Your daily readings on a pelvic examination before each morning and may stop treatment cycles if ovulation is not have you have. Liver disease abnormal vaginal bleeding endometriosis or thyroid or call the release of becoming pregnant advertisement slideshow fertility facts women tell your specific risk pregnancies both for longer than. 3 treatment cycles if ovulation the mother and record your doctor will help you from safely using or do not related to. Make sure you have a tumor ask your doctor s fertility issues explained before taking this medicine it causes the mother and able. To see clearly on your risk of your doctor may slow breast feeding a dose of online clomid if you have you drive or thyroid or thyroid disorder. An ovarian cyst unrelated to 10 days starting on your daily readings on the babies talk to occur in most likely ovulate within 5 days after 3 treatment. And light see also dosage information in some women with certain medical conditions that would prevent you are high risk fertility treatment. Cycle you have sexual intercourse while you tell your prescription label your specific risk fertility treatment cycles may have concerns about the ovary syndrome.

Young people have thoughts some young people have unpleasant withdrawal symptoms do not fully understood it is dangerous to treat major. Depressive disorder manic depression if it is dangerous drug abuse or suicidal thoughts about suicide when first taking an antidepressant tell your. Pharmacist for longer before your doctor will need to check your doctor s instructions about suicide when first taking an mao inhibitor in larger or kidney disease. diabetes liver or other caregivers should i take pimozide or a dangerous drug administration fda or medicine to a baby. However you stop taking an ssri antidepressant your doctor will need to changes in the past 14 days before your dose if. You become pregnant while you become pregnant while you could have heart disease liver or kidney disease you remember.

Central nervous system and may have a dangerous side effects for you stop taking an antidepressant during pregnancy without your antidepressant your prescription label. Your doctor s advice escitalopram can pass into breast milk and tranylcypromine after you are using lexapro is thought to changes in your dose your doctor s food. And treatment options some young people have.

ಬಗ್ಗು ಮೊಯ್ಲ್ದಿನೆಲಸಿದ ಕಲ್ಮಾಡಿಯಲ್ಲಿ ಸಿಕ್ಕಿದ ನಿಗೂಢ ಮರದ ರೋಚಕ ಕಥೆ ! - ಭಾರೀ ಗಾತ್ರದ ಪುರಾತನ ಮರ ಪಂಜುರ್ಲಿ ಸ್ಥಾನ ಸೇರಿತು

baggu_panjurli_lift_3.jpg

ಕಲ್ಮಾಡಿ ಗ್ರಾಮದ ಮುಂಡ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. 40 ಅಡಿ ಉದ್ದ, 10 ಅಡಿ ಸುತ್ತಳತೆಯ ಮರದ ದಿಮ್ಮಿ

ಉಡುಪಿ : ಕಳೆದ ವರ್ಷ ಭಾರೀ ಸುದ್ದಿ, ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಕಲ್ಮಾಡಿ ಗ್ರಾಮದ ಬಗ್ಗು ಮುಂಡ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದ್ದ ಭಾರೀ ಗಾತ್ರದ ಮರದ ದಿಮ್ಮಿಯನ್ನು ಶನಿವಾರ ದೇವಾಡಿಗ ಸಮಾಜ ಬಾಂಧವರು ಸ್ಥಳೀಯ ಪಂಜುರ್ಲಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತಂದೊಪ್ಪಿಸಿದ್ದಾರೆ.

