ಆಪ್ ಲೋಗ್ ಅಚ್ಛಾ ಕಿಯಾ ಸಾಬ್ !. RTI ಬಗ್ಗೆ ಮಾಹಿತಿ ತಿಳಿದುಕೊಳ್ಳಿ!!

ಪ್ರಿಯ ದೇವಾಡಿಗ ಯುವಕರೇ, 

ನೀವು ಕೇಲವೊಮ್ಮೇ ಅಲ್ಲಿ ಇಲ್ಲಿ  ಸಾಮಾಜಿಕ ಜಾಲತಾಣದಲ್ಲೋ ಯಾ ದಿನ ಪತ್ರಿಕೇಗಳಲ್ಲಿ ಉಚಿತ ಸಾಮಾಜಿಕ ವಿಚಾರಗಳ  ಬಗ್ಗೆ  ವೈದ್ಯಕೀಯ ಸಂಬಂದಿತ ವಿಚಾರಗಳು ಮತ್ತು ಬಡತನದಲ್ಲಿರುವ ಕುಟುಂಬಗಳಿಗೆ ಸಿಗುವ ಸರಕಾರಿ ಸವಲತ್ತುಗಳು ಮತ್ತು ವಿಧ್ಯಾಭ್ಯಾಸ ಸಂಬಂದಿತ ವಿಚಾರಗಳು ಅಲ್ಲದೇ ಮಾಹಿತಿ ಕಾಯಿದೆ ಹಕ್ಕಿನ ವಿಚಾರಗಳು( RTI) ಇಂತಹ ಫ್ರೀ  ಆಗಿ ಸೆಮಿನಾರುಗಳು ಆಯೋಜಿಸಿರುವ ಬಗ್ಗೆ ಬಂದಲ್ಲಿ, ದಯವಿಟ್ಟು ನಿಮ್ಮ ಒಂದೆರಡು ಗಂಟೆಗಳನ್ನು ಅದಕ್ಕೆ ಮೀಸಲಿರಿಸಿ!.

ಸಾಮಾನ್ಯ ಜ್ನಾನವನ್ನು ಆದಷ್ಟು  ಹೇಚ್ಚಿಸಿಕೊಂಡಲ್ಲಿ ಕೇಲವು ವಿಚಾರಧಾರೆ ಗಳನ್ನು ತಿಳಿದುಕೊಂಡಲ್ಲಿ ನಾವುಗಳು ನಮ್ಮಗಳ ವಿಚಾರಗಳನ್ನು  ಸಮಯ ಸಂಧರ್ಭ ಬಂದಾಗ ನಿರ್ಭಯವಾಗಿ ಇಡಬಹುದು.

ನೀವೀಗ ಈ ವಿಚಾರ ನಾನು ಯಾಕೇ ಇಲ್ಲಿ ಪ್ರಸ್ತಾವಿಸುತಿದ್ದೇನೆ  ಅನ್ನುವ ಕುತೂಹಲ ನಿಮಗಿರಬಹುದು. ಈಗ ಅದನ್ನು ನಿಮ್ಮ ಮುಂದೆ ಇಡುತ್ತೇನೆ. ಏಕೆಂದರೆ ಯಾವಾಗ ಎಲ್ಲಿ ಯಾವ ಸಂದಿಗ್ದದ ಪರಿಸ್ತಿತಿ ಎದುರಾಗಬಹುದು ಎಂದು ಯಾರಿಗೂ ತಿಳಿಯದು.....

ಇತ್ತಿಚೆಗೆ ಆದಿತ್ಯವಾರ 28/94/2019 ರಂದು ನನ್ನ ಸ್ನೇಹಿತರೊಬ್ಬರ ಒತ್ತಾಯಕ್ಕೆ ಮಣಿದು ನಾನು ಹಿಂದೂ ಜನ ಜಾಗ್ರತಿ ಸಮಿತಿಯವರು ಮಾಹಿತಿ ಹಕ್ಕು ಕಾಯಿದೇ (RTI) ವಿಚಾರ ದ ಬಗ್ಗೆ ಹಮ್ಮಿಕೊಂಡಿದ್ದ ಉಚಿತ ಎರಡು ಗಂಟೇಯ ಸೇಮಿನಾರ್ ನಲ್ಲಿ ಭಾಗಿಯಾದೆ.  ಅಲ್ಲಿಆಸ್ಪತ್ರೆಗಳು ,  ವೈದ್ಯಕೀಯ , ಶಿಕ್ಷಣ , ಉದ್ಯೋಗ ಎಲ್ಲಾ ಕಡೆ  ನಡೆಯುತ್ತಿರುವ ಬ್ರಷ್ಟಾಚಾರಗಳನ್ನು ಮಾಹಿತಿ ಹಕ್ಕು ಕಾಯಿದೇ ಅನ್ವಯ ಹೇಗೇ ಬಯಲಿಗೆ ಎಳೆಯಬಹುದು ಎನ್ನುವ ಬಗ್ಗೆ ಸಾಕಷ್ಟು ನುರಿತವರರಿಂದ ಮಾಹಿತಿ ನೀಡಿದರು. ಒಂದಿಬ್ಬರು ನುರಿತ RTI ಕಾರ್ಯಕರ್ತರ ಪರಿಚಯವೂ ಆಯಿತು. ಯಾರು ಯಾವಾಗ ಸಮಯ ಸಂಧರ್ಭದಲ್ಲಿ ಸಹಾಯಕ್ಕೆ ಬರುತ್ತಾರೇ ಎಂದು ಹೇಳಲಾಗುವುದಿಲ್ಲ. ( ಕಾಟಿಪಳ್ಳ ಸುರತ್ಕಲ್ಲನ ವಸತಿ ಹಕ್ಕು ಹೋರಾಟ ಸಮಿತಿಯ  ಶ್ರೀಮತಿ ಸ್ವರ್ಣ ಭಟ್ಟ್ ಒಂದು ಉದಾಹರಣೇ).

