ಮತ್ತೊಮ್ಮೆ ಶೀಘ್ರ ನೆರವಿಗೆ ಸ್ಪಂದಿಸಿದ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರು


ಕುಂದಾಪುರ:  ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಸಿಂಚನ ದೇವಾಡಿಗ ಕಾಳಾವರ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರುವ ಶಂಕರ್ ದೇವಾಡಿಗ ಕುಂದಾಪುರ ಇವರಿಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಸದಸ್ಯರ ವತಿಯಿಂದ ತಲಾ10,000ದಂತೆ 20,000 ರು ವೈದ್ಯಕೀಯ ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜು ದೇವಾಡಿಗ ತ್ರಾಸಿ, ಲೀಲಾವತಿ ದೇವಾಡಿಗ, ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಉದಯ ದೇವಾಡಿಗ, ಜಗದೀಶ್ ದೇವಾಡಿಗ ಮುಲ್ಲಿಕಟ್ಟೆ,ರವಿ ದೇವಾಡಿಗ ತಲ್ಲೂರು, ಮೊದಲಾದವರು ಉಪಸ್ಥಿತರಿದ್ದರು.


Share