ಮುದ - ಮನರಂಜನೆ ನೀಡಿದ ನವೋದಯ ಸಂಘ ®ಬೆಂಗಳೂರು ವಾರ್ಷಿಕ ಕ್ರೀಡೋತ್ಸವ

ಬೆಂಗಳೂರು: ದೇವಾಡಿಗ ಸಮಾಜ ಭಾಂದವರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವವನ್ನು ದಿನಾಂಕ 03/02/2019 ರಂದು ಬೆಂಗಳೂರಿನ ವಿಶ್ವವಿದ್ಯಾನಿಲಯ ದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡೋತ್ಸವ ದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಸಮಾಜ ಭಾಂಧವರು ಭಾಗವಹಿಸಿದ್ದರು.  

ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜ ಭಾಂಧವರ ಸಮಾಕ್ಷಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರು ಮತ್ತು ಕೆಂಪೇಗೌಡ ಪ್ರಶಸ್ತಿ ವಿಜೇತೆ,ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಸ್ನೇಹಾ ಪಿ.ಜೆ ಯವರು ಈ ಕ್ರೀಡಾ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗಣ್ಯ ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸ್ಪರ್ಧಿಗಳ ಕೈಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ವಯಸ್ಸಿನ ಮಿತಿಗೆ ಅನುಗುಣವಾಗಿ ಹತ್ತು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್, ರನ್ನಿಂಗ್ ರೇಸ್, ಬ್ಯಾಡ್ಮಿಂಟನ್, ಶಾಟ್ ಪುಟ್, ಡಿಸ್ಕಸ್ ,ಥ್ರೊ ಬಾಲ್... ಇತ್ಯಾದಿ ಸ್ಪರ್ಧೆಯಲ್ಲಿ ಸದಸ್ಯರು ಉತ್ತಮವಾಗಿ ಭಾಗವಹಿಸಿ ತಮ್ಮ ಕ್ರೀಡಾಸಕ್ತಿಯನ್ನು ತೋರಿಸಿದರು. 

ಕ್ರೀಡೋತ್ಸವ ದಲ್ಲಿ ಸಣ್ಣ ಮಕ್ಕಳ ಆಟಗಳು ಮನಸಿಗೆ ಮುದ ನೀಡಿದರೆ, ಹಿರಿಯರ ಸ್ಪರ್ಧೆಗಳು ಮನರಂಜಿಸಿತು ಹಾಗೂ ಯುವ ಸ್ಪರ್ಧಿಗಳ ಆಟಗಳು ಯುವಕರಲ್ಲಿ ಹುರುಪು ಹೆಚ್ಚಿಸಿತು.

ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯಾವುದೇ ಕೊರತೆ ಇಲ್ಲದೆ ಸಂಘದ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ರವರು ಮಾಡಿದ್ದರು.ಕ್ರೀಡೋತ್ಸವದ ಅಂತಿಮ ಘಟ್ಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಕ್ರೀಡೋತ್ಸವವನ್ನು ಮಾಡಲು ಸ್ಥಳಾವಕಾಶ ನೀಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರಿಗೂ ಮತ್ತು ಕ್ರೀಡಾ ಕೂಟಕ್ಕೆ ಸಹಕರಿಸಿದ ಫ್ಯೂಚರ್ ಟ್ಯಾಬ್ ಮಾಲಿಕರಾದ ಶ್ರೀ ರಿತೇಶ್ ದೇವಾಡಿಗ, ಸಾಗರ್ ಇಂಡಸ್ಟ್ರೀಸ್ ಮಾಲಿಕರಾದ ಸತೀಶ್ ದೇವಾಡಿಗ , ಹೋಟೆಲ್ ಗ್ರೀನ್ ಗಾರ್ಡೇನಿಯದ ಮಾಲಿಕರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ಹಾಗೂ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಸಮಾಜ ಭಾಂದವರಿಗೂ ಧನ್ಯವಾದಗಳು.

ವರದಿ :
ವಿಜಿ ಕಾಪಿಕಾಡ್
ಮಾಹಿತಿ ಕಾರ್ಯದರ್ಶಿ.
ದೇವಾಡಿಗ ನವೋದಯ ಸಂಘ ® ಬೆಂಗಳೂರು.


Share