ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನೆಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ ಚಂದ್ರ ದೇವಾಡಿಗ ತೇರ್ಗಡೆ

ಬಿಜೂರು: ಸಾಲಿಮಕ್ಕಿ ಬಿಜೂರಿನ ನಾರಾಯಣ ದೇವಾಡಿಗರ ಮಗ ಚಂದ್ರ ದೇವಾಡಿಗ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನೆಡೆಸಿದ ಸಿ ಎ ಅಂತಿಮ ಪರೀಕ್ಷೆಯಲ್ಲಿ  ತೇರ್ಗಡೆ ಹೊಂದಿರುತ್ತಾರೆ.

ಇವರು ಬಿಜೂರಿನ ಸಾಲಿಮಕ್ಕಿಯ ಓಣಿಮನೆ ನಾರಾಯಣ ದೇವಾಡಿಗ ಹಾಗೂ ನಾಗಮ್ಮ ದೇವಾಡಿಗ ದಂಪತಿಯ ಪುತ್ರ.

ಚಂದ್ರ ದೇವಾಡಿಗ  ಪ್ರಾಥಮಿಕ ಶಿಕ್ಷಣವನ್ನು ಸಾಲಿಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜ್ ಉಪ್ಪುಂದದಲ್ಲಿ ಮುಗಿಸಿರುತ್ತಾರೆ. ಭಂಡಾರ್ಕಾರ್ಸ್ ಕಾಲೇಜ್ ಕುಂದಾಪುರದಲ್ಲಿ ಇವರು ಪದವಿಯನ್ನು ಗಳಿಸಿ ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಸ್ವಂತ ಪ್ರಯತ್ನದಿಂದ ಸಾಧನೆ ಮಾಡಿರುತ್ತಾರೆ. ಆರ್ಟಿಕಲ್ ಟ್ರೈನಿಂಗ್ ಶಿಪ್ ಇವರು ಗಣೇಶ್ ಕಾಮತ್ ಅಸೋಸಿಯೇಟ್ಸ್ ನಲ್ಲಿ ನೆಡೆಸಿದ್ದಾರೆ.

ಇವರಿಗೆ ಹಾರ್ಧಿಕ ಅಭಿನಂದನೆ ಹಾಗೂ ಶುಭ ಹಾರೈಕೆಗಳು.


Share