ದೇವಾಡಿಗ ಸಂಘ ಕೋಟ-ಸಾಲಿಗ್ರಾಮ: ವಾರ್ಷಿಕ ಮಹಾಸಭೆ

ಕೋಟ : ದೇವಾಡಿಗ ಸಂಘ ಕೋಟ-ಸಾಲಿಗ್ರಾಮ ಇದರ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾ.31ರಂದು ಕೋಟದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಹಾಗೂ ಸಾಧಕರನ್ನು ಗೌರವಿಸಲಾಯಿತು.

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ್ ಸಿ.ಕುಂದರ್ , ಎಕನಾಥೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ಜನಾರ್ಧನ ದೇವಾಡಿಗ, ಖಜಾಂಚಿ ನರಸಿಂಹ ದೇವಾಡಿಗ, ಮಂಗಳಾ ಕ್ರೆಡಿಟ್ ಕೋ ಆಪ್‍ರೇಟಿವ್ ಸೊಸೈಟಿ ನಿರ್ದೇಶಕಿ ಪ್ರಮಿಳಾ ದೇವಾಡಿಗ, ರಾಜು ದೇವಾಡಿಗ, ರಾಜು ದೇವಾಡಿಗ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.

ಸಂಘದ ಸದಸ್ಯ ಸಂಜೀವ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣ ದೇವಾಡಿಗ ವರದಿ ವಾಚಿಸಿ, ಶಿಲ್ಪಾ ಜಯಲಕ್ಷ್ಮೀ ಹಾಗೂ ಕುಮಾರ ಗಿಳಿಯಾರು ಕಾರ್ಯಕ್ರಮ ನಿರೂಪಿಸಿ, ಪ್ರವೀಣ ದೇವಾಡಿಗ ವಂದಿಸಿದರು.


Share