ಮಾರನೇ ದಿನ ಸೋಮವಾರ ಅಂದರೇ 29 ತಾರೀಕು ಇಲ್ಲಿ ಮುಂಬೈ ನಲ್ಲಿ ಮತದಾನ. ಹಾಗಾಗಿ ಅಂದು ರಜಾ ದಿನ.

ಮಧ್ಯಾಹ್ನ ಎರಡು ಗಂಟೆಗೆ ನಮ್ಮ ಸೇವಾದಾರರು ಆದ ಶ್ರೀ ಅಶೋಕ ದೇವಾಡಿಗರು ಫೋನಾಯಿಸಿ " ಪರೇಲ ನ K E M.ಆಸ್ಪತ್ರೇಯಲ್ಲಿ ಸಾಕೀನಾಕ ಅಸಲ್ಫದ  ಶ್ರೀ ವಿಜಯಾ ದೇವಾಡಿಗರು ಸೀರಿಯಸ್  ಇದ್ದಾರೇ. ಒಂದು ಬಾಡಿಗೆ ಪಾನ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಕ್ಕಳು ಸಹ ಇಲ್ಲ. ಪಾದದ ಕೇಳಗೇ ಕಟ್ ಮಾಡಿದ್ದಾರಂತೆ .ಈಗಲೇ ಪರೇಲ್ ಆಸ್ಪತ್ರೇಗೇ ಹೊರಡೊಣ " ಎಂದರು. ನಾನು ಎರಡು ಮಾತನಾಡದೆ ಸೇವಾದಾರರು ಆದ ನೇರೂಲ ನ ಶ್ರೀ ಸುರೇಶ ದೇವಾಡಿಗರ ಜತೆ  ಪರೇಲಗೇ ಹೋದೆ.  ಅಲ್ಲಿ ಪರೇಲ್  KEM  ಆಸ್ಪತ್ರೆಗೆ ಹೋಗಿ ನೋಡುವುದಾದರೂ ಏನು ?  ಸುಮಾರು 300 ಬೆಡ್ ಗಳು ಇರುವ 9 ನೇ ವಾರ್ಡಿನಲ್ಲಿ ಕೊನೆಯ ಭಾಗದಲ್ಲಿ ರೋಗಿ ವಿಜಯಾ ದೇವಾಡಿಗರ ನ್ನು ಮಲಗಿಸಿದ್ದಾರೆ. ಕಾಲಿನಿಂದ ರಸಿಗೆ ಸೋರುತ್ತಿದು ವಾಸನೆ ಬರುತ್ತಿದ್ದು ನೋಡಲು ಒಂದು ಕ್ಷಣ ನರಕ ಸದ್ರಶ ಎನಿಸಿತು. ಶನಿವಾರ ಆದಿತ್ಯವಾರ ಸೋಮವಾರ ಮೂರು ದಿನ ಕಳೆದರೂ ಸಂಬಂದಿತ ಡಾಕ್ಟರ ಮತ್ತು ನರ್ಸುಗಳನ್ನು ಅವರ ಪತ್ನಿ ಪರಿಪರಿ ಯಾಗಿ ಬೇಡಿಕೊಂಡರು ಕಟ್ ಆದ ಕಾಲಿಗೇ ಡ್ರೇಸ್ಸಿಂಗ್  ಆಂದರೆ ಬ್ಯಾಂಡೇಜು ಮಾಡಿರಲಿಲ್ಲ. ರೋಗಿಯನ್ನು ಅಲ್ಲೇ ಸಾಯಲು ಬಿಟ್ಟಂತಿತ್ತು!.