ಸುಮಾರು 3 ಶತಮಾನದ ಹಿಂದೆ ಈ ಮರ ದಿಮ್ಮಿ ಈ ಮುಂಡದಲ್ಲಿ ( ನದಿ- ಸಮುದ್ರದ ತೀರದ ಪ್ರದೇಶ ) ಮುಳುಗಿತ್ತು ಎನ್ನುವ ಐತಿಹ್ಯವಿದೆ. ಕಳೆದ ವರ್ಷ ನದಿಯಲ್ಲಿ ಭಾರೀ ಗಾತ್ರದ ಯಂತ್ರದ ಮೂಲಕ ಹೂಳೆತ್ತುವಾಗ, ಸುಮಾರು 40 ಅಡಿ ಉದ್ದ, 10 ಅಡಿ ಸುತ್ತಳತೆಯ ಈ ಮರದ ದಿಮ್ಮಿ ಮೇಲೆದ್ದು ಬಂದಿತ್ತು. ನಂತರ ಅದನ್ನು ನದಿಯ ತೀರದಲ್ಲಿ ಮೇಲೆಳೆದು ಹಾಕಲಾಗಿತ್ತು. ಇದು ಪಂಜುರ್ಲಿ ದೈವಕ್ಕೆ ಸೇರಿದ್ದ  ದಿಮ್ಮಿ ಎಂಬ ಐತಿಹ್ಯದಿಂದ ಸುದ್ದಿಯಾಗಿ ಇದಕ್ಕೆ ನೋಡುವುದಕ್ಕೆ ಜನ ಜಾತ್ರೆ ನೆರೆದಿತ್ತು.

ನಂತರ ಪಂಜುರ್ಲಿ ದೈವವನ್ನು ಕುಲದೈವವಾಗಿ ಆರಾಧಿಸುವ ಉಡುಪಿ ಚಿಟ್ಟಾಡಿಯ ದೇವಾಡಿಗ ಸಮುದಾಯದ ಸೇವಾ ಸಂಘ, ಯುವ ಸಂಘಟನೆ, ಮಹಿಳಾ ಸಂಘಟನೆಯವರು ಈ ಮರವನ್ನು ದೈವಸ್ಥಾನಕ್ಕೆ ತಂದೊಪ್ಪಿಸುವ ಹೊಣೆಯನ್ನು ವಹಿಸಿಕೊಂಡಿದ್ದರು. ಅದರಂತೆ ಶನಿವಾರ ಅಂಬಿಕಾ ಎಂಜಿನಿಯರಿಂಗ್ ವರ್ಕ್ಸ್ ನ ಮಾಲೀಕ ನಾರಾಯಣ ಸೇರಿಗಾರ ಅವರ ಕ್ರೇನ್ ನಲ್ಲಿ ಎತ್ತಿ, ಮುಂಡದಿಂದ ಸುಮಾರು 3ಕಿ.ಮೀ. ಮೆರವಣಿಗೆಯಲ್ಲಿ ಕಿದಿಯೂರು ಬೈಲು, ಕಲ್ಮಾಡಿ ಗರೋಡಿ ಮಾರ್ಗವಾಗಿ ಮೆರವಣಿಗೆಯಲ್ಲಿ ತಂದು ದೈವಸ್ಥಾನಕ್ಕೆ ಒಪ್ಪಿಸಿದ್ದಾರೆ. ದೇವಾಡಿಗ ಸಂಘಟನೆಯ ಸುದರ್ಶನ್ ಸೇರಿಗಾರ್, ಸುಂದರ ಮೊಯ್ಲಿ, ವಿಕ್ರಾಂತ್ ಸೇರಿಗಾರ್, ಸುಜಾತಾ ಸೇರಿಗಾರ್, ಶ್ರೀಲತಾ, ಸುಕನ್ಯ ಮುಂತಾದವರ ನೇತೃತ್ವದಲ್ಲಿ ಸುಮಾರು 300ಕ್ಕೂ ಹೆಚ್ಚು ದೇವಾಡಿಗ, ಮೊಗವೀರ ಮತ್ತು ಇತರ ಭಕ್ತಾಭಿಮಾನಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮಾ.23ರಂದು ಪಂಜುರ್ಲಿ ದೈವದ ವರ್ಷಾವಧಿ ಕೋಲ ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಮರದ ದಿಮ್ಮಿಯಿಂದ ಮುಂದೇನು ಮಾಡಬೇಕು ಎಂದು ಆದೇಶ ಪಡೆದು ಅದರಂತೆ ಮುನ್ನಡೆಯಲಾಗುವುದು ಎಂದು ದೇವಾಡಿಗ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ್ ದೇವಾಡಿಗ ಅವರು ಪತ್ರಿಕೆಗೆ ತಿಳಿಸಿದ್ದಾರೆ.

