ಒಂದು ವರ್ಷ ಪೂರೈಸಿದ ನೊಂದವರ ಹೊಂಗಿರಣ- ದೇವಾಡಿಗ ಅಕ್ಷಯ ಕಿರಣ: ಐದೂವರೇ ಲಕ್ಷ ರೂ ನೆರವು.  

ದೇವಾಡಿಗ ಅಕ್ಷಯ ಕಿರಣ ಸಾಮಾಜಿಕ ಜಾಲ ತಾಣ ಬಳಗ ಹುಟ್ಟಿ ಇಂದು ಒಂದು ವರ್ಷ ಪೂರೈಸಿದೆ.

ಶ್ರೀ ಏಕನಾಥೇಷ್ವರಿ ದೇವಸ್ಥಾನದ ನಿರ್ಮಾಣದ ಬಳಿಕ ದೇವಾಡಿಗ ಸಮಾಜದಲ್ಲಿ ಒಂದು ಸೇವಾ ಬದಲಾವಣೆ ಅಂದರೆ... ನೊಂದವರ *ಆಶಾ ಕಿರಣ - ದೇವಾಡಿಗ ಅಕ್ಷಯ ಕಿರಣ.

ಒಂದು ಕಡೆ ಸಮಾಜದ ಕಟ್ಟ ಕಡೇಯ  ಸಾಮಾನ್ಯ ವ್ಯಕ್ತಿಗೇ ವೈದ್ಯಕೀಯವಾಗಿ ಸ್ಪಂದಿಸ ಬೇಕು ಎನ್ನುವ ತುಡಿತದಿಂದ ಹುಟ್ಟಿದ ಸಮಾನ ಮನಸ್ಕ ಜಾಗತಿಕ  ಯುವಕರ ಸಾಮಾಜಿಕ ಜಾಲ ತಾಣ ಬಳಗ ದೇವಾಡಿಗ ಅಕ್ಷಯ ಕಿರಣ ಬಳಗ ಅಂದರೇ ತಪ್ಪಲ್ಲ. ಒಂದು ವರ್ಷದಲ್ಲಿ ಬಳಗದ ಸೇವಾ ಮಾಣಿಕ್ಯದಾತರ ಸೇವಾ ಮನೋಭಾವನೆಯ ಸಹಕಾರದಿಂದ ಸುಮಾರು ಐದೂವರೇ ಲಕ್ಷ ರೂ ಗಳನ್ನು ನೊಂದವರ ಮನೇಗೇ ಭೇಟಿ ನೀಡಿ  ವೈದ್ಯಕೀಯ ನೆರವು ನೀಡಿ ನಿಮ್ಮ ನೋವಿನ ಜತೆ ಇಡೀ ಬಳಗ ನಿಮ್ಮ ಜತೆಗಿದೆ ಎನ್ನುವ ಸಾಂತ್ವಾನವನ್ನು ನೀಡುತ್ತಾ ಬಂದಿದೆ

 ಬಳಗವು ವೈದ್ಯಕೀಯ ಮಾತ್ರವಲ್ಲದೇ ಕೇಲವು ಕಡೇ ಅತೀ ಅವಶ್ಯಕ ಎನಿಸಿದಲ್ಲಿ ವೈದ್ಯಕೀಯೇತರ ವಿಷಯಕ್ಕೂ ಸಹಾಯ ಹಸ್ತ ಚಾಚಿದೆ. ಕಾಟಿಪಳ್ಳದ ಶ್ರೀಮತಿ ದಯಾವತಿ ದೇವಾಡಿಗರ ವಸತಿ ಹಕ್ಕು ಪತ್ರಕ್ಕಾಗಿ ನಿರಂತರ ಹೋರಾಟ ನಡೇಸುತ್ತಾ ಬಂದಿದ್ದು (ಶ್ರೀಮತಿ ಸ್ವರ್ಣ ಭಟ್ಟ್ ಮುಖೇನ ) ಈಗ ಚುನಾವಣ ಆಚಾರ ಸಂಹಿತೆ ಅಡ್ಡಿ ಬಂದಿದ್ದು ಚುನಾವಣಾ ಫಲಿತಾಂಶದ ಬಳಿಕ ವಸತಿ ಹಕ್ಕು ಪತ್ರ ಸಿಗಬಹುದು. ವಿದ್ಯಾರ್ಥಿಗೆ ಕಂಪ್ಯೂಟರ್ ಕೋರ್ಸು ಇರಬಹುದು ಯಾ ಲೇ  ಲ್ಯಾಪಟಾಪ್  ಕೊಡಿಸಿದ ವಿಚಾರ ಇರಬಹುದು ಹೀಗೆ ಹತ್ತು ಹಲವು ವಿಚಾರಗಳಲ್ಲಿ ನೆರವು ನೀಡುತ್ತಾ ಬಂದಿದೆ. ಬಳಗ ತನ್ನಿಂದ ಆಗುವ ವಿಷಯ ಅಲ್ಲದೇ ಬೇರೆ ’ ಮಾಸ ’ ಸಂಸ್ಥೆ ಇರಬಹುದು, ಇಸ್ರೇಲಿ ಸಂಸ್ಥೆ, ಹೆಗಡೇ ಫೌಂಡೇಶನ್ ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡದ ದೇವಸ್ಥಾನಗಳಿಂದ ಮತ್ತು ಸರಕಾರಿ ಸೌಲಭ್ಯಗಳನ್ನು ಸಹಾಯ ಪಡೆಯುವ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಬಂದಿರುತ್ತದೆ. ಇಪ್ಪತ್ತು ಸದಸ್ಯರಿಂದ ಪ್ರಾರಂಭವಾದ ಬಳಗ ಈಗ ಸುಮಾರು ನೂರಕ್ಕೂ ಹೆಚ್ಚು ಸೇವಾಮಾಣಿಕ್ಯದಾತರುಗಳನ್ನು ಸೇರಿಸಿಕೊಂಡು ದೇವಾಡಿಗ ಮದ್ಯಮ ಮತ್ತು ಕೆಳವರ್ಗದವರ ಪ್ರೀತಿಯನ್ನು ಅತಿ ಚಿಕ್ಕ ಅವಧಿಯಲ್ಲಿ ಗಳಿಸಿದ್ದು ಬಳಗದ ಸೇವಾದಾರರ ಹುಮ್ಮಸ್ಸು ಇಮ್ಮಡಿ ಗೊಳಿಸಿದೆ.ಇನ್ನಷ್ಟು ಸೇವಾದಾರರು ಕೈ ಜೋಡಿಸುವ ನಿರೀಕ್ಷೇ ಇದೆ.

ಜನರ  ಸೇವೇಯೇ ದೇವರ ಸೇವೇ ಎನ್ನುವುದು ಬಳಗದ ಮೂಲ ಮಂತ್ರವಾಗಿದ್ದು ಬಳಗ ನವ ತೇಜಸ್ಸಿ ನಿಂದ ಪ್ರಥಮ ವರ್ಷಕ್ಕೇ ಕಾಲಿಡುತ್ತಿದೆ.

~ ದೇವಾಡಿಗ ಅಕ್ಷಯ ಕಿರಣ


Share