ದೇವಾಡಿಗ ಬಾಂಧವರೇ ದಯವಿಟ್ಟು ಗಮನಿಸಿ!...: ಮೂಲ್ಲಿ ಜಯಾನಂದ ದೇವಾಡಿಗರ ವಿನಂತಿ

ದೇವಾಡಿಗ ಬಾಂಧವರೇ ದಯವಿಟ್ಟು ಗಮನಿಸಿ...
ನಮ್ಮ ನಾಯಕರಾದ ಶ್ರೀ ಯು. ವೀರಪ್ಪ ಮೊಯಿಲಿಯವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ದೇವಾಡಿಗ ಡಾಟ್ ಕಾಮ್ ಜಾಲತಾಣದಲ್ಲಿ “ಮೊಯಿಲಿಯವರು ಸಮಾಜಕ್ಕೇನು ಮಾಡಿದ್ದಾರೆ?!” ಎಂಬ ವಿಷಯದ ಬಗೆಗಿನ ಚರ್ಚೆಗಳು ನನಗೆ ತುಂಬಾ ನೋವುನ್ನುಂಟು ಮಾಡಿದೆ.

ಮೊಯಲಿಯವರು ಶಾಸಕರಾಗಿ ಚುನಾಯಿತರಾಗಿ 47 ವರ್ಷಗಳಾಯಿತು. ಈ ಬಗ್ಗೆ ಚರ್ಚೆ ಆಗಲಿಲ್ಲ. ಈಗ ಚರ್ಚೆ ಶುರುವಾಗಿದೆ. ಸಂಬಂಧಪಟ್ಟವರು ಜಾಗೃತರಾಗಿರುವುದು ಸಂತೋಷ ಆದರೆ ಚರ್ಚೆಗೆ ಇದು ಸಮಯವಲ್ಲ. ಈಗ ಚರ್ಚೆಸುವುದರಿಂದ ಉದ್ದೇಶವು, ಕಾರ್ಯವು ಸಾಧಿಸಲ್ಲ್ಪ್ಡುವುದಿಲ್ಲ, ಈಗ ಚರ್ಚಿಸಿಸುವುದು ಸಮಾಜದ ಹಿತಕ್ಕೆ ವ್ಯತಿರಿಕ್ತವಾಗುತ್ತದೆ.

ಚುನಾವಣೆ ಮುಗಿದ ನಂತರ ಮೊಯಿಲಿಯವರು ಮತ್ತೊಮ್ಮೆ ಸಂಸದರಾಗಿ ಆರಿಸಿ ಬಂದ ಮೇಲೆ ಈ ಕುರಿತು ಚರ್ಚಿಸೋಣ. ಈಗ ಸಮಾಜ ಬಾಂಧವರು ನಮ್ಮ ಸಂಸದರನ್ನು ಉಳಸಿಕೊಳ್ಳಬೇಕು ಅವರಿಗೆ ತೊಂದರೆ ಮಾಡಬಾರದು ಸಾಧ್ಯವಾದರೆ ಅವರಿಗೆ ನೆರವು ಸಹಕಾರ ನೀಡಬೇಕು ಅವರಿಗೆ ಶುಭ ಕೋರಬೇಕು. ನಮ್ಮವರು ಒಬ್ಬರು ಚುನಾವಣೆಯಲ್ಲಿ ನಿಂತಿದ್ದಾರೆ ಅವರನ್ನು ಸಂಸದರನ್ನಾಗಿ ಮಾಡೆಂದು ಸೃಷ್ರ್ಠಿಕರ್ತನಲ್ಲಿ ಪ್ರಾರ್ಥಿಸಬೇಕೇ ಹೊರತು  ತೊಂದರೆ ಕೊಡಬಾರದು. ಈಗ ಚರ್ಚೆ ಮಾಡಬಾರದು; ಚರ್ಚೆಯನ್ನು ಮುಂದುವರಿಸುವುದು ಸಮಾಜಾಭಿಮಾನಿಗಳಿಗೆ ಶೋಭೆ ತರುವುದಿಲ್ಲ. ಬದಲಾಗಿ ಚಾರಿತ್ರ್ಯ ಹಾನಮಾಡುವ ಕತ್ತುಕೊಯ್ಯುವ ಕೃತ್ಯವಾಗುತ್ತದೆ. ಈ ವಿಚಾರ ಬಹಳ ನೋವಾದಂತೆ ಹೇಳುತ್ತಿದ್ದೇನೆ.

