ಬಿಜೂರು: ಶ್ರೀ ನಂದಿಕೇಶ್ವರ ದೈವಸ್ಥಾನ ವಾರ್ಷಿಕ ಭಜನೆ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪುಂದ : ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನ ಇದರ ವಾರ್ಷಿಕ ಭಜನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ನಡೆಯಿತು. ಪ್ರಮೋದ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಪುರಾಣ ಪ್ರಸಿದ್ಧ ಶ್ರೀ ನಂದಿಕೇಶ್ವರ ದೈವಸ್ಥಾನದ ವಾರ್ಷಿಕೋತ್ಸವ, ಏಕಾಹ ಅಖಂಡ ಭಜನ ಕಾರ್ಯಕ್ರಮ ಹಾಗೂ ಗೆಂಡ ಸೇವೆ ಕಾರ್ಯಕ್ರಮಗಳು ಎ.14ರಿಂದ 16ರ ವರೆಗೆ ನಡೆಯಲಿದೆ.

ಈ ಸಂದರ್ಭ ದೈವಸ್ಥಾನ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ದೇವಾಡಿಗ ಹಾಗೂ ಸದಸ್ಯರು, ಸ್ಥಳೀಯ ಭಕ್ತಾಧಿಗಳು ಉಪಸ್ಥಿತರಿದ್ದರು.

ಎ.14ರಂದು ವೇದಮೂರ್ತಿ ಸುಬ್ಬಣ್ಣ ಭಟ್ ಸಹಭಾಗಿತ್ವದಲ್ಲಿ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವ ನಡೆಯಲಿದೆ. ಎ.15ರಂದು ಬೆಳಗ್ಗೆ ಗಂಟೆ 9.15ಕ್ಕೆ ಪ್ರದೀಪ ಸ್ಥಾಪನೆಯೊಂದಿಗೆ ಏಕಹಾ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆ 8ಕ್ಕೆ ಹಿಂದೂಸ್ತಾನಿ ಗಾಯಕ ಅನಂತ ಕುಲಕರ್ಣಿ ಇವರಿಂದ ಭಜನ್ ಸಂಧ್ಯಾ ಹಾಗೂ ರಾತ್ರಿ ಗಂಟೆ 11ಕ್ಕೆ ಚಂದ್ರ ಬಂಕೇಶ್ವರ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಎ.16ರಂದು ಬೆಳಗ್ಗೆ 11.15ಕ್ಕೆ ಪ್ರದೀಪ ವಿರ್ಸಜನೆಯೊಂದಿಗೆ ಭಜನಾ ಮಂಗಲೋತ್ಸವ ನಡೆಯಲಿದೆ. ಮಧ್ಯಾಹ್ನ ಗಂಟೆ 3ಕ್ಕೆ ದಕ್ಷ ಯಜ್ಞ ಯಕ್ಷಗಾನ ನಡೆಯಲಿದ್ದು, ರಾತ್ರಿ ಗಂಟೆ 8ಕ್ಕೆ ಗೆಂಡಸೇವೆ ನಡೆಯಲಿದೆ. ಕಾರ್ಯಕ್ರಮದ ಮೂರು ದಿನವು ಅನ್ನಸಂತರ್ಪಣೆ ನಡೆಯಲಿದೆ.


Share