ಕಂಬಳ ಕ್ಷೇತ್ರದ ಬಹು ಮುಖ ಪ್ರತಿಭೆ: ಅಭಿಷೇಕ್ ಕೆ ದೇವಾಡಿಗ ಪಾವಂಜೆ

ಶ್ರೀ ಅಭಿಷೇಕ್ ದೇವಾಡಿಗ ಅವರು ಕಂಬಳ ಕ್ಷೇತ್ರದಲ್ಲಿ ಶ್ರೀ ತಡಂಬೈಲ್ ನಾಗೇಶ್ ದೇವಾಡಿಗ ಅವರ ಕೋಣ ಓಡಿಸುತ್ತಾರೆ.

ಕ್ರೀಡಾ ಸಾಧನೆ 

1) 2014-15,2015-16 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಸತತ 2 ವರ್ಷ ಪಡೆದಿದ್ದಾರೆ
2) 2016ರಲ್ಲಿ ಮೂಡಬಿದ್ರಿಯ ಸ್ವರಾಜ್ಯ ಮೈದಾನದಲ್ಲಿ ನಡೆದ INDO-LANKA ದ್ವಿ-ರಾಷ್ಟ್ರ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರತಿನಿಧಿಸಿ 100ಮೀಟರ್ ಓಟದಲ್ಲಿ ದ್ವಿತೀಯ,200ಮೀಟರ್ ಓಟದಲ್ಲಿ ತೃತೀಯ,4x100ಮೀಟರ್ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
3) ಕೆಸರು ಗದ್ದೆ ಕ್ರೀಡಾಕೂಟದಲ್ಲಿ 10ಕು ಹೆಚ್ಚು ಪ್ರಥಮ ಸ್ಥಾನ ಪಡೆದಿರುತ್ತಾರೆ,.

ಕಂಬಳ ಕ್ಷೇತ್ರ:

ಇವರು 2018-2019 ಸಾಲಿನ 5ನೇ ವರ್ಷದ ಕಂಬಳ ತರಬೇತಿ ಶಿಬಿರದ ಶಿಬಿರಾರ್ಥಿಯಾಗಿ,ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ 153 ಸ್ಪರ್ಧಿ ಭಾಗವಿಸಿದ್ದು ಅದರಲ್ಲಿ ಅಭಿಷೇಕ್ ಮೊದಲನೆಯವರಾಗಿ ಹೊಮ್ಮಿದ್ದು ಮುಂದಿನ ಹಂತಕ್ಕೆ ಆಯ್ಕೆಯಾಗಿ 2ನೇ ಹಂತದಲ್ಲಿ ಕೂಡ ಮೊದಲನೆಯವರಾಗಿ ಆಯ್ಕೆಯಾಗಿದ್ದಾರೆ.   ಹಾಗೆಯೇ ಕಂಬಳ ಶಿಬಿರದ ಕಂಬಳ ಕೂಟದಲ್ಲಿ ಕ್ವಾಟರ್ ಫೈನಲ್ ಹಂತದ ವರೆಗೆ ಅಭಿಷೇಕ್ ಕೋಣ ಓಡಿಸಿದ್ದಾರೆ.  ಪ್ರಸ್ತುತ ಶ್ರೀ ತಡಂಬೈಲ್ ನಾಗೇಶ್ ದೇವಾಡಿಗ ತಂಡದೊಂದಿಗೆ ಮುಂದುವರಿದಿದ್ದಾರೆ.

ಶ್ರೀ ಅಭಿಷೇಕ್ ದೇವಾಡಿಗ ಅವರು ಹಳೆಯಂಗಡಿಯ U.B.M.C ಹೈಯರ್ ಪ್ರೈಮರಿ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪಡೆದು,  ಪ್ರೌಡ ಶಿಕ್ಷಣ ದಿಂದ ಪದವಿ ಶಿಕ್ಷಣದವರಿಗೆ ಮೂಡಬಿದ್ರಿಯ ಜೈನ ಪ್ರೌಡಾ ಶಾಲೆ, ಜೈನ ಪದವಿಪೂರ್ವ ಕಾಲೇಜು, ಧವಲಾ ಮಹೌ ವಿದ್ಯಾಲಯದಲ್ಲಿ ಮುಗಿಸಿ, ಅರ್ಥಶಾಸ್ತ್ರದಲ್ಲಿ ಸ್ನಾತೋತ್ತರ ಪದವಿಯನ್ನು ಮಂಗಳೂರು ಕೊಣಾಜೆಯಲ್ಲಿ ಇರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರದ ಅಧೀನದ ಅಂಕಿ-ಅಂಶ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗದಲ್ಲಿರುವ ಇವರು  2009ರಲ್ಲಿ ಜೈನ್ ಪದವಿಪೂರ್ವ ಕಾಲೇಜು ಅಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವಗ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರಜಾಪ್ರಭುತ್ವ ದಿನದ ಪರೇಡ್ ನಲ್ಲಿ ಭಾಗವಹಿಸಿದ್ದಾರೆ ಹಾಗೆಯೇ ಅದೇ ವರ್ಷ ಆ ಕಾಲೇಜಿನಲ್ಲಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದಿದ್ದಾರೆ.

ಇವರ ಮುಂದಿನ ಭವಿಷ್ಯಕ್ಕೆ ಶುಭವಾಗಲಿ, ಉನ್ನತ ವ್ಯಾಸಂಗ ಮಾಡಿ , ತನ್ನ ಕೆಲಸದ ಒಟ್ಟಿಗೆ  ತುಳುನಾಡಿನ ಜನಪದ ಕ್ರೀಡೆ ಯಲ್ಲಿ ಕಂಬಳ ಓಟಗಾರಣಗಿ ತುಳುನಾಡಿನ ಸಂಸ್ಕೃತಿ ಯನ್ನು ಬೆಳೆಸುವ ಶ್ರೀ ಅಭಿಷೇಕ್ ದೇವಾಡಿಗ ಅವರಿಗೆ ಊರಿನ ದೇವರು ದೈವ ದೇವರ ಅನುಗ್ರಹ ಸದಾ ಇರಲಿ; ಶುಭವಾಗಲಿ,


Share