ಜೇಸಿಐ ಮಣಿಪಾಲ ಹಿಲ್‌ ಸಿಟಿ ಇದರ ಅಧ್ಯಕ್ಷರಾಗಿ ರತ್ನಾಕರ ಜಿ.ಎಸ್‌. ಆಯ್ಕೆ

ಉಡುಪಿ, ಜ. 19: ಜೇಸಿಐ ಮಣಿಪಾಲ ಹಿಲ್‌ ಸಿಟಿ 2019ರ ಸಾಲಿನ ನೂತನ ಅಧ್ಯಕ್ಷರಾಗಿ ಮಣಿಪಾಲದ ಸಹರಾ ಟೂರ್ ಮತ್ತು ಟ್ರಾವೆಲ್ಸ್‌ನ ಮಾಲಕ ರತ್ನಾಕರ್‌ ಜಿ.ಎಸ್‌ ಅವರು ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ, ಕಾರ್ಯದರ್ಶಿ ಮಂಜುನಾಥ ಕಾರಂತ, ಕೋಶಾಧಿಕಾರಿ ಮನೋಹರ ಕಾಂಚನ್‌, ಉಪಾಧ್ಯಕ್ಷರಾಗಿ ಶಿವಪ್ರಸಾದ್‌ ಶೆಟ್ಟಿಗಾರ್‌, ದೀಕ್ಷಿತ್‌ ಹೆರ್ಗ, ಫೊಜನ್‌ ಅಕ್ರಮ್‌, ದಯಾನಂದ್‌ ಅಲೆವೂರು, ಮೋಹನದಾಸ್‌ ಪೈ, ಗೃಹಪತ್ರಿಕೆ ಸಂಪಾದಕ ಹರಿಪ್ರಸಾದ್‌, ಜೇಸಿರೆಟ್ ಅಧ್ಯಕ್ಷೆ ಶಶಿಕಲಾ ರತ್ನಾಕರ್‌, ಜೆಜೆಸಿ ಅಧ್ಯಕ್ಷರಾಗಿ ಇಸ್ಮಾಯಿಲ್‌ ನಜಲ್‌ ಅವರು ಆಯ್ಕೆಯಾಗಿರುತ್ತಾರೆ.

ಸಲಹಾ ಸಮಿತಿಯ ಸದಸ್ಯರಾಗಿ ಬಾಲಕೃಷ್ಣ ಪ್ರಭು, ರತ್ನಾಕರ ಇಂದ್ರಾಳಿ, ಲಕ್ಷ್ಮೀಕಾಂತ ಬೆಸ್ಕೂರು, ರಾಜೇಶ್‌ ಭಟ್, ಜಗದೀಶ್‌ ಆಚಾರ್ಯ, ಕೃಷ್ಣಪ್ರಸಾದ್‌ ಶೆಟ್ಟಿ, ಉಮೇಶ್‌ ನಾೖಕ್‌, ಹೇಮಂತ್‌ ಕುಮಾರ್‌, ಡಾ| ಪದ್ಮರಾಜ್‌ ಹೆಗ್ಡೆ, ಪ್ರಕಾಶ್‌ ಭಟ್, ಡಾ| ಶೈಲೇಶ್‌ ಪೂಜಾರಿ, ಸುಭಾಷ್‌ ಬಂಗೇರ ಆಯ್ಕೆಯಾಗಿದ್ದಾರೆ.


Share