ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಹಿರಿಯ ಸಾಮಾಜಿಕ ಧುರೀಣ ಶ್ರೀ ಜಯಾನಂದ ದೇವಾಡಿಗ ಮೂಲ್ಕಿ ಭೇಟಿ

{ Mr Ashok Devadiga,Powai Mumbai; Mr Ramachandra Devadiga Shankaranarayana; Mr Ganesh Sherigar Navi Mumbai; Mr Shankar Devadiga Ankada Katte Kundapura &
Mr Satish Devadiga Karkada Kota.}

ಮಂಗಳೂರು: ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ದೇವಾಡಿಗ ಸಮಾಜದ ಹಿರಿಯ ಸಾಮಾಜಿಕ ಧುರೀಣ ಶ್ರೀ ಜಯಾನಂದ ದೇವಾಡಿಗ ಮೂಲ್ಕಿ (ಮಾಜಿ ಪ್ರಧಾನ ಕಾರ್ಯದರ್ಶಿ ದೇವಾಡಿಗ ಸಂಘ ಮಂಗಳೂರು) ಅವರನ್ನು ಅವರ ಸ್ವಗ್ರಹ ಪಡೀಲ್ ನಲ್ಲಿ ಅವರ ಮನವಿಯ ಮೇರೆಗೆ ತಾ.೧೮-೦೨-೨೦೧೯ರಂದು  ಭೇಟಿ ನೀಡಿ ಆಶೀರ್ವಾದ ಪಡೆದರು. ಒಂದು ತಿಂಗಳ ಹಿಂದೇ ಶ್ರೀಯುತರು ಬಳಗದ ಕಾರ್ಯವೈಖರಿಯನ್ನು ನೋಡಿ ಸೇವಾದಾರರೊಬ್ಬರಿಗೇ ಫೋನಾಯಿಸಿ ಸೇವಾದಾರರನ್ನು ನೋಡುವ ಇಚ್ಛೇಯನ್ನು ವ್ಯಕ್ತ ಪಡಿಸಿದ್ದರು. ಹಾಗಾಗಿ ನಿನ್ನೇ ಸೇವಾದಾರರು ಅವರ ಮನೆಗೆ ತೆರಳಿ ಅವರಿಂದ ಆಶೀರ್ವಾದ ಪಡೆದರು.

ದೇವಾಡಿಗರ ವಿಶ್ವಕೋಶ ಎನಿಸಿಕೊಂಡಿರುವ ಶ್ರೀ ಜಯಾನಂದ ದೇವಾಡಿಗರು ಉತ್ತಮ ಮಾರ್ಗದರ್ಶನ ನೀಡಿದ್ದಲ್ಲದೇ ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು. ದೇವಾಡಿಗ ಸಂಘಗಳ ಇತಿಹಾಸ ಮತ್ತು ಅವರು ನಡೆದು ಬಂದ ಜೀವನದ ಬಗ್ಗೇ ಶೀಘ್ರದಲ್ಲಿಯೇ ಅವರ ಪುಸ್ತಕ ಪ್ರಕಾಶನಗೊಳ್ಳುವುದಾಗಿ ತಿಳಿಸಿದರು. ದೇವಾಡಿಗ ಅಕ್ಷಯ ಕಿರಣ ಕಾರ್ಯವೈಖರಿ ಯ ಬಗ್ಗೇ ಸಂತಸ ವ್ಯಕ್ತ ಪಡಿಸಿದರಲ್ಲದೇ ಬಳಗ ಮುಂದಿನ  ದಿನಗಳಲ್ಲಿ ಶಕ್ತಿಯುತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.  


Share