ಈಗ ಈ ವಿಚಾರವನ್ನು ಪ್ರಸ್ತಾಪಿಸುವವರೂ ಚರ್ಚಿಸುವವರು ಸಮಾಜದ ಬಗೆಗಿನ ಹಿರಿಯರ ದುಡಿಮೆ ಅದರ ಕರುನಾಡು ರಾಜಕೀಯದ ಒಳಗುಟ್ಟು; ಇಂದಿನ ವಿದ್ಯ ಮಾನಗಳಲ್ಲಿ ಮುಂದುವರಿದ ಪ್ರಬಲ ಜನಾಂಗಗಳ ತಮ್ಮವರ ಬಗೆಗಿನ ಕಾಳಜಿ, ದುರ್ಬಲ ಸಮಾಜಗಳ ಬಗೆಗಿನ ದೋರಣೆ; ತಮ್ಮವರ ಹಿತ ಪ್ರಾಬಲ್ಯತೆಯ ರಕ್ಷಣೆಯ ಬಗೆಗಿನ ಕಾಳಜಿ; ಕಾರ್ಯಚಾರಣೆ ಬಗ್ಗೆ ನಮ್ಮ ತಿಳುವಳಿಕೆಯ ಅರಿವು ಅಗತ್ಯ. ನಮ್ಮ ದೈಹಿಕ, ಆರ್ಥಿಕ, ಶೈಕ್ಷಣಿಕ ಮತ್ತಿತರ ಶಕ್ತಿ ಸಂಪನ್ನತೆ ನಮ್ಮವರ ಹಿತಕ್ಕೆ ಪೂರಕವಾಗಿರಬೇಕು. ನಮ್ಮ ಹಿತ ಸಾಧನೆಯು ನಮ್ಮಿಂದಲೇ ಆಗಬೇಕು.

ನನ್ನ ಹತ್ತನೇ ವರ್ಷ ಪ್ರಾಯದಿಂದ ಸ್ವಾತಂತ್ರ್ಯ ಹೋರಾಟದದಲ್ಲಿ ಸಮಾಜದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದೆ ರಾಜಕೀಯದಲ್ಲಿ ವಿವಿಧ ಜವಬ್ಧಾರಿ ನಿರ್ವಹಿಸಿ ಸುದೀರ್ಘಕಾಲ ದುಡಿದು 1954ರಲ್ಲಿ ನಮ್ಮ ಸಂಘವನ್ನು ಪುನರ್ ಸಂಘಟಿಸಿ ಸತತ ನಾಲ್ಕು ಶತಕಗಳ ಕಾಲ ಮುಂಚೂಣಿ ಕಾರ್ಯಕರ್ತನಾಗಿ ದುಡಿದು ನಮ್ಮವರು ಶಾಸಕರಾಬೇಕೆಂದು 1972ರಲ್ಲಿ ಸಂಘದ ಹಿರಿಯ ಕಾರ್ಯಕರ್ತರು ನಿರ್ಧರಿಸಿ ಶ್ರೀ ಮೂಯಿಲಿಯವರ ಪ್ರಥಮ ಚುನಾವಣೆಯಲ್ಲಿ ಅತ್ಯುತ್ತಮ ಕಾರ್ಯಕರ್ತನಾಗಿ ದುಡಿದು ಇಂದು 85ರ ಹರಯದಲ್ಲಿ ಈ ರೀತಿ ಸಮಾಜದ ಹಿತಕ್ಕೆ ಮಾರಕವಾಗುವ ಚರ್ಚೆಯನ್ನು ನನ್ನ ಮೊಬೈಲ್ ನಲ್ಲಿ ತಿಳಿದು ಅತ್ಯಂತ ಮನ ನೊಂದು ನಮ್ಮವರ ನಿಂದನೆಯಂತ ಸಮಾಜಘಾತಕ ಮಾಡದಿರಿ ಎಂದು ಈ ಮೂಲಕ ನನ್ನ ಬಾಂದವರಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

ಮೂಲ್ಲಿ ಜಯನಂದ ದೇವಾಡಿಗ; ಮಂಗಳೂರು.

25.03.2019

ಮೂಲ್ಲಿ ಜಯನಂದ ದೇವಾಡಿಗರ ಬಗ್ಗೆ  ಹಿಂದಿನ ವರದಿಗಳು:

http://www.devadiga.com/news/details/188/04_03_404page.html 

http://www.devadiga.com/news/details/292/04_02_contact.html


Share