ರಾಂಟ್‍ಜನ್ ಕಂಡುಹಿಡಿದ ಎಕ್ಸ್-ರೇ, ಒಂದು ಯುಗಪ್ರವರ್ತಕ ಆಕಸ್ಮಿಕ ಆವಿಷ್ಕಾರ

ವಿಲ್‍ಹೆಲ್ಮ್ ಕಾನ್ರಾಡ್ ರಾಂಟ್‍ಜನ್ ಪತ್ನಿ ಅನ್ನಾಬರ್ತಾಳ ಹಸ್ತದ ಎಕ್ಸ್‍ರೇ

(1845–1923)

ಡಾ.ಬಿ.ಎಸ್.ಶೇರಿಗಾರ್

ವಿಜ್ಞಾನದ ಚರಿತ್ರೆಯಲ್ಲಿ ಕೆಲವೊಂದು ಮಹತ್ತರವಾದ ಸಂಶೋಧನೆ ಗಳು ಆಕಸ್ಮಿಕವಾಗಿ ಬೆಳಕಿಗೆ ಬಂದಿವೆ. ಅಂತಹ ಒಂದು ರೋಚಕ ಪ್ರಸಂಗ ವಿಲ್‍ಹೆಲ್ಮ್ ಕಾನ್ರಾಡ್ ರಾಂಟ್‍ಜನ್‍ನ ಎಕ್ಸರೇ ಶೋಧ. ಅದೊಂದು ವಿಜ್ಞಾನದ ಮಹಾಕ್ಷಣ ಅಂದರೆ ಅತಿಶಯೋಕ್ತಿ ಆಗಲಾರದು. ತದನಂತರದ ನಡೆದದ್ದು ಅತ್ಯಂತ ಪ್ರಭಾವಯುತ ಕ್ರಾಂತಿಕಾರಕ ಬೆಳವಣಿಗೆ. ಎಕ್ಸರೇ ಆವಿಷ್ಕಾರ, ವೈದ್ಯಕೀಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿ ಅಧುನಿಕ ವಿಜ್ಞಾನದ ಬೆಳವಣಿಗೆಗೆ ನಾಂದಿಯಾಯಿತು. ಎಕ್ಸರೇ ಕಂಡು ಹಿಡಿದದ್ದಕ್ಕಾಗಿ ರಾಂಟ್ಜನ್‍ಗೆ 1901ರಲ್ಲಿ ಭೌತವಿಜ್ನಾನದ ಪ್ರಥಮ ನೋಬೆಲ್ ಪ್ರಶಸ್ತಿ ಪ್ರಾಪ್ತವಾದರೆ, ಕಳೆದ 120 ವರ್ಷ ಗಳಲ್ಲಿ ಎಕ್ಸರೇ ತಂತ್ರಜ್ಞಾನವನ್ನಾಧರಿಸಿದ ಬರೋಬ್ಬರಿ 28 ಸಂಶೋಧನೆ ಗಳಿಗೆ ನೋಬೆಲ್ ಬಹುಮಾನ ನೀಡಲಾಗಿದೆ 

ಅತೀ ಕಡಿಮೆ ಒತ್ತಡದಲ್ಲಿ ಅನಿಲಗಳು ವಿದ್ಯುತ್‍ವಾಹಕವಾಗಿ ವರ್ತಿಸ ಬಲ್ಲವು ಎಂದು ವಿಶದ ಪಡಿಸಿದವನು ಬ್ರಿಟಿಶ್ ವಿಜ್ನಾನಿ ಸರ್ ವಿಲಿಯಮ ಕ್ರೂಕ್ಸ್. ಆತ ಫ್ಯಾಬ್ರಿಕೇಟ್ ಮಾಡಿದ ಗಾಜಿನ ಉಪಕರಣ ‘ಕ್ರೂಕ್ಸ್ ಟ್ಯೂಬ್’ ಹೆಚ್ಚಿನ ಪ್ರಸಿದ್ಧಿ ಪಡೆಯಿತು. ಕ್ಯಾಥೋಡಿನಿಂದ ಉಪಕ್ರಮಿಸುವ, ಸರಳ ರೇಖೆಯಲ್ಲಿ ವೇಗವಾಗಿ ಚಲಿಸುವ, ಋಣವಿದ್ಯುದಾವೇಶವನ್ನು ಹೊಂದಿರುವ ಕಣಗಳ ಪ್ರವಾಹವನ್ನು ‘ಕ್ಯಾಥೋಡ್ ಕಿರಣ’ ಗಳೆಂದು ಕರೆಯಲಾಯಿತು. ಕ್ಯಾಥೋಡ್ ಕಿರಣಗಳ ಬಗ್ಗೆ ಹೊಸ ವಿಚಾರಗಳನ್ನು ತಿಳಿಯಲು ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಸಂಶೋಧನೆಗಳು ನಡೆದವು.