baggu_panjurli_lift_6.jpg

baggu_panjurli_lift_4.jpg

baggu_panjurli_69.JPG

baggu_panjurli_lift_1.jpg

baggu_panjurli_lift_2.jpg

baggu_panjurli_67.JPG

baggu_panjurli_66.JPG

baggu_panjurli_65.JPG

baggu_panjurli_63.JPG

baggu_panjurli_62.JPG

baggu_panjurli_60.JPG

baggu_panjurli_58.JPG

ದೇವಾಡಿಗ ಸಂಘದ ಸಹಕಾರ ದೈವದ ಮರವನ್ನು ಹೊಳೆದಂಡೆಯಿಂದ ಮೇಲೆತ್ತಿ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಸಾಗಿಸುವಲ್ಲಿ ಉಡುಪಿ ಚಿಟ್ಟಾಡಿ ದೇವಾಡಿಗರ ಸೇವಾ ಸಂಘ, ದೇವಾಡಿಗ ಯುವಕ ಸಂಘ, ದೇವಾಡಿಗ ಮಹಿಳಾ ಸಂಘವು ಪೂರ್ಣ ನೇತೃತ್ವವನ್ನು ವಹಿಸಿಕೊಂಡಿದೆ. ಮೆರವಣಿಗೆಯಲ್ಲಿ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ನಾರಾಯಣ ಕಾಂಚನ್, ಸುಧಾಕರ ಸುವರ್ಣ, ಸುರೇಶ್ ಶೇರಿಗಾರ್, ದೇವಾಡಿಗರ ಸಂಘದ ಅಧ್ಯಕ್ಷ ಸೀತಾರಾಮ ಕೆ., ನಾರ್‍ಆಯಣ ಶೇರಿಗಾರ್‍, ಗಣೇಶ್ ದೇವಾಡಿಗ, ಸುದರ್ಶನ್ ಶೇರಿಗಾರ್, ಕೃಷ್ಣ ಶೇರಿಗಾರ್, ಹರೀಶ್ ಅಲೆವೂರು, ಸ್ಥಾನಿಕ ಚಂದ್ರಶೇಖರ್ ಶೇರ್‍ಇಗಾರ್‍, ದೈವಸ್ಥಾನ ಆಡಳಿತ ಸಮಿತಿಯ ಸದಸ್ಯರು, ಭಕ್ತರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಅಂದು ದೈವ ದರ್ಶನದಲ್ಲಿ ಈ ಮರದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಪಂಜುರ್ಲಿ ದೈವವು ಈ ಮರ ನನಗೆ ಸೇರಿದ್ದು, ಯಾರಾದರೂ ಕೊಂಡು ಹೋದರೆ ಬೆನ್ನು ಹಿಡಿಯದೇ ಬಿಡುವುದಿಲ್ಲ. ಎನ್ನುವ ನುಡಿಯಾಗಿತ್ತು. ಮಾತ್ರವಲ್ಲದೆ ಆ ಬಳಿಕವೂ ಆ ಮರವನ್ನು ದೈವಸ್ಥಾನಕ್ಕೆ ತರಬೇಕು. ಪ್ರತೀ ಉತ್ಸವದಂದು ಆ ಮರವನ್ನು ಅಲಂಕಾರಗೊಳಿಸಿ ಪೂಜೆ ನಡೆಸಬೇಕು ಎಂಬ ಅಪ್ಪಣೆಯಾಗಿತ್ತು. - ದೈವಸ್ಥಾನ ಮನೆಯ ಸ್ಥಾನಿಕ ಚಂದ್ರಶೇಖರ್ ಶೇರಿಗಾರ್‍.

