ಡಾ| ದೇವರಾಜ್ ರಿಗೆ " ಔಟ್‍ಸ್ಟ್ಯಾಂಡಿಂಗ್ ಮ್ಯಾನೇಜ್‍ಮೆಂಟ್ ಎಜುಕೇಟರ್ "ಪುರಸ್ಕಾರ

ಮಂಗಳೂರು:  ಎಸ್.ಡಿ.ಎಂ ಆಡಳಿತಾಧ್ಯಯನ ಸಂಶೋಧನ ಸಾತ್ನಕೋತ್ತರ ಕೇಂದ್ರದ ಸ್ಥಾಪಕ, ವಿಶ್ರಾಂತ ನಿದೇಶಕ ಡಾ| ದೇವರಾಜ್ ಅವರಿಗೆ ಔಟ್‍ಸ್ಟ್ಯಾಂಡಿಂಗ್ ಮ್ಯಾನೇಜ್‍ಮೆಂಟ್ ಎಜುಕೇಟರ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಮ್ಯಾನೇಮೆಂಟ್ ಅಸೋಸಿಯೇಶನ್ನಿನ ಕಾರ್ಯದರ್ಶಿ ಡಾನ್ ಪ್ರಕಾಶ್ ಅವರು ಅಬಿನಂದನಾ ವಾಚಿಸಿದರು.

ಎಂ.ಎಂ.ಎ. ಯ ಅಧ್ಯಕ್ಷ ಟಿ.ಜಿ ಶೈಣೈ, ಪ್ರೋ| ವಿದ್ಯಾಧರ್ ಹೆಗ್ಡೆ, ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಉಪಸ್ಥಿತರಿದ್ದರು. ಕೆನರಾ ಹೈಸ್ಕೂಲ್ ಅಸೋಯೇಶನ್ ಪರ್ಯಾಯ ಕೋಶಾಧಿಕಾರಿ ಸಿ.ಎ ವಾಮನ್ ಕಾಮತ್ ಅವರು ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ಉದ್ಯಮಶೀಲತೆಯ ಅಗತ್ಯವನ್ನು ಸಮರ್ಥಿಸಿದರು.

ಕಾಲೇಜಿನ ಪ್ರಾಚಾರ್ಯ ಹಾಗೂ ಸಂಕಿರಣದ ನಿರ್ದೇಶಕಿ ಡಾ| ಕೆ.ವಿ. ಮಾಲಿನಿ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕ ಪ್ರೊ| ಹಾರ್ದಿಕ ಚೌಹನ್ ವಿಚಾರ ಸಂಕಿರಣದ ಕಲ್ಪನೆಯ ಕುರಿತಾದ ರೂಪರೇಷಗಳ ಸಹಿತ ಇಡೀ ದಿನದ ಸಂಕಿರಣದ ವರದಿ ಮಂಡಿಸಿದರು. ಕಾಲೇಜಿನ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥೆ ಹಾಗೂ ಸಂಕಿರಣದ ಸಂಯೋಜಿಕಿ ಪ್ರೊ| ಪುಷ್ಪಲತಾ ವಂದಿಸಿದರು. ವಿದ್ಯಾರ್ಥಿನಿ ದಿಶಾ ಸಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Share