ಜರ್ಮನಿಯ ವುತ್ರ್ಸಬರ್ಗ್ ವಿಶ್ವವಿದ್ಯಾಲಯದಲ್ಲಿ ಬೌತ ವಿಜ್ನಾನದಲ್ಲಿ ಪ್ರಾಧ್ಯಾಪಕನಾಗಿದ್ದ ರಾಂಟಜನ್ ಕ್ಯಾಥೋಡ್ ಕಿರಣಗಳ ಕುರಿತಾದ ವಿವರವಾದ ಅಧ್ಯಯನದಲ್ಲಿ ತೊಡಗಿದ್ದ :

ಇಸವಿ 1895 ನವೆಂಬರ್ 5ರಂದು ಸಂಜೆ ತನ್ನ ಲ್ಯಾಬೊರೇಟರಿಯ ಕತ್ತಲು ಕೋಣೆಯಲ್ಲಿ ಕ್ರೂಕ್ಸ್ ಟ್ಯೂಬ್‍ನ ಕ್ಯಾಥೋಡ್ ಕಿರಣಗಳ ಬಗ್ಗೆ ಪ್ರಯೋಗ ನಡೆಸಿದ. ಕಪ್ಪು ಹೊದಿಕೆ ಅಳವಡಿಸಲ್ಪಟ್ಟ ಕ್ರೂಕ್ಸ್ ಟ್ಯೂಬ್‍ನ ಮೂಲಕ ವಿದ್ಯುತ್ ಹರಿಯಲಾರಂಭಿಸಿದಾಗ ಕೊಳವೆಯಿಂದ ಮಾತ್ರವಲ್ಲದೆ ಸುಮಾರು ಎರಡು ಮೀಟರ್ ದೂರದಲ್ಲಿ ಇನ್ಯಾವುದೋ ಉದ್ದೇಶಕ್ಕೆ ಆಕಸ್ಮತ್ತಾಗಿ ಇರಿಸಿದ್ದ ಬೇರಿಯಮ್ ಪ್ಲ್ಯಾಟಿನೋಸಯನೈಡ್ ಲೇಪಿತ ಪರದೆಯಿಂದ ಬೆಳಕಿನ ಮಿನುಗು(ಫ್ಲೋರೆಸನ್ಸ್) ಬರುತಿತ್ತು. ವಿದ್ಯುತ್ ಹರಿಯುವುದನ್ನು ನಿಲ್ಲಿಸಿದಾಗ ಬೆಳಕು ಮಾಯವಾಗುತಿತ್ತು. ಕ್ಯಾಥೋಡ್ ಕಿರಣ ಕಪ್ಪು ಹೊದಿಕೆಯನ್ನು ದಾಟಿ ಹೊರ ಬರಲಾರದು. ಪರದೆ ಮಿನುಗಲು ಕಾರಣ ನಳಿಕೆಯ ಮೂಲಕ ಹಾದು ಬರುತ್ತಿರುವ ಯಾವುದೋ ಅಗೋಚರ ಕಿರಣಗಳು ಎಂದು ತೀರ್ಮಾನಿಸುವುದು ಅನಿವಾರ್ಯವಾಯಿತು. ಅಂದರೆ ಕ್ಯಾಥೋಡ್ ಕಣಗಳ ತಾಡನೆಗೆ ಗುರಿಯಾದ ಆನೋಡ್, ಈ ಅಗೋಚರ ಕಿರಣ ಗಳನ್ನು ಸೂಸುವುದಷ್ಟೇ ಅಲ್ಲದೆ, ಅವು ನಳಿಕೆಯ ಗಾಜನ್ನೂ ಅದರ ಕಪ್ಪು ಹೊದಿಕೆಯನ್ನೂ ತೂರಿಕೊಂಡು ಒಂದಷ್ಟು ದೂರ ಹೋಗಬಲ್ಲದು ಎಂದು ಸಿದ್ಧವಾಯಿತು. ಮುಂದಿನ ಹಲವು ವಾರಗಳ ಕಾಲ ತನ್ನ ಲ್ಯಾಬೊರೇಟರಿಗೆ ಅಂಟಿಕೊಂಡೇ ಪ್ರಯೋಗದಲ್ಲಿ ತಲ್ಲೀನನಾದ. ರಾಂಟ್‍ಜನ್ ತನ್ನ ಪತ್ನಿ ಅನ್ನಾಬರ್ತಾಳಿಗೆ ಪ್ರಯೋಗದ ವಿಸ್ಮಯದ ಸಂಗತಿಯನ್ನು ತಿಳಿಸಿದ. ಆಕೆಯ ಹಸ್ತವನ್ನು ಅಡ್ಡವಾಗಿಟ್ಟು ಪ್ರಯೋಗ ನಡೆಸಿದಾಗ ಹಸ್ತ ಹಾಗೂ ಬೆರಳಿನ ಮೂಳೆಗಳು, ವೆಡ್ಡಿಂಗ್ ರಿಂಗ್ ಸಹಿತವಾಗಿ ಸ್ಪಷ್ಟವಾಗಿ ಪ್ರಕಟವಾಗಿದ್ದವು. ಆದರೆ ರಕ್ತಮಾಂಸದ ಛಾಯೆ ಕಾಣಿಸುತ್ತಿರಲಿಲ್ಲ. ಜಗತ್ತಿನ ಪ್ರಪ್ರಥಮ ಎಕ್ಸ್‍ರೇ ಚಿತ್ರ ಅದಾಗಿತ್ತು !