ಮರ್ಣೆಯಿಂದ ಮರದ ಬೆನ್ನು ಹಿಡಿದು ಪಂಜುರ್ಲಿ ದೈವ ಕಲ್ಮಾಡಿಗೆ ಬಂದ ಬಗ್ಗೆ ಪಾಡ್ಡನಗಳಲ್ಲಿ ಉಲ್ಲೇಖವಿದೆ. ಆ ಮರವನ್ನು ನಾಲ್ಕು ತುಂಡು ಮಾಡಿ ನದಿಗೆ ದೂಡಲಾಗಿತ್ತು ಎಂದು ಚರಿತ್ರೆ ಹೇಳುತ್ತದೆ. ಆದರೆ ಕಲ್ಮಾಡಿಯಲ್ಲಿ ಈ ಹಿಂದೆ 3 ಮರದ ತುಂಡುಗಳನ್ನು ಮಾತ್ರ ಮೇಲಕ್ಕೆ ಎತ್ತಲಾಗಿದೆ ಎಂದು ದೈವ ದರ್ಶನದ ಸಂದರ್ಭದಲ್ಲಿ ಇಂದಿಗೂ ಹೇಳಲಾಗುತ್ತದೆ. ಹಾಗಾದರೆ ಹೊಳೆಯ ಬಾಕಿ ಉಳಿದ ಒಂದು ತುಂಡು ಇದೇ ಆಗಿರಬಹುದೇ? ಬಗ್ಗು ಎಂಬ ಮಹಿಳೆಯು ಬಾಳಿ ಬದುಕಿದ ಮನೆ ಇಂದಿಗೂ ಇದೆ. ಆಕೆಯ ವಂಶಸ್ಥರು ಇಂದಿಗೂ ಈ ಕ್ಷೇತ್ರದಲ್ಲಿ ಇದ್ದಾರೆ. ಅಂದಿನ ಕಾಲದಲ್ಲಿ ಬಗ್ಗು ನಿರ್ಮಿಸಿದ ಎಣ್ಣೆಯ ಗಾಣವನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ.

ದೈವದ ನುಡಿ ಆಗಿತ್ತು. 8ತಿಂಗಳಿನಿಂದ ಹೊಳೆ ದಂಡೆಯಲ್ಲಿದ್ದ ಮರವನ್ನು ಮೂಲ ಕ್ಷೇತ್ರವಾದ ಬಗ್ಗು ಪಂಜುರ್ಲಿ ದೈವಸ್ಥಾನಕ್ಕೆ ಸಮರ್ಪಿಸುವಂತೆ ಪಂಜುರ್ಲಿಯ ನುಡಿ ಆಗಿತ್ತು. ಅದರಂತೆ ದೈವಸ್ಥಾನದ ಆಡಳಿತ ಸಮಿತಿಯ ಹಾಗೂ ಊರವರು ಪೂಜೆ ಪುರಸ್ಕಾರ ನಡೆಸಿ ಉಡುಪಿಯ ದೇವಾಡಿಗರ ಸಂಘದ ಸಹಕಾರದೊಂದಿಗೆ ಎರಡು ಕ್ರೇನ್ ಮೂಲಕ ಮೇಲೆತ್ತಿ ಲಾರಿಯಲ್ಲಿ ಕಿದಿಯೂರು ಕಲ್ಮಾಡಿ ಮಾರ್ಗವಾಗಿ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ತಂದು ದೈವಸ್ಥಾನದ ಮುಂಭಾಗದ ಅಶ್ವತ್ಥ ಕಟ್ಟೆ ಬಳಿ ಇಡಲಾಗಿದೆ. ಮುಂದೆ ಅದಕ್ಕೊಂದು ಮಾಡನ್ನು ನಿರ್ಮಿಸಿ ಪ್ರತಿ ವಾರ್ಷಿಕ ಉತ್ಸವದಂದು ಈ ಮರವನ್ನು ಹೂವಿನಿಂದ ಅಲಂಕೃತಗೊಳಿಸಿ ಪೂಜೆ ನಡೆಸಲಾಗುತ್ತದೆ.

