ತುಳು ಚಿತ್ರರಂಗದಲ್ಲಿ ರಜನೀಶ್ ಶೈನಿಂಗ್ : ನಗಿಸಲು ಬರಲಿದ್ದಾನೆ ‘ಬೆಲ್ಚಪ್ಪ’ 

ಮಂಗಳೂರು: ಕೋಸ್ಟಲ್‍ವುಡ್‍ನಲ್ಲಿ ಸಾಕ್ಕಷ್ಟು ಹೊಸ ಹೊಸ ನಿರ್ದೇಶಕರು, ನಟ, ನಟಿಯರು ತುಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಈ ಪೈಕಿ ರಜಿನೀಶ್ ದೇವಾಡಿಗ ಕೊಂಚ ವಿಭಿನ್ನ. ಇವರು ನಿರ್ದೇಶಕರು ಮಾತ್ರ ಅಲ್ಲದೆ ಸ್ವತಃ ನಾಯಕ ನಟರಾಗಿ ತುಳು ಚಿತ್ರರಂಗದಲ್ಲಿ  ಗಮನ ಸಳೆದಿದ್ದಾರೆ. ತನ್ನ ಸಿನಿ ಜರ್ನಿ ಕುರಿತು ಮಾತನಾಡುತ್ತಾ " ಲಾ ಕಾಲೇಜು ದಿನಗಳಲ್ಲಿ ನಟನೆಯಲ್ಲಿ ಆಸಕ್ತಿ ಹೊಂದಿದ್ದೆ. ಪರಿಣಾಮ ಕಿರು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಬಳಿಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೀತಿಯಿಂದ ಪ್ರೀತಿಯಿಂದ, ಪಾಂಡುರಂಗ ವಿಠಲ ಮೊದಲಾದ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದೆ, ಧಾರಾವಾಹಿಯಲ್ಲಿ ತೋರಿದ ನಿರ್ವಹಣೆಯಿಂದಾಗಿ ಬರುವಂಥ, ಕಿಲಾಡಿ ಕಿಟ್ಟ ಮೊದಲಾದ ಸಿನಿಮಾಗಳಲ್ಲಿ ಅವಕಾಶ ಬಂತು " ಎಂದು ಹೇಳಿದ್ದಾರೆ.

"ಮೊದಲ ಬಾರಿಗೆ ಕನ್ನಡದಲ್ಲಿ ನಾನು ಹೇಮಂತ್ ಅವಳು ಸೇವಂತಿ ಚಿತ್ರದಲ್ಲಿ ನಾಯಕ ನಟನಾಗಿ  ನಟಿಸುವ ಅವಕಾಶವಾಯಿತು. ನಂತರ ನಟನೆಯ ಜತೆಗೆ ನಿರ್ದೇಶನ ಮಾಡಬೇಕು ಎಂಬ ಹಂಬಲ ಶುರುವಾಯಿತು. ಇದಕ್ಕಾಗಿ ನಿರ್ದೇಶನ ಕಲಿಕೆಯ ಕೋರ್ಸ್ ಸೇರಿಕೊಂಡೆ. ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಕಾರಣಕ್ಕೆ ಸಾಕಷ್ಟು ಕಷ್ಟಪಟ್ಟೆ ಲೈಟ್‍ಬಾಯ್ ಕೆಲಸ ಮಾಡಿದೆ. ನಂತರ ದಿನಗಳಲ್ಲಿ ಕನ್ನಡದ ಖ್ಯಾತ ನಿರ್ದೇಶಕ ರಂಗನಾಥ್ ಅವರೊಂದಿಗೆ 8 ವರ್ಷಗಳ ಕಾಲ ಸಹ ನಿರ್ದೇಶಕರಾಗಿ ದುಡಿದೆ. ಇದೇ ಅನುಭದ ಆಧಾರದಲ್ಲಿ ಕೋಸ್ಟಲ್‍ವುಡ್‍ನಲ್ಲಿ ಕೋರಿರೋಟಿ ಎಂಬ ಚಿತ್ರ ನಿರ್ದೇಶನ ಮಾಡಿದೆ. ಜತೆಗೆ ನಾಯಕ ನಟನಾಗಿಯೂ ನಟಿಸಿದೆ. ಇದಕ್ಕೆ ತುಳುನಾಡಿನ ಚಿತ್ರ ಪ್ರೇಮಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ಸಿನಿ ಪ್ರೇಮಿಗಳನ್ನು ಶ್ಲಾಘಿಸಿದರು.

ಇದೀಗ ಎರಡನೇ ತುಳು ಸಿನಿಮಾ ರೆಡಿಯಾಗುತ್ತಿದೆ. ಜಯದುರ್ಗ ಪ್ರೋಡೆಕ್ಷನ್‍ನಲ್ಲಿ ಬೆಲ್ಚಪ್ಪ ಎಂಬ ಸಿನಿಮಾ ರೆಡಿಯಾಗುತ್ತಿದೆ. ನಾನು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸ್ವತಃ ನಾಯಕ ನಟನಾಗಿ ಅಭಿನಯಿಸುತ್ತಿದೇನೆ ಸುಮಾರು 35 ಲಕ್ಷ ರೂ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತಿದ್ದು, 14ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರೋಡೆಕ್ಷನ್ ಕೆಲಸ ನಡೆಯುತ್ತಿದೆ ಎಂದರು ರಜನೀಶ್.