ಆ ಅಗೋಚರ ಕಿರಣಗಳ ಗುಣ ವಿಶೇಷಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ್ದರಿಂದ, ರಾಂಟ್‍ಜನ್ ಅವನ್ನು ಕ್ಷ-ಕಿರಣ(ಎಕ್ಸರೇ) ಗಳೆಂದು ಹೆಸರಿಸಿದನು. ಅಂದಿನ ದಿನಗಳಲ್ಲಿ ಇವುಗಳನ್ನು ‘ರಾಂಟ್ಜನ್ ಕಿರಣ’ ಗಳೆಂದೇ ಕರೆಯುತ್ತಿದ್ದರು. ಈ ಅನಿರೀಕ್ಷಿತ ಶೋಧದಿಂದ ಅನೇಕ ಉಪಯೋಗ ಗಳಿವೆ ಎಂದು ರಾಂಟ್‍ಜನ್‍ಗೆ ಮನವರಿಕೆಯಾಯಿತು.

ಕ್ರೂಕ್ಸ್ ಟ್ಯಾಬ್‍ನ ಸಮೀಪ ಇರಿಸಿದ್ದ ಫೋಟೊಫಿಲ್ಮ್ ಮಸುಕಾಗುವುದನ್ನು ವಿಲಿಯಮ್ ಕ್ರೂಕ್ಸ್ ಸೇರಿದಂತೆ ಇತರ ಅನೇಕ ವಿಜ್ಞಾನಿ ಗಳು ರೋಂಟ್ಜನ್‍ಗಿಂvಲೂÀ ಮುಂಚೆಯೇ ಗಮನಿಸಿದ್ದರು. ಆದರೇನಂತೆÉ ಅವರೆಲ್ಲರೂ ಕ್ಯಾಥೋಡ್ ಕಿರಣದ ಗುಣವಿಶೇಷ ಗಳಿÀಗೆ ಮಹತ್ವ ನೀಡಿದರೇ ಹೊರತು, ಅಲ್ಲಿ ಹುದುಗಿರುವ ನಿಗೂಢತೆಯನ್ನು ಗಮನಿಸದೇ ಹೋದರು. ಆದರೆ ರಾಂಟ್‍ಜನ್‍ಗೆ ತನ್ನ ಅಂತಃಪ್ರಜ್ಞೆಯಿಂದ ಆ ಸಂಕೀರ್ಣ ವಿದ್ಯಮಾನದ ಸುಳಿವು ಹೊಳೆದಿರ ಬಹುದು. ‘ಆಕಸ್ಮಿಕದಿಂದ ವೈಜ್ಞಾನಿಕÀ ಸತ್ಯವನ್ನು ಹೆಕ್ಕಿ ತೆಗೆಯಲು ಸಾಧ್ಯವಾಗುವುದೇನಿದ್ದರೂ ಅದಕ್ಕೆ ಸಿದ್ಧವಾÀಗಿರುವ ಮತಿಗಳಿಗೆ ಮಾತ್ರ’ ಎಂದು ಲೂಯಿ ಪಾಶ್ಚರ್ ಹೇಳಿÀರುವುದು ರೋಂಟ್ಜನ್ ನಡೆÉಸಿದ ಅನ್ವೇಷಣೆಗೆ ಹೆಚ್ಚು ಅನ್ವಯಿಸುತ್ತದೆ. 

