ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಕೆ.ದೇವರಾಜ್ ರಿಗೆ ಸನ್ಮಾನ

ಮಂಗಳೂರು: ಪುರಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಏರ್ಪಡಿಸಿದ್ದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿದ ಸಾಧಕರನ್ನು ತಾ.31-01-2019 ರಂದು ಸನ್ಮಾನಿಸಲಾಯಿತು. 

ಶಿಕ್ಷಣ ರಂಗದಲ್ಲಿ ತಮ್ಮ ಕೊಡಿಗೆಗಾಗಿ ಡಾ.ಕೆ.ದೇವಾರಾಜ್  ಹಾಗೂ ಇನ್ನಿತರರು ಸನ್ಮಾನಗೊಂಡ ಗಣ್ಯರು.

ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಶ್ವಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ, ಹರಿಕೃಷ್ಣ ಪುನರೂರು, ನೀಲಾವರ ಸುರೇಂದ್ರ ಅಡಿಗ, ಅಮರನಾಥ ಶೆಟ್ಟಿ, ಪ್ರೊ| ಎಂ.ಬಿ. ಪುರಾಣಿಕ್‌, ಡಾ.ವಿವೇಕ್ ರೈ,  ಎ.ಜೆ. ಶೆಟ್ಟಿ, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಆಶಯ ಭಾಷಣ ಮಾಡಿದರು. ಪೊಳಲಿನಿತ್ಯಾನಂದ ಕಾರಂತ ಅಭಿನಂದನ ಭಾಷಣ ಮಾಡಿದರು. ವಿದ್ವತ್‌ ಸಮ್ಮಾನ, ಕನ್ನಡ ಸಿರಿ ಗೌರವ ಪ್ರದಾನ ನೆರವೇರಿತು.


Share