ನಗಿಸಲು ಬರಲಿದ್ದಾನೆ ‘ಬೆಲ್ಚಪ್ಪ’

‘ಕೋರಿ-ರೋಟಿ’ ಚಿತ್ರದ ಯಶಸ್ವಿನಲ್ಲಿರುವ ನಿರ್ದೇಶಕ ರಜಿನೀಶ ದೇವಾಡಿಗ ಅವರು ಬೆಲ್ಚಪ್ಪ ಎಂಬ ಪ್ರಯೋಗಾತ್ಮಕ ಹಾಸ್ಯಮಯ ಸಿನಿಮಾಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲೂ ಅವರೇ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದು. ಚಿತ್ರೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಜಯದುರ್ಗಾ ಪ್ರೊಡೆಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬೆಲ್ಚಪ್ಪ (ತೆಲಿಪುದೆ ಉಪ್ಪರೆಗ್ ಸಾಧ್ಯನೇ ಇದ್ದೆ) ಚಿತ್ರ ಮಣಿಪಾಲ, ಉಡುಪಿ, ಮಲ್ಪೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಇರಾದೆಯನ್ನು ಚಿತ್ರತಂಡ ಹೊಂದಿದೆ.

ಚಿತ್ರದ ಹೆಸರಿನಲ್ಲೇ ವಿಶೇಷ ಆಕರ್ಷಣೆಯಿದೆ. ಅದಕ್ಕೆ ತಕ್ಕಂತೆ ಕಥೆಯನ್ನು ಹೆಣೆಯಲಾಗಿದೆ. ಇದೊಂದು ಶೇ 100ರಷ್ಟು ಹಾಸ್ಯಮಯ ಚಿತ್ರ ಪ್ರಯೋಗಕ್ಕೂ ಅವಕಾಶ ನೀಡಲಾಗಿದೆ. ತುಳು ಪ್ರಕ್ಷಕರನ್ನು ಕೇಂದ್ರೀಕರಿಸಿಕೊಂಡು ಚಿತ್ರವನ್ನು ತಯಾರಿಸಲಾಗುತ್ತಿದೆ. ಒಬ್ಬ ವ್ಯಕ್ತಿಯ ದಿನಚರಿಯು ಸುತ್ತ ಕಥೆಯನ್ನು ಸುಂದರವಾಗಿ ಹಣೆಯಲಾಗಿದೆ ಎನ್ನುತ್ತಾರೆ ನಿರ್ದೇಶಕ ರಜನೀಶ್.

ಸುಮಾರು ರೂ 35 ಲಕ್ಷ ಬಜೆಟ್‍ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಹೊಸ ಪರಿಚಯದ ಯಶಸ್ವಿ ದೇವಾಡಿಗ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ತುಳು ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ನಾಲ್ಕು ಇಂಪಾದ ಹಾಡುಗಳು ಹಾಗೂ ಒಂದು ಸಾಹಸ ದೃಶ್ಯವನ್ನು ಚಿತ್ರವು ಒಳಗೊಂಡಿದೆ ಎಂದು ಹೇಳಿದರು. ಕೋರಿರೋಟಿ ಚಿತ್ರ ಕರಾವಳಿ ಭಾಗದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೇ ನನ್ನ ಜೀವನಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್. ಅದೇ ಉತ್ಸಾಹದಿಂದ ಮತ್ತೊಂದು ತುಳು ಚಿತ್ರಕ್ಕೆ ಕೈ ಹಾಕಿದ್ದಾನೆ. ನನ್ನ ಬಳಿ 3 ತುಳು 4 ಕನ್ನಡ ಚಿತ್ರಕಥೆಗಳಿವೆ. ತುಳು ಚಿತ್ರರಂಗಕ್ಕೆ ಇನ್ನಷ್ಟು ಕೊಡುಗೆ ನೀಡುವ ಇರಾದೆಯಿದೆ ಎನ್ನುತ್ತಾರೆ ರಜನೀಶ್.

ಹಾಲಿವುಡ್‍ನಲ್ಲಿ ಕೆಲಸ ಮಾಡಿರುವ ಲಕ್ಷ್ಮೀಶ್ ಶೆಟಿ ಈ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ. ತುಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸ್ಪಡಿ ಸೈಕಲ್ ಮತ್ತು ಸ್ಪಡಿ ಕ್ಯಾಮ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಶೇ.60ರಷ್ಟು ದೃಶ್ಯಗಳನ್ನು ಸ್ಪಡಿ ಕ್ಯಾಮನಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ದೃಶ್ಯಗಳು ಅದ್ಬುತವಾಗಿ ಮೂಡಿರುತ್ತಿದೆ. ಅಲ್ಲದೇ ಚಿತ್ರಿಕರಣ ಕಾರ್ಯವೂ ವೇಗವಾಗಿ ಮಡೆಯುತ್ತಿದೆ ಎನ್ನುತ್ತಾರೆ ಲಕ್ಷ್ಮೀಶ್ ಶೆಟ್ಟಿ.

"ಕೋರಿ ರೋಟ್ಟಿ" ಚಿತ್ರದ ಹೀರೋ, ನಿರ್ದೇಶಕ ರಜಿನೀಶ್ ದೇವಾಡಿಗ (Click)

ನಾ ಕಂಡ ರಜನೀಶ್!! (Click)

 


Share