ರಾಂಟ್‍ಜನ್ ಪ್ರಯೋಗ ನಡೆಸಿದ ಬೆನ್ನಲ್ಲೇ ಫ್ರಾನ್ಸಿನ ಹೆನ್ರಿ ಬೆಕರಲ್ ಯುರೇನಿಯಮ್ ಧಾತುವಿನಿಂದ ಎಕ್ಷ್‍ರೇಗಿಂತಲೂ ಭಿನ್ನವಾದ, ಹೆಚ್ಚುಶಕ್ತಿಯುತ, ನಿಗೂಢ, ಅಗೋಚರ ಕಿರಣಗಳು ಹೊರಹೊಮ್ಮುವುದೆಂದು ಪ್ರಕಟಗೊಳಿಸಿದ್ದು ವಿಜ್ಞಾ£ದÀ ವರ್ತುಲದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು. ಈ ಕ್ರಿಯೆಗೆ ‘ರೇಡಿಯೋಆಕ್ಟಿವಿಟಿ’ ಎಂದು ಹೆಸರಿಸಿದ್ದು ಮೇರಿಕ್ಯೂರಿ. ಕೇಥೊಡ್ ಕಿರಣಗಳು ‘ಎಲೆಕ್ಟ್ರಾನ್‍ಗಳ ಧಾರೆ’ ಎಂದು ಜೆ.ಜೆ.ತಾಮ್ಸನ್ ಈ ಹಂತದಲ್ಲಿ ಗುರುತಿಸಿದ್ದು ಮತ್ತೊಂದು ಮಹತ್ವದ ಬೆಳವಣಿಗೆ. ಈರೀತಿ ವಿಜ್ಞಾನಿಗಳ ಜಿಜ್ಞಾಸೆಯಿಂದಾಗಿ ಎಕ್ಸ್‍ರೇಯ ಗುಣಸ್ವಭಾವ, ಮೆಕೆನಿಸಮ್, ಇತ್ಯಾದಿಗಳ ಅಧ್ಯಯನ ಪರಸ್ಪರ ಪೂರಕವಾಗಿ ಅವ್ಯಾಹತವಾಗಿ ಮುಂದುವರೆಯಿತು.
ಕ್ರೂಕ್ಸ್ ಟ್ಯಾಬ್‍ನಲ್ಲಿ ಕ್ಯಾಥ್ಯೋಡ್‍ನಿಂದ ಉಪಕ್ರಮಿಸುವ ಎಲೆಕ್ಟ್ರಾನ್‍ಗಳ ಧಾರೆ ವೇಗದಿಂದ ಚಲಿಸಿ ಆನೋಡ್ ತಾಡನೆಗೆ ವಳಗಾದಾಗÀ ವೇಗಾಪಕರ್ಷ(ಡೀಸೆಲರೇಟ್)ಗೊಂಡು ಅವುಗಳ ಚಲನಶಕ್ತಿ ಭಾಗಶಹ ಉಷ್ಣರೂಪಕ್ಕ್ಲೆ ಪರಿವರ್ತನೆಗೊಂಡು ಉಳಿದಂಶವು ಅದೃಶ್ಯ ಕಿರಣಗಳ ರುಪದಲ್ಲಿ ಹೊರಬೀಳುತ್ತದೆ, ಅಥವಾ ಆನೋಡ್‍ಪರಮಾಣುವಿನ ಕಕ್ಷೆಯಲ್ಲಿರುವ ಇಲೆಕ್ಟ್ರಾನ್‍ನ ಉಚ್ಛಾಟನೆಯಿಂದಾಗುವ ಸ್ಥಿತ್ಯಂತರದ ಫಲವಾಗಿ ಶಕ್ತಿಯ ರೂಪದ ಅದೃಶ್ಯ ಕಿರಣ ಗಳು ಹೊರಸೂಸಲ್ಪಡುತ್ತವೆ. ಈ ಕಿರಣಗಳೇ ಎಕ್ಸ್‍ರೇ. ಎಕ್ಸ್‍ರೇ ವಿದ್ಯುತ್ಕಾಂತೀಯ ಅಲೆಗಳಾಗಿದ್ದು, ಸಾಮಾನ್ಯ ಬೆಳಕಿನ ಕಿರಣಗಳಿಗಿಂತ ಹತ್ತುಸಾವಿರ ಪಟ್ಟು ಕಡಿಮೆ ತರಂಗಾಂತರವನ್ನು ಹೊಂದಿರುವುದರಿಂದ ದೃಷ್ಟಿಗೆ ಗೋಚರಿಸದೆ, ಗಾಜು ಕಾಗದ, ಮರ ಮುಂತಾದ ವಸ್ತುಗಳನ್ನು ತೂರಿಕೊಂಡು ಹೋಗಬಲ್ಲವು. ಅವು ಮೃದು ವಸ್ತುಗಳನ್ನು ತೂರಿ ಮುಂದೆ ಸಾಗುತ್ತವೆ. ಆದ್ದರಿಂದ ಮಾಂಸ ಮೂಳೆ ಗಳಿಂದಾದ ಶರೀರದ ಒಳಭಾಗದ ಚಿತ್ರವನ್ನು ಈ ಕಿರಣಗಳ ಸಹಾಯದಿಂದ ಪಡೆಯಲು ಸಾಧ್ಯ. ದೇಹದ ವಿವಿಧ ಘಟಕಗಳ ಎಕ್ಸರೇ ಹೀರಿಕೆಯ ಪ್ರಮಾಣವನ್ನವಲಂಭಿಸಿ ‘ಎಕ್ಸ್‍ರೇ ರೇಡಿಯೋಗ್ರಾಫಿಕ್ ಇಮೇಜ್’ ಮೂಡಿ ಬರುತ್ತದೆ. ದೇಹದ ಮೂಳೆಗಳಲ್ಲಿರುವ ಕ್ಯಾಲ್ಸಿಯಂನ ಹೀರಿಕೆಯ ಪ್ರಮಾಣ ಅತೀ ಹೆಚ್ಚು ಇರುವುದರಿಂದ ಮೂಳೆಯ ಛಾಯೆ ಬಿಳಿಯಾಗಿ ಕಂಡು ಬಂದರೆ, ಕೊಬ್ಬು ಮತ್ತು ಇತರೆ ಜೇವಕೋಶಗಳ ಹೀರಿಕೆ ಪ್ರಮಾಣ ಕಡಿಮೆ ಇರುವುದರಿಂದಾಗಿ ಅವುಗಳ ಛಾಯೆ ಕಂದು ಬಣ್ಣದ್ದಾಗಿಯೂ, ಗಾಳಿಯ ಹೀರಿಕೆಯ ಪ್ರಮಾಣ ಅತಿ ಕಡಿಮೆ ಇರುವುದರಿಮದಾಗಿ ಶ್ವಾಸಕೋಶಗಳ ಛಾಯೆ ಕಪ್ಪಾಗಿಯೂ ತೋರುತ್ತದೆ.

