ಆಕ್ಮೆ ಮೂವಿಸ್ ಲಾಂಚನದಲ್ಲಿ " ಇಂಗ್ಲೀsh" ತುಳು ಚಿತ್ರಕ್ಕೆ ಚಾಲನೆ

ಮಂಗಳೂರು: ಮಾರ್ಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮತ್ತು ಯಾನ ಕನ್ನಡ ಚಿತ್ರಗಳ ನಿರ್ಮಾಣದ ನಂತರ, ತಮ್ಮ ಮಾತೃ ಭಾಷೆ  ತುಳುವಿನ  ಮೇಲೆ ಅಭಿಮಾನದಿಂದ, ಕೆ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರಲಿರುವ "ಇಂಗ್ಲೀsh"ತುಳು ಚಲನಚಿತ್ರದ ಮೂಲಕ - ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ತುಳು ಚಲನಚಿತ್ರರಂಗದತ್ತ ತಮ್ಮ ಗಮನ ಹರಿಸಿ, ತಮ್ಮ ಆಕ್ಮೆ ಮೂವಿಸ್  ಲಾಂಚನದಲ್ಲಿ ನಿರ್ಮಾಪಕರಾಗಿ ಎಂಟ್ರೀ ಕೊಟ್ಟಿದ್ದಾರೆ.

ಇವತ್ತಿನಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ  ,ಇನ್ನೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟ ಶ್ರೀ ಅನಂತ್ ನಾಗ್ ಅವರು ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. 

ಇಂದು ಶರವು ದೇವಸ್ಥಾನ ಮಂಗಳೂರಲ್ಲಿ ಮಹೂರ್ತ ನಡೆಯಿತು.  ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.  ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಶರವು ಕ್ಷೇತ್ರದ ಶ್ರೀ ರಾಘವೇಂದ್ರ ಶಾಸ್ತ್ರಿ ಕ್ಯಾಮರ ಚಾಲನೆ ಮಾಡಿ, ಚಿತ್ರಕ್ಕೆ ಶುಭಾಕೋರಿದರು.

ಸಿನಿಮಾಕ್ಕೆ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. 

ಸಿನಿಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಲಿದ್ದಾರೆ. ಸಂಕಲನ: ಮನು ಶೇಡ್‌ಗಾರ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್, ಡಿಸೈನ್ ದೇವಿ ರೈ, ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ.

ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್‌ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಮೊದಲಾದವರು ಇದ್ದಾರೆ.

NEWS IN DETAIL:

ಮಂಗಳೂರು, ಜ. 28: ಉದ್ಯಮಿಹರೀಶ್‌ ಶೇರಿಗಾರ್‌ ನಿರ್ಮಾಣದ, ಸೂರಜ್‌ ಶೆಟ್ಟಿ ನಿರ್ದೇಶನದ 'ಇಂಗ್ಲೀಷ್‌'ತುಳು ಸಿನೆಮಾದ ಮುಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ನೆರವೇರಿತು.

ಚಿತ್ರೀಕರಣಕ್ಕೆ ಚಾಲನೆ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ಯಾವುದೇ ಭಾಷೆ, ಸಾಹಿತ್ಯ ಬೆಳವಣಿಗೆ ಕಾಣಬೇಕಾದರೆ ಅದಕ್ಕೆಸಿನೆಮಾ ಕೊಡುಗೆಯೂ ಮಹತ್ತರ. ಈ ನಿಟ್ಟಿನಲ್ಲಿ ಕೋಸ್ಟಲ್‌ವುಡ್‌ ಸಿನೆಮಾ ಗಳು ತುಳು ಭಾಷಾ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಹರೀಶ್‌ ಶೇರಿಗಾರ್‌ ಸಿನೆಮಾ ಮುಹೂರ್ತಕ್ಕೆ ಚಾಲನೆ ನೀಡಿದರು. ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಸಿಪಿಎಂ ಹಿರಿಯ ಮುಖಂಡ ಕೆ.ಆರ್‌. ಶ್ರೀಯಾನ್‌, ಲಕುಮಿ ತಂಡದ ಮುಖ್ಯಸ್ಥ ಕಿಶೋರ್‌ ಡಿ. ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ರಿಚಾರ್ಡ್‌ ಕ್ಯಾಸ್ಟಲಿನೋ, ವೈದ್ಯ ಡಾ| ಕೆ.ವಿ. ದೇವಾಡಿಗ, ಶಿಕ್ಷಣ ತಜ್ಞ ಡಾ| ದೇವರಾಜ್‌ ಉಪಸ್ಥಿತರಿದ್ದರು.

ನಿರ್ದೇಶಕ ಸೂರಜ್‌ ಶೆಟ್ಟಿ ಮಾತನಾಡಿ, ಪೃಥ್ವಿ ಅಂಬರ್‌ ನಾಯಕ ನಟಗಾಗಿ, ನವ್ಯ ಪೂಜಾರಿ ನಾಯಕಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ ನಟ ಅನಂತ್‌ನಾಗ್‌ ಇಂಗ್ಲಿಷ್‌ ಕಲಿಸುವ ಟ್ಯುಟೋರಿಯಲ್‌ ಶಿಕ್ಷಕರಾಗಿ ನಟಿಸಲಿದ್ದಾರೆ. ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರು, ವಿಸ್ಮಯ ವಿನಾಯಕ, ದೀಪಕ್‌ ಪಾಣಾಜೆ, ಸಂದೀಪ್‌ ಶೆಟ್ಟಿ ಮನಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮಕುಂಜ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ ನೀಡಲಿದ್ದು, ಕೃಷ್ಣ ಸಾರಥಿ ಸಿನೆಮಾಟೋಗ್ರಫರ್‌, ಮನು ಸೇದ್ಗರ್‌, ಸಾಹಿತ್ಯ ಶಶಿರಾಜ್‌ ಕಾವೂರು, ಅರ್ಜುನ್‌ ಲೂಯಿಸ್‌ ನೀಡಲಿದ್ದಾರೆ ಎಂದರು.


Share