ದೇವಾಡಿಗ ಸಂಘ ಮುಂಬೈ ಮಹಿಳೆಯವರಿಂದ "ತಾಯಿ ಮಗಳು" ಸೌಂದರ್ಯ ಸ್ಪರ್ದೆ ಹಾಗೂ  ಅರಸಿನ ಕುಂಕುಮ ಕಾರ್ಯಕ್ರಮ

ಮುಂಬೈ:  ಮಹಿಳೆ ಒಂದು ಸಮಾಜದ ಅವಿಭಾಜ್ಯ ಅಂಗ,  ಎಲ್ಲಾ ಕ್ಷೇತ್ರದಲ್ಲೂ  ತನ್ನ ನಿಪುಣತೆಯನ್ನು  ತೋರಿಸಿದವಳು, ವಿದ್ಯೆಯೇ  ಎಲ್ಲಾ ಸಮಸ್ಯೆಗಳ  ನಿವಾರಣೆಯ ದಾರಿ  ದೀಪ , ಅರಸಿನ ಕುಂಕುಮ ಕಾರ್ಯಕ್ರಮಗಳನ್ನು ಸಂಯೋಜಿಸಿ  ಸಾವಿತ್ರಿ ಬಾಯಿ ಫುಲೆಯವರು ಮಹಿಳೆಯರನ್ನು ಒಗ್ಗೂಡಿಸಿ ಸ್ವಾತಂತ್ರ ಚಳುವಳಿಯ  ಬದ್ರ ಬುನಾದಿಯನ್ನು  ಹಾಕಿರುವರು.  ನಮ್ಮ ಮಹಿಳೆಯರು  ನಮ್ಮ ಸಮಾಜದ  ಏಳಿಗೆಗಾಗಿ  ಶ್ರಮಿಸಬೇಕು ಎಂದು ದೇವಾಡಿಗ ಸಂಘ ಮಹಿಳಾ ವಿಭಾಗದ ಅರಸಿನ ಕುಂಕುಮದ ಕಾರ್ಯಕ್ರಮಕ್ಕೆ  ಅಥಿತಿಯಾಗಿ ಆಗಮಿಸಿದ  ಶ್ರೀಮತಿ ಹರ್ಷ ಉಲ್ಲಾಳ್  ಸಭೆಯನ್ನು ಉದ್ದೇಶಿಸಿ ನುಡಿದರು.

ಈಗಿನ ಯುವತಿಯರು ತಮ್ಮ ವಿದ್ಯಾಭ್ಯಾಸದ ಕಡೆ  ಗಮನವಿಟ್ಟು ತಮ್ಮ ಗುರಿ ತಲುಪುವ ತನಕ ಛಲ ಬಿಡಧೆ  ಈಗಿನ ಎಲ್ಲಾ ಸವಲತ್ತುಗಳನ್ನು  ಪಡೆದುಕೊಂಡು ಭವಿಷ್ಯದಲ್ಲಿ  ಮುಂದುವರಿಯಬೇಕು ಎಂದು  ಅತಿಥಿಯಾಗಿ ಆಗಮಿಸಿದ  ಡಾಕ್ಟರ್ ಆರತಿ ಉಲ್ಲಾಳ್ ರವರು ಕರೆ ನೀಡಿದರು.

ಮಹಿಳಾ ವಿಭಾಗದ ವತಿಯಿಂದ ಸಂಘದ ಅಧ್ಯಕ್ಷರಾದ  ಶ್ರೀ ರವಿ ಎಸ್ ದೇವಾಡಿಗರನ್ನು ಸನ್ಮಾನಿಸಲಾಯಿತು.  