ಕ್ರೂಕ್ಸ್ ನಳಿಗೆಯಿಂದ ಉಗಮಿಸುವ ಕ್ಯಾಥೋಢ್ ಕಿರಣಗಳ ಫಥಕ್ಕೆ ಒಂದು ತಗಡಿನರೂಪದ ಬಿರುಸಾದ ವಸ್ತು(ಏಂಟಿಕ್ಯಾಥೋಡ್)ವನ್ನು ಅಡ್ಡಲಾಗಿ ಇಡುವ ಮೂಲಕ ಎಕ್ಸ ಕಿರಣಗಳನ್ನು ಉತ್ಪಾದಿಸ ಬಹುದೆಂದು ಕಂಡುಕೊಳ್ಳಲಾಯಿತು.
ಎಕ್ಸರೇ ಕಂಡುಹಿಡಿದ ಸುದ್ದಿ ಟೆಲಿಗ್ರಾಫ್ ಮೂಲಕ ಜಗತ್ತಿನಾದ್ಯಂತ ಹಬ್ಬಿತು. ಆಕಸ್ಮಿಕವಾಗಿ ಕಂಡುಕೊಂಡ ನಿಗೂಢ ಕಿರಣಗಳಿಂದ ಅಗೋಚರವಾಗಿರುವುದನ್ನು ಛಾಯಾಚಿತ್ರಿಸುವ ವಿದ್ಯಮಾನ ಭಾರೀ ಸಂಚಲನವನ್ನುಂಟು ಮಾಡಿತ್ತು. ಆ ಕಿರಣಗಳು ಘನ ವಸ್ತು ಗಳ ಮೂಲಕ ತೂರಿ ಛಾಯೆಯನ್ನುಂಟು ಮಾಡುವ ‘ಸೀತ್ರೂ’ರೀತಿಯ ಕಲ್ಪನೆ ಸೈನ್ಸ್ ಫಿಕ್ಷನ್ನಲ್ಲಷ್ಟೇ ಸಾಧ್ಯ ತಾನೇ!? ಆದರೆ ಆ ಸಂಧರ್ಬದಲ್ಲಿ ತೆಗೆದÀ ತನ್ನ ಹಸ್ತದ ಮೂಳೆಗಳ ರಚನೆಯ ಎಕ್ಸರೇ ಚಿತ್ರವನ್ನು ವೀಕ್ಷಿಸಿದ ಆನ್ನಾ, ‘ಐ ಹೇವ್ ಸೀನ್ ಮೈ ಡೆತ್!’ ಎಂದು ಉಧ್ಗರಿಸಿದ್ದಳಂತೆ. ಆ ಸುದ್ದಿ ವಿಜ್ನಾನಿಗಳಲ್ಲಿ ಬೆರಗು, ವಿಸ್ಮಯ, ಕುತೂಹಲ, ಮತ್ತು ಉದ್ದೀಪನವನ್ನುಂಟು ಮಾಡಿದರೆ, ಜನಸಾಮಾನ್ಯರ ವಲಯದಲ್ಲಿ, ಬಟ್ಟೆಯ ಮೂಲಕ ತೂರ ಬಲ್ಲ ಆ ಅಮಾಯಕ ಕಿರಣಗಳ ಬಗ್ಗೆ ಸಂದೇಹ, ಸಂಕೋಚ, ಅನುಮಾನ ಮಾತ್ರವಲ್ಲದೆ, ವ್ಯಕ್ತಿಗಳ, ವಿಶೇಷವಾಗಿ ಮಹಿಳೆಯರ ಮೊಡೆಸ್ಟಿಗೆ ಒದಗ ಬಹುದಾದ ಅಪಾಯದ ಬಗ್ಗೆ ಗುಸು ಗುಸು ಚರ್ಚೆ ಕೂಡಾ ನಡೆದಿತ್ತು! ಪ್ರಾರಂಭದ ದಿನಗಳಲ್ಲಿ ಎಕ್ಸ್‍ರೇಯಿಂದ ದೇಹದ ಮೆಲಾಗುವ ಪರಿಣಾಮ-ದುಷ್ಪರಿಣಾಮಕ್ಕಿಂತ ಹೆಚ್ಚಾಗಿ ವ್ಯಕ್ತಿಗತ ಗೋಪ್ಯತೆಯ ಬಗೆಗಿನ ಕಾಳಜಿ ಸಾಮೂಹಿಕವಾಗಿ ವ್ಯಕ್ತವಾದದ್ದೇ ಒಂದು ವಿಶೇಶ !

