ಎಸ್.ಡಿ.ಹೇನ್ಬೇರ್ ಅವರು ಸಾಮಾಜಿಕ ಕಾಳಜಿ ಮಾದರಿ: ನುಡಿನಮನ

ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಭಾನುವಾರ ದಿ.ಎಸ್.ಡಿ. ಹೇನ್ಬೇರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಸಾಮಾಜಿಕ ಕಾಳಜಿ ಹೊಂದಿದ್ದ ಎಸ್.ಡಿ.ಹೇನ್ಬೇರ್, ನೋವಿನಲ್ಲೂ ನಲಿವು ಕಾಣುತ್ತಾ ಅನುಕರಣೀಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮುದಾಯದ ಸಮುದಾಯದ ಒಗ್ಗೂಡುವಿಕೆಗಾಗಿ ಶ್ರಮಿಸುವ ಮೂಲಕ ಈ ಭಾಗದ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ತ್ರಾಸಿ ರಾಜು ದೇವಾಡಿಗ ಹೇಳಿದರು.

ಅವರು  ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ದಿ. ಎಸ್.ಡಿ.ಹೇನ್ಬೇರ್ ನುಡಿನಮನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಸಂಕಲ್ಪ ಮಾಡಿದ ಕಾರ್ಯಗಳು ಸಿದ್ಧಸುವವರೆಗೆ ಜೀವನದುದಕ್ಕೂ ಅವಿರತವಾಗಿ ಹೋರಾಡಿದ ದಿ. ಶೇಷ ದೇವಾಡಿಗ ಒರ್ವ ಮಹಾನ್ ಚೇತನ ಎಂದರು.

ಜಿಲ್ಲಾ ತಾ.ಪಂ ಸದಸ್ಯ ಜಗದೀಶ್ ದೇವಾಡಿಗ, ಉಪನ್ಯಾಸಕ ರಾಘವೇಂದ್ರ ಮಣಿಪಾಲ್, ಉದ್ಯಮಿ ರಾಘವೇಂದ್ರ ಹಾರ್ಮಣ್, ಉಪ್ಪುಂದ ದೇವಾಡಿಗರ ಒಕ್ಕೂಟ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗ ನುಡಿನಮನ ಸಲ್ಲಿಸಿ ಮಾತನಾಡಿದರು.

ಬೈಂದೂರು ದೇವಾಡಿಗ ಒಕ್ಕೂಟ ಸ್ಥಾಪಕಾಧ್ಯಕ್ಷ ಕೆ.ನಾರಾಯಣ ದೇವಾಡಿಗ, ಗೌರವಧ್ಯಕ್ಷ ಕೆ.ಜಿ ಸುಬ್ಬ ದೇವಾಡಿಗ, ಅಧ್ಯಕ್ಷ ಹೊಸಾಡು ನಾರಾಯಣ ದೇವಾಡಿಗ, ಕಾರ್ಯದರ್ಶಿ ಸತ್ಯ ಪ್ರಸನ್ನ ಹಾಗೂ ಒಕ್ಕೂಟ ಸರ್ವ ಸದಸ್ಯರು ಎಸ್.ಡಿ ಹೇನ್ಬೇರ್ ಹಿತೈಷಿಗಳು ಮತ್ತು ಅಭಿಮಾನಿಗಳು ಮೃತರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಳವಾಡಿ ರಾಘವೇಂದ್ರ ದೇವಾಡಿಗ ವಂದಿಸಿದರು. ನಾರಾಯಣರಾಜು ನಿರ್ವಹಿಸಿದರು.

ಬೆಳಗ್ಗೆ ಮೃತರು ಸದ್ಗತಿಗಾಗಿ ಶ್ರೀ ಮಹಾಸತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೈಂದೂರು: ನಾಯಕತ್ವದ ಗುಣವಿದ್ದ ಸ್ನೇಹಮಯಿ ಶ್ರೀ ಎಸ್.ಡಿ.ಹೇನಬೇರ್ ನಿಧನ (Click)


Share