ಕೂಡಲೇ ನಾವು ಮೂವರು ಸಂಬದಿತ  ಡಾಕ್ಟರನ್ನು ವಿಚಾರಿಸಿದಾಗ ಅವಳು ಉಢಾಫೇಯಿಂದ ಉತ್ತರಿಸಿ ಡ್ರೇಸ್ಸಿಂಗ್ ವಿಭಾಗಕ್ಕೆ ಎರಡು ದಿನದಿಂದ follow up  ಮಾಡುತ್ತಿದ್ದೇನೇ ಅವರು ಬಂದು ಮಾಡಿಲ್ಲವಾದರೇ ನಾನೇನು ಮಾಡಲಿ? ಎಂದು ಧಿಮಾಕಿನಿಂದ ಹೊರಟು ಹೋದಳು. ನಾನು ಸೀದಾ ಆಸ್ಪತ್ರೇಯ Dean office ಗೇ ಕಂಪ್ಲೇಂಟು ಕೊಡಲು ನನ್ನವರ ಜತೇ ಹೋದಾಗ ಅಲ್ಲೂ office ಗೇ  ಬೀಗ. ಇಂದು ಏನಾದರೂ ಮಾಡಿ ರೋಗಿಗೆ ಚಿಕಿತ್ಸೆ ಸರಿಯಾಗಿ ಕೊಡಿಸಬೇಕು ಎನ್ನುವ ಹಟಕ್ಕೇ ಬಿದ್ದು ಸೀದಾ ಪುನ ಎರಡನೇ ಮಾಳಿಗೇಯ 9 ನೇ ವಾರ್ಡಿಗೇ ತೆರಳಿದೆವು. ಉಢಾಫ಼ೆ ಯಿಂದ ವರ್ತಿಸಿದ ವೈದ್ಯೆ ಅಲ್ಲಿಯೇ ಕುಳಿತಿದ್ದಳು. ನೇರವಾಗಿ ನಿನ್ನ ಹೆಸರು ಏನು ಅಂತ ಕೇಳಿದೇ?... ಯಾಕೇ ಅಂತ ಅವಳು ಕೇಳಿದಾಗ ನಾವು RTI.ಕಾರ್ಯಕರ್ತರು,  ಇಲ್ಲಿನ ಅವ್ಯವಸ್ಥಯನ್ನು ಬಯಲಿಗೆ ಎಳೇಯಬೇಕಿದೆ. ನಿನ್ನ ವಿವರ  ಕೊಡು ಎನ್ನುತ್ತಾ  ನಾವುಗಳು ರೋಗಿಯ file ನ ಫೋಟೋ ತೇಗೆಯಲು ಶುರು ಮಾಡಿದೆವು... ತಕ್ಷಣವೇ ವೈದ್ಯೆ ಬೇವರಲಾಂಬಿಸಿದಳು. ಚೀಫ್ ನರ್ಸು ಒಬ್ಬಳನ್ನು ಬಿಟ್ಟು ಉಳಿದ ನರ್ಸುಗಳು ಅಲ್ಲಿಂದ ಕಾಲ್ಕಿತ್ತರು. ಡಾಕ್ಟರ್ ಹಾಗು ನರ್ಸು ಪೋಲಿಸರಿಗೆ ಫೋನ್ ಮಾಡಿದರು. ಬಂದ ಇಬ್ಬರು ಪೋಲಿಸರಿಗೆ ನಾವು ನೀವುಗಳು "ಮೊದಲು ರೋಗಿಯ ಪರಿಸ್ಥಿತಿ ನೋಡಿ. ನಿಮ್ಮನ್ನು ಹತ್ತು ನಿಮಿಷದಲ್ಲಿ ಇಲ್ಲಿಗೇ ಕರೆಸಿದರು ಆದರೆ ರೋಗಿಗೆ ಇಂದಿಗೆ ಮೂರು ದಿನಗಳಾದರು ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ!, ನಾವುಗಳು RTI ಕಾರ್ಯಕರ್ತರು, ನಿಮ್ಮ ಹೆಸರು ನಿಮ್ಮ ಡ್ರೆಸ್ಸಿನ ಮೇಲಿದೆ. ನಾನದನ್ನು ದಾಖಲಿಸಿ ಕೊಳ್ಳುವೆ . ನಾಳೆ ಎಲ್ಲಾದರೂ ರೋಗಿ ಮ್ರತ ಪಟ್ಟಲ್ಲಿ  RTI ಅನ್ವಯ ನಿಮ್ಮನ್ನು ಸಹ ಕೋರ್ಟಿಗೇ ಎಳೆಯುವೆ ಅಲ್ಲದೆ ಇಲ್ಲೇ ಆಸ್ಪತ್ರೆಯ ಎದುರು ಶವ ಹಿಡಿದು ಧರಣಿ ಹೂಡುವೆ ಎಂದು ಖಡಾತುಡಿಯಾಗಿ ಹೇಳಿದ ನನ್ನ ಮಾತನ್ನು ಕೇಳಿದ ಪೋಲೀಸರು ನಮ್ಮ ಪರವಾಗಿ ಮಾತನಾಡಿದಾಗ ವೈದ್ಯೆ ತಕ್ಷಣ ಸೀನಿಯರ್ ವೈದ್ಯರನ್ನು ಕರೆಸಿದ್ದು ಮಾತ್ರವಲ್ಲದೇ ರೋಗಿಯನ್ನು ತಕ್ಷಣ  ಕಾಲಿನ ಡ್ರೇಸ್ಸಿಂಗ್ ಗಾಗಿ ಡ್ರೇಸ್ಸಿಂಗ್ ರೂಮ್ ಗೆ ಕಳುಹಿಸಿದರು. ಇಷ್ಟೇಲ್ಲ ಆಗುವಾಗ ಮೂರು ಗಂಟೆಗೆ ತಲುಪಿದ ನಾವು 6 ಗಂಟೆಯಾಗಿತ್ತು. ನಮ್ಮನ್ನು ವಾರ್ಡಿನ 300 ಕ್ಕೂ ಹೇಚ್ಚಿನ ರೋಗಿ ಹಾಗು ಸಂಬಂದಿಕರು ವೀಕ್ಷಿಸುತ್ತಿದ್ದರು. ಮೂರು ದಿನಗಳಿಂದ ಆಗದ ಕೇಲಸ ಮೂರು ಗಂಟೇಯಲ್ಲಿ ಆಯಿತು. ಅಲ್ಲಿಂದ ಹೊರ ಬೀಳುವಾಗ ಅಲ್ಲಿನ ಕೇಲವರು ಆಪ್ ಲೋಗ್ ಅಚ್ಛಾ ಕಿಯಾ ಸಾಬ್  ಎನ್ನುವ ಮಾತುಗಳು ಕಿವಿಗೆ ಬೀಳುತಿತ್ತು.