ರಾಂಟ್‍ಜನ್ ಹುಟ್ಟಿದ್ದು 1845ರ ಮಾರ್ಚ್22 ಜರ್ಮನಿಯ ಲೆನೆಪ್ ಎಂಬಲ್ಲಿ. ಶಾಲಾ ವಿದ್ಯಾಭ್ಯಾಸ ಮಾಡಿದ್ದು ಹಾಲೇಂಡ್‍ನಲ್ಲಿ. ಮುಂದೆ ಝೂರಿಚ್‍ನ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್‍ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಯನ . ಝೂರಿಚ್ ವಿಶ್ವವಿದ್ಯಾಲಯದಲ್ಲಿ ತನ್ನ 24ನೇ ವಯಸ್ಸಿಗೆ ಅನಿಲಗಳ ಅಧ್ಯಯನದ ಮೇಲೆ ಡಾಕ್ಟರೇಟ್ ಗಳಿಕೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕನಾಗಿ, ಸಂಶೋಧಕನಾಗಿ ಅನುಭವ ಪಡೆದು 1888ರಲ್ಲಿ ಜರ್ಮನಿಯ ವುತ್ರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲ್ಲಿ ಪ್ರಾಧ್ಯಾಪಕನಾಗಿ ನೇಮಕ. ಮುಂದೆ ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ 1900ರಿಂದ ಸೇವಾನಿವೃತ್ತಿಯ ತನಕ ಫಿಸಿಕ್ಸ್ ವಿಭಾಗದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಣೆ.
ರಾಂಟ್‍ಜನ್ ಮದುವೆ ಆದದ್ದು ಝೂರಿಚ್‍ನ ಅನ್ನಾ ¨ರ್ತಾಳನ್ನು. ತಮಗೆ ಮಕ್ಕಳಿಲ್ಲದ್ದರಿಂದ ಅನ್ನಾಳ ಅಣ್ಣನ 6ವರ್ಷದ ಮಗಳನ್ನು ದತ್ತು ತೆಗೆದುಕೊಂಡಿದ್ದು.

