ಫೆ. 17 ರಿಂದ 19 ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ (Video)

ಉಡುಪಿ: ಬಾರ್ಕೂರಿನಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ದೇವಿ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಪ್ರಥಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಫೆಬ್ರವರಿ 17 ರಿಂದ 19ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು ವರ್ಧಂತ್ಯುತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೂಡ ನಡೆಯಲಿದೆ ಎಂದು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ರಿಜಿಸ್ಟರ್ ಬಾರ್ಕೂರು ಇದರ ಅಧ್ಯಕ್ಷರಾದ ಅಣ್ಣಯ್ಯ ಬಿ ಸೇರಿಗಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ವರ್ಧಂತ್ಯುತ್ಸವದ ಪ್ರಯುಕ್ತ ದಿನಾಂಕ 17ರಂದು ದೇವಾಡಿಗ ಸಮಾಜದ ಅಭಿವೃದ್ಧಿಗಾಗಿ ಮತ್ತು ಸಕಲ ಸಂಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ನಮ್ಮ ನಡಿಗೆ ಅಮ್ಮನೆಡೆಗೆ ಎಂಬ ಘೋಷಣೆಯಡಿ ಪಾದಯಾತ್ರೆ ನಡೆಯಲಿದೆ ಈ ಪಾದಯಾತ್ರೆಯು ಅಂಬಾಗಿಲು ವೃತ್ತ ಕಲ್ಯಾಣಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಬ್ರಹ್ಮವರ ಮಾರ್ಗವಾಗಿ ಬಾರ್ಕುರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಸಂಪನ್ನಗೊಳ್ಳಲಿದ್ದು ಇದೇ ದಿನ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇವಾಡಿಗ ಹಾಗೂ ಮುಂಬೈ ನಾಸಿಕ್ ಪುಣೆ ಇಲ್ಲಿನ ಸಂಘಗಳ ಸದಸ್ಯರುಗಳುಮತ್ತು ಸಮಾಜ ಬಾಂಧವರ ಜೊತೆ ಸೇರಿ ವೈಭವದ ಹಸಿರು ಹೊರೆಕಾಣಿಕೆ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯನ್ನುದ್ದೇಶಿ ಸುತ್ತ ಎರಡನೇ ದಿನವಾದ 18 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ದೇವಾಡಿಗ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಮಂಗಳವಾರ ಪ್ರಯುಕ್ತ ಸಾಮೂಹಿಕ ಚಂಡಿಕಾಯಾಗ ವಧು-ವರರ ನೋಂದಣಿ ಮತ್ತು ವಧು-ವರ ಅನ್ವೇಷಣಾ ತುಲಾಭಾರ ಸೇವೆ ಅನ್ನಸಂತರ್ಪಣೆ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನಾರ್ಧನ ಬಿ ದೇವಾಡಿಗ ಉಪಾಧ್ಯಕ್ಷರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ,ನರಸಿಂಹ ಬಿ ದೇವಾಡಿಗ ಉಡುಪಿ ಪ್ರಧಾನ ಕಾರ್ಯದರ್ಶಿ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ , ಗಣೇಶ ದೇವಾಡಿಗ ಅಂಬಲಪಾಡಿ ಗೌರವ ಕಾರ್ಯದರ್ಶಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಾರ್ಕುರು, ಜನಾರ್ದನ ಪಡುಪಣಂಬೂರು ಆಡಳಿತಾಧಿಕಾರಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

~ ವರದಿ :ಪಲ್ಲವಿ ಸಂತೋಷ ಉಡುಪಿ


Share