ಅಪಾರ ಸಂಖ್ಯೆಯಲ್ಲಿ  ನೆರೆದಿರುವ ಮಹಿಳೆಯರು  ಮತ್ತು ಯುವ ಸದ್ಯಸರನ್ನು  ನೋಡಿ ಸಂತೋಷ ವೆನಿಸುತ್ತದೆ. ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಿರುವ ಮಹಿಳಾ ವಿಭಾಗದ  ಕಾರ್ಯಾದ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿ ಮತ್ತು ಅವರ ಟೀಮ್ ಗೆ ಶುಭ ಕೋರಿದರು.  ಅತಿಥಿಯಾಗಿ ಆಗಮಿಸಿದ  ಶ್ರೀಮತಿ ಪ್ರಮೀಳಾ ಪ್ರವೀಣ್ , ಡಾಕ್ಟರ್ ಆರತಿ ಉಲ್ಲಾಳ್  ಮತ್ತು ಶ್ರೀಮತಿ ಹರ್ಷ ಉಲ್ಲಾಳ್  ಅವರನ್ನು ಮಹಿಳಾ ವಿಭಾಗದವರು  ಸನ್ಮಾನಿಸಿದರೆ  ಶ್ರೀಮತಿ ಪ್ರಮೀಳಾ ಶೇರಿಗಾರ್, ಶ್ರೀಮತಿ ಲತಾ ಶೇರಿಗಾರ್ ಮತ್ತು  ಶ್ರೀಮತಿ ಸುರೇಖಾ ದೇವಾಡಿಗರು  ಅತಿಥಿಗಳ ಪರಿಚಯ  ಸಭೆಗೆ ನೀಡಿದರು.

ಮಾಜಿ ಕಾರ್ಯಾದ್ಯಕ್ಷೆಯಾರಾದ  ಶ್ರೀಮತಿ ಶಾಂತ ಜಿ ಮೊಯಿಲಿ , ಶ್ರೀಮತಿ ಪ್ರಫುಲ್ಲ ದೇವಾಡಿಗ ಮತ್ತು ಶ್ರೀಮತಿ ಭಾರತಿ ನಿಟ್ಟೇಕರ್ ರವರ ಅಪ್ರತಿಮ ಸಹಾಯಕ್ಕಾಗಿ ಶಾಲು ಮತ್ತು ಸ್ಮರಣಿಕೆ ಗಳನಿತ್ಟು  ಸನ್ಮಾನಿಸಲಾಯಿತು

ಸಾಧಕರಾದ ಪ್ರೇಕ್ಷಾ ದೇವಾಡಿಗ, ವಿಜೇತ ದೇವಾಡಿಗ , ಮಮತಾ ಶೇರಿಗಾರ್, ರೇಖಾ ದೇವಾಡಿಗ,  ಶ್ರೀಮತಿ ಅಶ್ವಿನಿ ದೇವಾಡಿಗ,  ಪೂಜಾ ಎನ್ ದೇವಾಡಿಗ,  ವೀಣಾ ದೇವಾಡಿಗರನ್ನು ಸನ್ಮಾನಿಸಲಾಯಿತು.  ಶ್ರೀಮತಿ ವನಿತಾ ರವಿ ದೇವಾಡಿಗರನ್ನು  ಶ್ರೀಮತಿ ಜಯಂತಿ ಮೊಯಿಲಿಯವರು ಪುಷ್ಪ ಗೌರವಾನಿತ್ತು  ಸನ್ಮಾನ ಮಾಡಿದರು.   ಸಮನ್ವಯ ಸಮಿತಿಯ  ಕಾರ್ಯಾದ್ಯಕ್ಷ್ಯರಾದ  ಶ್ರೀಮತಿ ಅಂಬಿಕಾ ದೇವಾಡಿಗ, ಶ್ರೀಮತಿ ಲಕ್ಷ್ಮಿ ದೇವಾಡಿಗ ಶ್ರೀಮತಿ ಮಮತಾ ದೇವಾಡಿಗ, ಶ್ರೀಮತಿ ಸರೋಜಿನಿ ದೇವಾಡಿಗ  ಶಕುಂತಲಾ ಶೇರಿಗಾರ್, ರೇಖಾ ದೇವಾಡಿಗರನ್ನು  ಸನ್ಮಾನಿಸಲಾಯಿತು. 

