ಬಾರ್ಕೂರು ಏಕನಾಥೇಶ್ವರಿ ದೇಗುಳದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ: ' ನಮ್ಮ ನಡಿಗೆ ಅಮ್ಮ ನೆಡೆಗೆ ' ಹೊರೆಕಾಣಿಕೆ

ಬಾರ್ಕೂರು: ದೇವಾಡಿಗ ಸಮಾಜದ ಅಭಿವೃದ್ಧಿ, ಸಂಕಷ್ಟ ಗ್ರಹಾದೋಷ ನಿವಾರಣೆಗಾಗಿ ಆಯೋಜಿಸಿದ್ದ ನಮ್ಮ ನಡಿಗೆ ಅಮ್ಮ ನೆಡೆಗೆ ಯಶಸ್ವಿಯಾಗಿ ನಡೆಯಿತು. ಸಂಘದ ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಅದೇ ದಿನ ಸಂಜೆ ಸುಮಾರು 40 ವಾಹನಗಳಲ್ಲಿ ವಿವಿಧ ದೇವಾಡಿಗ ಸಂಘಗಳು ದೇವಿಗೆ ಅರ್ಪಿಸಲಿದ್ದ‌ ಹಸಿರು ಹೊರೆಕಾಣಿಕೆ ಮೆರವಣಿಗೆಯು ಬಾರ್ಕೂರು ಸೇತುವೆ ಯಿಂದ ಪ್ರಾರಂಭಗೊಂಡು ಕಲ್ಚಪ್ರದಿಂದ ಪೂರ್ಣ ಕುಂಭ ಕಲಶದೊಂದಿಗೆ ದೇವಾಸ್ಥಾನವನ್ನು ಸೇರಿತು. ಕಹಳೆ, ಬ್ಯಾಂಡ್ ನೊಂದಿಗೆ ಸಾಗಿದ ಮೆರವಣಿಗೆಯು ಸುಮಾರು  ಜಿಲ್ಲೆಯ ಹಾಗೂ ಹೊರ‌ಜಿಲ್ಲೆಗಳಿಂದ ಆಗಮಿಸಿದ್ದ ಹಸಿರುವಾಣಿ ಯನ್ನು ವಾಹನಗಳಲ್ಲಿ ತುಂಬಿಕೊಂಡು ಸಾಗಿತು..

ಜನಾರ್ಧನ ಬಿ ದೇವಾಡಿಗ ಉಪಾಧ್ಯಕ್ಷರು, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು; ನರಸಿಂಹ ಬಿ ದೇವಾಡಿಗ ಉಡುಪಿ ಪ್ರಧಾನ ಕಾರ್ಯದರ್ಶಿ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್;  ಗಣೇಶ ದೇವಾಡಿಗ ಅಂಬಲಪಾಡಿ, ಗೌರವ ಕಾರ್ಯದರ್ಶಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಾರ್ಕುರು; ಜನಾರ್ದನ ಪಡುಪಣಂಬೂರು ಆಡಳಿತಾಧಿಕಾರಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಮತ್ತಿತರರು ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು.

~ ವರದಿ:ಪಲ್ಲವಿ ಸಂತೋಷ್ ಉಡುಪಿ.


Share