು ಎಸ್. ದೇವಾಡಿಗ, ಶ್ರೀನಿವಾಸ್ ಪಿ. ಕರ್ಮರನ್, ಗೌರವ ಕಾರ್ಯದರ್ಶಿ  ಶ್ರೀ  ವಿಶ್ವನಾಥ್  ಬಿ ದೇವಾಡಿಗ,  ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಾಲತಿ ಜೆ ಮೊಯಿಲಿ, ಶ್ರೀ ಗಣೇಶ್ ಶೇರಿಗಾರ್ ಕೋಶಾಧಿಕಾರಿಗಳಾದ ಶ್ರೀ ದಯಾನಂದ್ ದೇವಾಡಿಗ, ಪ್ರಶಾಂತ್ ಮೊಯಿಲಿ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾದ ಶ್ರೀ ಜನಾರ್ಧನ ದೇವಾಡಿಗ, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ, ಮಹಿಳಾ ಕಾರ್ಯದಕ್ಷೆಯಾದ ಶ್ರೀಮತಿ ಜಯಂತಿ ಮೊಯಿಲಿ, ಉಪ ಕಾರ್ಯದಕ್ಷೆಯಾರಾದ ಶ್ರೀಮತಿ ರಂಜಿನಿ ಮೊಯಿಲಿ, ಶ್ರೀಮತಿ ಸುರೇಖಾ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಹಾಗೂ ಶ್ರೀ ಪ್ರವೀಣ್ ನಾರಾಯಣ , ಲತಾ ಶೇರಿಗಾರ್, ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ, ಡಾಕ್ಟರ್ ರೇಖಾ ದೇವಾಡಿಗ ಉಪಸ್ಥಿತರಿದ್ದರು.

ಹತ್ತು ಪ್ರಾದೇಶಿಕ ಸಮಿತಿಗಳು ಭಾಗವಹಿಸಿ ಡೊಂಬಿವಿಲಿ ಪ್ರಾದೇಶಿಕ ಸಮಿತಿಯು ಅತ್ಯುತಮ ತಂಡ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ನವಿ ಮುಂಬೈ ಪ್ರಾದೆಶಿಕ ಸಮನ್ವಯ ಸಮಿತಿ ಪಡೆದುಕೊಂಡರೆ, ದ್ವಿತಿಯ ಸ್ಥಾನವನ್ನು ನಗರ ವಲಯ ಪ್ರಾದೆಶಿಕ ಸಮನ್ವಯ ಸಮಿತಿ ಪದೆದುಕೊಂಡಿತು.  ರಿಲೆ ಓಟದಲ್ಲಿ ಪ್ರಥಮ ಸ್ಥಾನವನ್ನು ಡೊಂಬಿವಿಲಿ ಪ್ರಾದೆಶಿಕ ಸಮನ್ವಯ ಸಮಿತಿ ಪಡೆದುಕೊಂಡರೆ, ದ್ವಿತಿಯ ಸ್ಥಾನವನ್ನು ನಗರ ವಲಯ  ಪ್ರಾದೆಶಿಕ ಸಮನ್ವಯ ಸಮಿತಿ ಪಡೆದುಕೊಂಡಿತು.

ವೈಯಕ್ತಿಕ ಚಾಂಪಿಯನ್ ಆಗಿ 16 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ದೀವೆಶ್ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಭೂಮಿಕಾ ದೇವಾಡಿಗ,  22 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ವಿಶಾಲ್ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಹರ್ಷ  ದೇವಾಡಿಗ, 30 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ಆತಿಶ್ ಶೇರಿಗಾರ್ ಹಾಗೂ ಹುಡುಗಿಯರ ವಿಭಾಗದಲ್ಲಿ ಸ್ವಾತಿ ಯಸ್. ದೇವಾಡಿಗ ಮತ್ತು 40 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ಕಿರಣ್ ಆರ್ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಸುಲೋಚನಾ ಶೇರಿಗಾರ್ ಪಡೆದುಕೊಂಡರು
      
ಕ್ರೀಡಾ ಕಾಮಿಂಟ್ರೀಯನ್ನು ಶ್ರೀ ಗಿರೀಶ್ ದೇವಾಡಿಗ, ಡಾಕ್ಟರ್ ರೇಖಾ ದೇವಾಡಿಗ ಮತ್ತು ಶ್ರೀ ಸತೀಶ್ ಕಣ್ವತೀರ್ಥ ಇವರು ನೆರವೇರಿಸಿದರು.   ಸಂಘದ ಸದ್ಯಸರಾದ ಶ್ರೀ  ಅಶೋಕ ದೇವಾಡಿಗ,  ಶ್ರೀ ಸತೀಶ್ ಮೊಯಿಲಿ, ಶ್ರೀಮತಿ ವನಿತಾ ದೇವಾಡಿಗ, ಶ್ರೀ ಭಾಸ್ಕರ್ ದೇವಾಡಿಗ, ಶ್ರೀ ಹರೀಶ್ ದೇವಾಡಿಗ ದೊಂಬಿವಿಲಿ ಶ್ರೀ ಹರೀಶ್ ದೇವಾಡಿಗ ಅಸಲ್ಫೆ , ರೊಶನ್ ದೇವಾಡಿಗ, ರೋಹಿತ್ ದೇವಾಡಿಗ, ರಘು ಮೊಯಿಲಿ, ವಿಜಯ್ ದೇವಾಡಿಗ, ಹೇಮಲತಾ ದೇವಾಡಿಗ, ಗಣೇಶ್ ದೇವಾಡಿಗ, ಸುರೇಖಾ ದೇವಾಡಿಗ, ಹೇಮನಾಥ್ ದೇವಾಡಿಗ ಇವರು ತೀರ್ಪುಗಾರರಾಗಿ ಜವಾಬ್ದಾರಿಯನ್ನು ವಹಿಸಿದರು.

ಕ್ರೀಡೋತ್ಸ್ವವದ ಸಮಾರೋಪ ಸಮಾರಂಭವನ್ನು ಸಂಘದ ಗೌರವ ಕಾರ್ಯದರ್ಶಿ ಶ್ರೀ ವಿಶ್ವಾನಾಥ್ ಬಿ ದೇವಾಡಿಗ, ಕ್ರೀಡಾ ಕಾರ್ಯದಕ್ಷೆ ಶ್ರೀಮತಿ ಜಯಂತಿ ದೇವಾಡಿಗ, ಉಪಾಕಾರ್ಯದಕ್ಷ ಸುರೇಶ್ ದೇವಾಡಿಗ, ಕಾರ್ಯದರ್ಶಿ ಮೋಹನ್ದಾಸ್ ಗುಜರನ್, ಉಪ ಕಾರ್ಯದರ್ಶಿ ನಿತೇಶ್ ದೇವಾಡಿಗ ಮತ್ತು ಅಕ್ಷಯ ದೇವಾಡಿಗರು ನೆರವೇರಿಸಿದರು. 

ರಾಷ್ಟ್ರೀಯ ಗೀತೆ ಮತ್ತು ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

~ ಶ್ರೀಮತಿ ಜಯಂತಿ ಮೊಯ್ಲಿ.

ಹಿಂದಿನ ವರದಿ:

ದೇವಾಡಿಗ ಸಂಘ, ಮುಂಬೈ ಆಯೋಜಿಸಿದ 54ನೇ ವಾರ್ಷಿಕ ಕ್ರೀಡಾಕೂಟ (Pics)


Share