ದಿ| ಕೆ. ಗೋಪಾಲ ಮೊಯ್ಲಿ ಅವರಿಗೆ ಅವರಿಗೆ ಸಂತಾಪ ಸೂಚಕ ಸಭೆ (Updated)

ಮಂಗಳೂರು : ಇತ್ತೀಚೆಗೆ ನಿಧನ ಹೊಂದಿದ ಮಂಗಳಾ ಆಂಗ್ಲ ಮಾಧ್ಯಮ ಶಾಲಾ ಸ್ಥಾಪಕ ಸಂಚಾಲಕ ದಿ| ಕೆ. ಗೋಪಾಲ ಮೊಯ್ಲಿ ಅವರಿಗೆ ಸಂತಾಪ ಸೂಚಕ ಸಭೆ ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಮಂಗಳಾ ಆಂಗ್ಲ ಮಾಧ್ಯಮ ಶಾಲಾ ವತಿಯಿಂದ ಜರುಗಿತು.

ಗೋಪಾಲ ಮೊಯ್ಲಿ ಅವರು ಸಂಚಾಲಕರಾಗಿ ಶಾಲಾ ಬೆಳವಣಿಗೆಯಲ್ಲಿ ಮಾರ್ಗದರ್ಶನ ನೀಡಿದರು ಎಂದು ಸಹ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ತಿಳಿಸಿದರು.

ಸಂಚಾಲಕ ಡಾ| ಸುಂದರ ಮೊಯ್ಲಿ ಮಾತನಾಡಿ, ದಿ| ಗೋಪಾಲ ಮೊಯ್ಲಿಯವರು ಶಿಸ್ತು ಮತ್ತು ಸಾಧನಾಶೀಲ ಗುಣ ಅದ್ವಿತೀಯ.  ಒರ್ವ ವಿದ್ಯಾರ್ಥಿಯಿಂದ ಪ್ರಾರಂಬಿಸಲ್ಪಟ್ಟ ಶಾಲೆಯಲ್ಲಿ 400 ವಿದ್ಯಾರ್ಥಿಗಳವರೆಗೆ ಏರಿಸಿದ ಅವರು ಸದಾ ಆದರ್ಶಪ್ರಾಯರು ಎಂದರು. 

ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಪ್ರ. ಕಾರ್ಯದರ್ಶಿ ಶಿವಾನಂದ ಮೊಯ್ಲಿ ಮಾತನಾಡಿ ಗೋಪಾಲ ಮೊಯ್ಲಿಯವರು ಶಿಕ್ಷಂ ಕ್ಷೇತ್ರದಲ್ಲಿ ಗಳಿಸಿದ ಅಪಾರ ಅನುಭದ ಕೂಸಾಗಿ ಮಂಗಳ ಶಾಲೆಯು ಸ್ಥಾಪನೆಗೊಂಡು ಜನಮನ್ನಣೆ ಗಳಿಸುತ್ತಿರುವುದು ಅವರಿಗೆ ಸಂದ ಗೌರವ ಎಂದು ಹೇಳಿದರು.

ಸಂಘದ ಅಧ್ಯಕ್ಷ ಡಾ| ದೇವರಾಜ ಕೆ. ಮಾತನಾಡಿದರು. ಉಪಾಧ್ಯಕ್ಷ ಅಶೋಕ ಮೊಯ್ಲಿ, ಜೊತೆ ಕಾರ್ಯದರ್ಶಿ ಶೀಧರ ಮೊಯ್ಲಿ ಸಂತಾಪ ಸೂಚಿಸಿದರು, ಶಾಲಾ ಅಭಿವೃದ್ದಿ ಮಂಡಳಿ ಸದಸ್ಯರಾದ ಭಾಸ್ಕರ್ ಇಡ್ಯಾ, ಕುಸುಮಾ ಎಚ್ ದೇವಾಡಿಗ, ಸುನೀಲ್ ಕುಮಾರ್, ಮುಖ್ಯೋಪಾಧ್ಯಾಯಿನಿ ಉಷಾ ಪ್ರಭಾವತಿ ಅರ್ಪಿಸಿದರು.

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ಗೋಪಾಲ ಮೊಯ್ಲಿ ನಿಧನ. ಸಂತಾಪ ಸೂಚಕ ಸಂದೇಶ (Click)


Share