ರೋಂಟ್ಜನ್‍ನದ್ದು, ಸರಳ, ನಿರಾಡಂಬರ, ಮೌನ ಪ್ರವೃತ್ತಿಯ ವ್ಯಕ್ತಿತ್ವ. ಆತ ಗಳಿಸಿದ ಗೌರವಪ್ರಶಸ್ತಿಗಳು, ಬಹುಮಾನಗಳು ಹಲವಾರು. ಅವರೊಬ್ಬ ಜನಸಾಮಾನ್ಯನಂತೆ ಜೀವನ ನದೆಸಿದ್ದು ಅವರ ಹಿರಿಮೆಗೆ ಸಾಕ್ಷಿಯಾಗಿದೆ. ಸಂಶೋಧನೆಗೆ ನೆರವಾಗಲು ಸಹಾಯಕರು ಇದ್ದಾಗ್ಯೂ ತನ್ನ ಕೆಲಸವನ್ನು ತಾನೇ ಮಾಡಿ ಕೊಳ್ಳುತ್ತಿದ್ದ. ತನ್ನ ನಾಮಾಂಕಿತದ ‘ರೋಂಟ್ಜನ್‍ಕಿರಣ’, ‘ರೋಂಟ್ಜನೋಗ್ರಫಿ’, ‘ರೋಂಟ್ಜನೈಸೇಶನ’ ಮುಂತಾದ ಪದ ಬಳಸುವುದಕ್ಕೆ ಆತನ ಸಹಮತ ಇರಲಿಲ್ಲ. ತನ್ನ ಸಂಶೋಧನೆಯ ಫಲ ಜನರ ಕಲ್ಯಾಣಕ್ಕೇ ಹೊರತು ಲಾಭಕ್ಕಾಗಿ ಅಲ್ಲ ಎಂದು ಅದನ್ನು ಪೇಟೆಂಟ್ ಮಾಡದೆ, ದೊರಕಿದ ನೋಬೆಲ್ ಪಾರಿತೋಶಕದ ಹಣವನ್ನು ಕೂಡಾ ವುತ್ರ್ಸಬರ್ಗ ವಿಶ್ವವಿದ್ಯಾಲಯಕ್ಕೆ ನೀಡಿ ಉಧಾರತೆಯನ್ನು ಮೆರೆದಿದ್ದ. ರೋಂಟ್ಜನ್ ತನ್ನ ತಂದೆಯಿÀಂದ 2ಮಿಲಿಯ ಫ್ರಾಂಕ್ ಮೊತ್ತದ ಬಳುವಳಿಯನ್ನು ಪಡೆದಿದ್ದರೂ, ಮೊದಲನೆ ಮಹಾಯುಧ್ದದಿಂದಾದ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೊಳಗಾದ. ತಾನು ಹುಟ್ಟಿದ ಹಳ್ಳಿಯಲ್ಲೇ ಏಕಾಂತದಲ್ಲಿ ಕೊನೆಯ ದಿನ ಗಳನ್ನು ಕಳೆಯುವಂತಾಯಿತು. ಮುಂದೆ ಪತ್ನಿ ತೀರಿಕೊಂಡ 4ವರ್ಷಗಳ ನಂತರ ರಾಂಟ್‍ಜನ್ ಉದರದ ಕ್ಯಾನ್ಸರ್‍ನಿಂದ 1923ರಲ್ಲಿ ನಿಧನ ಹೊಂದಿದ.

ಎಕ್ರ್ಸರೇ ಡಿಸ್ಕವರಿಯ ಪೂರ್ವದಲ್ಲಿ ರಾಂಟ್‍ಜನ್ ಪ್ರಕಟಿಸಿದ ಸಂಶೋಧನಾ ಲೇಖನ ಗಳು 40ರಷ್ಟು. ಆದರೆ ನಂತರದ ದಿನಗಳಲ್ಲಿ ಪ್ರಕಟಿಸಿದ ಎಕ್ಸ್‍ರೇ ಕರಿತಾದ ಲೇಖನ ಗಳು ಕೇವಲ 3ರೇ ಆಗಿದ್ದರೂ ಅವು ಜಗತ್ತನ್ನು ಬದಲಿಸಿದ ಅತ್ಯಮೂಲ್ಯವಾದ, ಮಹತ್ವದ ಮಾಹಿತಿಗಳ ನ್ನೊಳಗಂಡ ದಾಖಲೆಗಳು !