ನಮ್ಮ ಹಟಗೆದ್ದು ಆಸ್ಪತ್ರೇಯ ಹೊರ ಬಂದಾಗ  ಕಾರ್ಗೀಲ್ ಯುದ್ದ ಗೆದ್ದಷ್ಟೇ ಸಂತಸ ನಮ್ಮ ಮೂವರಲ್ಲಿ ಮೂಡಿತ್ತು. ನನ್ನ ಜತೇಗಿದ್ದ ಶ್ರೀ ಸುರೇಶ ಮತ್ತು ಅಶೋಕ ಯಾವುದಕ್ಕೂ ಹೆದರುವವರಲ್ಲ ಅನಿಸಿತು. ಹಿಂದಿನ ದಿನದ ಎರಡು  ಗಂಟೆಗಳ "ಮಾಹಿತಿ ಕಾಯಿದೇ ಹಕ್ಕಿನ ಶಿಬಿರ" ಈ ಕೆಲಸ ಮಾಡಿಸಿತ್ತು!.

ಒಂದೋ ಹಣ ಇರಬೇಕು ಇಲ್ಲವೇ ಯಾರದ್ದಾದರು ಶಿಫಾರಸು ಇರಬೇಕು ಇಲ್ಲವೇ ಸ್ವಲ್ಪವಾದರೂ ಕಾನೂನಿನ ಅರಿವು ಇರಬೇಕು. ಇದು ಯಾವುದೂ ಇಲ್ಲದಿದ್ದರೇ ಮನುಷ್ಯ ಸತ್ತ ಹಾಗೇನೇ. 

ನಾ ಕೊಟ್ಟ ಉದಾಹರಣೇ ಸ್ವಲ್ಪ ಧೀರ್ಘ ಅನಿಸಬಹುದು. ಸಮಯ ಸಿಕ್ಕಾಗ ಉಚಿತ ಮಾಹಿತಿ ಶಿಬಿರಗಳಲ್ಲಿ ಭಾಗವಹಿಸಿ ನಿಮ್ಮ ಜ್ನಾನ ಭಂಡಾರವನ್ನು ಹೇಚ್ಚಿಸಿಕೊಳ್ಳಿರಿ.  ಸಮಯ, ಸಂಧರ್ಭ ಬಂದಾಗ  ನಿಮಗೂ ನಿಮ್ಮವರಿಗೂ ಉಪಯೋಗಕ್ಕೇ ಬರಬಹುದು.

~ ಪಯಣಿಗ

( ಗಣೇಶ್ ಬ್ರಹ್ಮಾವರ, ಮುಂಬಯಿ)


Share