ಬೈಂದೂರು: ನಾಯಕತ್ವದ ಗುಣವಿದ್ದ ಸ್ನೇಹಮಯಿ ಶ್ರೀ ಎಸ್.ಡಿ.ಹೇನಬೇರ್ ನಿಧನ

ಬೈಂದೂರು: ಊರಿಗೆ ಬಂದಾಗ ಯಾವಾಗಲೂ ಆತ್ಮೀಯತೆ ಇಂದ ಕ್ಷೇಮ ಆರೋಗ್ಯ ವಿಚಾರಿಸುವ ವ್ಯಕ್ತಿ ಶ್ರೀ ಎಸ್.ಡಿ.ಹೇನಬೇರ್. ಅವರ ಆಕಾಲಿಕ ನಿಧನರಾಗಿದ್ದಾರೆ ಎಂಬ ವರದಿ ಕೇಳಿ ದುಖ: ಹಾಗೂ ಆಘಾತವಾಗಿದೆ.

ಶ್ರೀಯುತರ ಅಂತ್ಯಸಂಸ್ಕಾರ ನಾಳೆ ಬೆಳಿಗ್ಗೆ 8.30 ಕ್ಕೆ ( 3-03-2019) ಹೇನಬೇರುವಿನಲ್ಲಿ ನಡೆಯಲಿರುವುದು ಎಂದು ತಿಳಿದು ಬಂದಿದೆ.

ಶ್ರೀ ಎಸ್.ಡಿ.ಹೇನಬೇರ್ ಅವರು ಮುಂಬೈ ದೇವಾಡಿಗ ಸಂಘದ ಸದಸ್ಯರು ಹಾಗೂ ದೇವಾಡಿಗರ ಒಕ್ಕೂಟ (ರಿ.) ಬೈಂದೂರು ಇದರ ಗೌರವ ಸಲಹೆಗಾರರಾಗಿ ನಮ್ಮ ಸಮುದಾಯದ ಏಳಿಗೆಗೆ ಸದಾ ದುಡಿದವರು.

ಅವರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಎಂದು ನಮ್ಮ ಪ್ರಾರ್ಥನೆ.

 


Share