ರಾಂಟ್‍ಜನ್ ನಂತರದ ವರ್ಷಗಳಲ್ಲಿ ಎಕ್ಸ್‍ರೇ ತಂತ್ರಜ್ಞಾನ ಅಗಾಧವಾಗಿ ಬೆಳೆಯಿತು. ಎಕ್ಸ್‍ರೇ ಆಧರಿತ, ಅ.ಖಿ. ಸ್ಕ್ಯಾನ್, ಮ್ಯಾಮಾಗ್ರಫಿ ಮುಂತಾದ ಮೆಡಿಕಲ್ ಇಮೇಜಿಂಗ್ ವಿಧಾನಗಳು ವೈದ್ಯಕೀಯ ಕ್ಷೇತ್ರಕ್ಕೆ ಒಂದು ವರ. ಎಕ್ಸ್‍ರೇ ಡಿಫ್ರ್ಯಾಕ್‍ಷನ್‍ನಿಂದ ಸ್ಪಟಿಕಗಳ ರಛನೆಯನ್ನು ತಿಳಿಯಲು ಸಾಧ್ಯವಾಗಿದೆ. ಎಕ್ಸ್‍ರೇ ಖಗೋಳವಿಜ್ಞಾನದಿಂದ ಆಕಾಶಕಾಯಗಳ ಆಧ್ಯಯನ ನಡೆಸಲಾಗಿದೆ. ಎಕ್ಸ್‍ರೇ ಫ್ಲೂರೆಸೆನ್ಸ್ ಬಳಸಿ ವಸ್ತುವಿನ ರಚನಾಂಶವನ್ನು ಕಂಡುಕೊಳ್ಲ ಬಹುದು. ಎಕ್ಸ್‍ರೇ ಕ್ರಿಸ್ಟಲಾಗ್ರಫಿ, ಎಕ್ಸ್‍ರೇ ಮೈಕ್ರೋಸ್ಕೊಪಿ, ಎಕ್ಸ್‍ರೇ ಫೋಟೊ ಎಲೆಕ್ಟ್ರಾನ್ ಸ್ಪೆಕ್ಟ್ರೋಸ್ಕೊಪಿ, ಮುಂತಾದ ಹೊಸ ವಿಶ್ಲೇಷಕ ತಂತ್ರಜ್ಞಾನ ಗಳು ವಿಜ್ಞಾನದ ಬೆಳವಣಿಗೆಗೆ ಸಹಕಾರಿಯಗಿವೆ. ಇವೆಲ್ಲ ಸಾಧ್ಯವಾದದ್ದು ರಾಂಟ್‍ಜನ್‍ನ ಅನ್ವೇಶಣೆಯಿಂದ.

ವಿಜ್ಞಾನ ಎರಡಲಗಿನ ಕತ್ತಿಯಂತೆ. ನಿವಾರಕವೂ ಹೌದು, ಮಾರಕವೂ ಆದೀತು. ಎಕ್ಸ್‍ರೇ ಒಂದು ಅಯಾನೀಕಾರಕ ವಿಕಿರಣ. ಒಂದುಮಿತಿಗಿಂತ ಹೆಚ್ಚಿನ ಎಕ್ಸ್‍ರೇ ವಿಕಿರಣದ ಡೋಸಿಜ್ ಪಡೆಯುವುದರಿಂದ ಅಥವಾ ಅದರ ಧೀರ್ಘಸಂಪರ್ಕದಿಂದ, ದೇಹದ ಮೇಲಾಗುವ ಕ್ಯಾನ್ಸರ್‍ನಂತಹ ಅಡ್ಡಪರಿಣಾಮದ ಬಗ್ಗೆ ಅರಿವು ಅಗತ್ಯ.

ವಿಲ್‍ಹೆಲ್ಮ್ ಕಾನ್ರಾಡ್ ರಾಂಟ್‍ಜನ್‍ನನ್ನು ‘ಡಯಾಗ್ನಾಸ್ಟಿಕ್ ರೇಡಿಯೋಗ್ರಫಿ’ಯ ಪಿತನೆಂದು ಪರಿಗಣಿಸಲಾಗಿದೆ. ರೋಂಟ್ಜನ್ ಗೌರವಾರ್ತ 111ನೆಯ ಎಲಿಮೆಂಟನ್ನು ‘ರೋಂಟ್ಜನಿಯಮ’ಎಂದೂ, ಮತ್ತು ವಿಕಿರಣದ ಡೊಸೇóಜ ಮಾಪನವನ್ನು ‘ರೋಂಟ್ಜನ್ ಯುನಿಟ್’ ಎಂದೂ ಹೆಸರಿಸಲಾಗಿದೆ

Dr. B.S. Sherigara,

Adjunct Faculty, MIT,Manipal

Member, Karnataka Jnana Aayoga.

Formerly,Vice-Chancellor and Professor of Industrial Chemistry.

H.No. 4-50C[1], ‘Ahana’, Opp: Gandhi Park,

Kolambe, Udupi 576 101, Karnataka.

Cell: 9483165856.

 


Share