SSLC -2019 Toppers who scored above 90% (With Detail)

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಆನೇಕಲ್‌ನ ಸೈಂಟ್‌ ಫಿಲೋಮಿನಾ ಪ್ರೌಢ ಶಾಲೆಯ ಡಿ.ಸೃಜನಾ ಮತ್ತು ಕುಮಟಾದ ವಿಠೊಬ ಶ್ಯಾನ್‌ಭಾಗ್‌ ಕಲಾºಗರ್‌ ಪ್ರೌಢ ಶಾಲೆಯ ನಾಗಾಂಜಲಿ ಈ ಸಾಧನೆ ಮಾಡಿದವರು. ಜತೆಗೆ ಈ ಬಾರಿ ಫ‌ಲಿತಾಂಶದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.

ಹಾಸನ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಹಾಗೂ ಉಡುಪಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿದೆ. ದಕ್ಷಿಣ ಕನ್ನಡ 7ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಉಡುಪಿ ಪ್ರಥಮ ಮತ್ತು ದ.ಕ. ನಾಲ್ಕನೇ ಸ್ಥಾನ ಪಡೆದಿತ್ತು.

ಒಟ್ಟಾರೆಯಾಗಿ ಪರೀಕ್ಷೆ ಬರೆದವರಲ್ಲಿ ಶೇ.73.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ಬಾರಿಗಿಂತ ಶೇ.1.77ರಷ್ಟು ಫ‌ಲಿತಾಂಶ ಹೆಚ್ಚಳವಾಗಿದೆ. ಈ ವರ್ಷದಿಂದ ಜಿಲ್ಲಾವಾರು ಫ‌ಲಿತಾಂಶದ ಮಾನದಂಡ ಬದಲಾಗಿದೆ. 11 ಮಕ್ಕಳು 625ಕ್ಕೆ 624 ಅಂಕ ಗಳಿಸಿದ್ದರೆ, 19 ವಿದ್ಯಾರ್ಥಿಗಳು 625ಕ್ಕೆ 623 ಮತ್ತು 39 ವಿದ್ಯಾರ್ಥಿಗಳು 625ಕ್ಕೆ 622 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ನಮ್ಮ ಸಮಾಜದ ವಿದ್ಯಾಶ್ರೀ ದೇವಾಡಿಗ ಬಾರಕೂರು ಅವರು 625/623 ಅಂಕ ಗಳಿಸಿ 3ನೇ ರ್ಯಾಂಕ್ ಪಡೆದಿದ್ದಾರೆ ಹಾಗೆಯೇ ಶೇ 99.36% ಪಡೆದು 5 ನೇ ರ್ಯಾಂಕ್ ಗಳಿಸಿರುವ ನಿತಿನ್.ಎಸ್ ಇಬ್ಬರೂ ಬೆಂಗಳೂರಲ್ಲ್ಲಿ ನೆಲಸಿರುವ ನಮ್ಮ ಕರಾವಳಿಗರು.

ಶೇ 90% ರಿಂದ 99% ಪಡೆದ ವಿದ್ಯಾರ್ಥಿಗಳ ವಿವರವನ್ನು ಕೆಳಗೆ ನಮೂದಿಸಲಾಗಿದೆ:

1) Miss Greeshma Panduranga secured 99.04%, D/o Dr.Panduranga Devadiga &Veena Bijoor secured 619 out of 625 in S S L C Exm.

2) Miss Pallavi Devadiga Kota secured 98.56% . She is Daughter of Mr and Mrs jayaram devadiga Kota.

3) ವರ್ಷಾ ಕೆ ದೇವಾಡಿಗ ಎಸ್ ಎಸ್ ಎಲ್ ಸಿ ಯಲ್ಲಿ 97.9% ( Please send details with parents name & Place)

4) ವೈಷ್ಣವಿ ದೇವಾಡಿಗ  625/595 ಅಂಕ ಪಡೆದು 95.20 % ಫಲಿತಾಂಶ ಪಡೆದಿರುತ್ತಾಳೆ. ಇವಳು ತ್ರಾಸಿಯ ತೇಜ ದೇವಾಡಿಗ ಹಾಗೂ ರತ್ನ ದೇವಾಡಿಗ ದಂಪತಿಯ ಪುತ್ರಿ.

4a)  ಉಪ್ಪುಂದ ಶಾಲೆಬಾಗಿಲಿನ ರಕ್ಷಿತಾ ದೇವಾಡಿಗ582/625 ಅಂಕ ಪಡೆದು 93:12% ಫಲಿತಾಂಶ ಪಡೆದಿರುತ್ತಾಳೆ.

5) ಶಾಂಭವಿ ಎಂ ದೇವಾಡಿಗ ಮಟ್ನಕಟ್ಟೆ ಈ ಬಾರಿ ನೆಡೆದ ಎಸ್ ಎಲ್ ಸಿ ಪರೀಕ್ಷೆಯಲ್ಲಿ 579/625 ಅಂಕ ಪಡೆದು 92:64 % ಫಲಿತಾಂಶ ಪಡೆದಿರುತ್ತಾರೆ. ( Pls send parents name & school & place)

6) ಕೃತಿಕಾ ದೇವಾಡಿಗ,  ಹಿರಿಯಂಗಡಿ ಕಾರ್ಕಳ 92% ( Please inform Parents name-school & Place.

7) Kota Vgnesh Devadiga s\o Manjunath and Sharada,  devastana Bettu Kota, who scored 92% marks.

8) ಸಿಂಚನಾ ಹರೀಶ್ ದೇವಾಡಿಗ , ಸೈಂಟ್ಸ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಇವಳು  90% ಅಂಕ  ಗಳಿಸಿರುತ್ತಾಳೆ. ಇವಳು ಚಂದ್ರಿಕಾ ಹರೀಶ್ ದೇವಾಡಿಗ ಮತ್ತು ಹರೀಶ್ ದೇವಾಡಿಗ ಅವಿರಾಗ್ ಕ್ಯಾಟರರ್ಸ್ ಕುಕ್ಕಿಕಟ್ಟೆ ಉಡುಪಿ ಇವರ ಸುಪುತ್ರಿ.

10) ಅನುಶ್ರೀ ದೇವಾಡಿಗ ಕುಂದಾಪುರ 625/558 ಅಂಕ ಪಡೆದು 89.28 ಶೇಕಡಾ ಫಲಿತಾಂಶ ಪಡೆದಿರುತ್ತಾಳೆ. ( Parents name Please).


Share