ವಿವಿಧ ಸಮನ್ವಯ ಸಮಿತಿಯು ಜಾನಪದ ನೃತ್ಯ , ತುಳುನಾಡ ವೈಭವ,  ಮುಂತಾದ ಅನೇಕ ಸಾಂಸ್ಕ್ರತಿಕ  ಕಾರ್ಯಕ್ರಮಗಳನ್ನು ಸಾದರ ಪಡಿಸಿದರು.   ಅತ್ಯಂತ ಆಕರ್ಷಣೀಯ  ಕಾರ್ಯಕ್ರಮವಾದ "ತಾಯಿ ಮಗಳು" ಸೌದರ್ಯ ಸ್ಪರ್ಧೆ ಬಂದ ಸಭಿಕರ ಮನ ಸೆಳೆದಿತ್ತು. ರೆಂಪ್ ವಾಕ್ , ಟ್ರಡೀಶನಲ್ ಡ್ರೆಸ್ ಕೆಟೆಗರೀ, ಜನರಲ್ ನಾಲೆಜ್  ಹೀಗೆ ಸುಮಾರು ನಾಲ್ಕು ಸುತ್ತುಗಳನ್ನು  ಒಳಗೊಂಡಿತ್ತು.  ಫರ್ಸ್ಟ್ ರನ್ನರ್ ಅಪ್ ಆಗಿ  ಶ್ರೀಮತಿ ಅಂಬಿಕಾ ಜೆ ದೇವಾಡಿಗ  ಮತ್ತು ಕುಮಾರಿ ಕ್ಷಿತಿ ಜೆ ದೇವಾಡಿಗರಿಗೆ ಲಬಿಸಿದರೆ  ಸ್ಪರ್ದೆಯ ವಿಜೇತರಾಗಿ  ಶ್ರೀಮತಿ ಕಲಾ ಜಿ ಶೇರಿಗಾರ್ ಮತ್ತು ಕುಮಾರಿ ಸಿದ್ದಿ ಜಿ ಸೇರಿಗಾರ್ ಸೌದರ್ಯ ಸ್ಪರ್ದೆಯ ಕಿರೀಟವನ್ನು ತಮ್ಮದಾಗಿಸಿಕೊಂಡರು.  

ಅಧ್ಯಕ್ಷೀಯ  ಭಾಷಣದಲ್ಲಿ  ಮಹಿಳಾ ಕಾರ್ಯಾದ್ಯಕ್ಷೆ  ಶ್ರೀಮತಿ ಜಯಂತಿ ಮೊಯಿಲಿಯವರು ಸಂಘದ  ಅಧ್ಯಕ್ಷರು , ಕಾರ್ಯಕಾರಿ ಸಮಿತಿ ಸಮನ್ವಯ ಸಮಿತಿ ಮತ್ತು  ಎಲ್ಲಾ ಸಮಿತಿಯವರ ಸಹಕಾರದಿಂದ ಉತ್ತಮವಾಗಿ  ಮಹಿಳಾ ವಿಭಾಗದ ಎಲ್ಲಾ ಜವಾಬ್ದಾರಿಯನ್ನು  ನಿರ್ವಹಿಸಲು ಸಾದ್ಯವಾಯಿತು ಎಂದು ಹೇಳಿ ಎಲ್ಲಾ ಮಹಿಳೆಯರಿಗೆ ಶುಭ ಕೋರಿದರು.

ಶ್ರೀಮತಿ ಕುಸುಮ ದೇವಾಡಿಗ ಮತ್ತು  ಶ್ರೀಮತಿ ನಳಿನಿ ದೇವಾಡಿಗರು ಪ್ರಾರ್ಥಿಸಿದರೆ,  ಅರಸಿನ ಕುಂಕುಮದ ಮಹತ್ವವನ್ನು  ರಂಜಿನಿ ಮೊಯಿಲಿಯವರು  ವಿವರಿಸಿದರು.   ಕಾರ್ಯಕ್ರಮದ ನಿರೂಪಣೆ  ದನ್ಯವಾದ  ಸಮರ್ಪಣೆ ಶ್ರೀಮತಿ ಪೂರ್ಣಿಮಾ ದೇವಾಡಿಗ ಮತ್ತು ಪ್ರಮೀಳಾ ಶೇರಿಗಾರ್ ಮಾಡಿದರು.


Share