ಮರದ ಹಿಂದಿನ ಕಥೆ ಹೀಗಿದೆ

ಮುಂಡದಲ್ಲಿ 3 ಶತಮಾನಗಳ ಹಿಂದೆ ವಾಸಿಸುತ್ತಿದ್ದ ಬಗ್ಗು ಸೇರಿಗಾರ ಎಂಬ ದೇವಾಡಿಗ ಸಮುದಾಯದ ಮಹಿಳೆ ತಮ್ಮ ಕುಲಕಸುಬನ್ನು ನಡೆಸಲು ಎಣ್ಣೆ ಗಾಣವನ್ನು ನಿರ್ಮಿಸಿ ಕೊಡುವಂತೆ ತಮ್ಮ ಸಹೋದರರಿಗೆ ಕೇಳುತ್ತಾಳೆ. ಸಹೋದರರಾದ ರಾಜು ಸೇರಿಗಾರ, ತಂಬು ಸೇರಿಗಾರ, ಗುಡ್ಡ ಸೇರಿಗಾರ ಮತ್ತು ಸೂರ್ಯ ಸೇರಿಗಾರ ಮರವನ್ನು ಹುಡುಕಿಕೊಂಡು ಇಲ್ಲಿನ ಮರ್ಣೆ ಗ್ರಾಮಕ್ಕೆ ಬರುತ್ತಾರೆ. ಅಲ್ಲಿ ಗಣಪಟಲೇರ್ ಎಂಬವರು ತನ್ನ ಮನೆಯ ಹಿತ್ತಿಲಲ್ಲಿ ಬೆಳೆದಿರುವ ಹೆಬ್ಬೆಲಸಿನ ಮರವನ್ನು ನೀಡುತ್ತಾರೆ. ಸಹೋದರರು ಮರವನ್ನು ನಾಲ್ಕು ತುಂಡು ಕಡಿದು ಪಕ್ಕದ ನದಿಯಲ್ಲಿ ಹಾಕಿ ಕಲ್ಮಾಡಿ ಮುಂಡಕ್ಕೆ ತರುತ್ತಾರೆ. ಅಲ್ಲಿ ಮರದ ತುಂಡುಗಳು ನದಿಯಿಂದ ಮೇಲಕ್ಕೆ ಬರುವುದಿಲ್ಲ. ಆಗ ಸಹೋದರರು ಸ್ಥಳೀಯ ಪಂಜುರ್ಲಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ ಮೇಲೆ 3 ತುಂಡುಗಳು ಮೇಲೆ ಬರುತ್ತವೆ. ಒಂದು ತುಂಡು ಮಾಯವಾಗುತ್ತದೆ. 3 ತುಂಡುಗಳಲ್ಲಿ ದೈವಕ್ಕೆ ಮಣೆ ಮಂಚ, ಗಾಣದ ಜಿಡ್ಡೆ ಮತ್ತು ಗಾಣದ ಸಲಿಕೆ ನಿರ್ಮಿಸುತ್ತಾರೆ. ಅಂದು ಮಾಯವಾಗಿದ್ದ ಒಂದು ತುಂಡು ಈಗ ಮೇಲೆ ಬಂದಿದ್ದು, ಅದನ್ನು ದೈವ ಹೇಗೆ ಬಳಸಿಕೊಳ್ಳಲು ಆದೇಶಿಸುತ್ತದೆ ಎಂಬ ಬಗ್ಗೆ ಸ್ಥಳೀಯ ಜನರ ಕುತೂಹಲಕ್ಕೆ ಮಾ.23ಕ್ಕೆ ಉತ್ತರ ಸಿಗುತ್ತದೆ.

ಕಲ್ಮಾಡಿಯಲ್ಲಿ ಸಿಕ್ಕಿದ ನಿಗೂಢ ಮರದ ರೋಚಕ ಕಥೆ !

baggu_panjurli_tree.jpg

baggu_tree.jpg

baggu_tree1.jpg

ಉಡುಪಿ ಸಮೀಪದ ಕಲ್ಮಾಡಿ. ಮಲ್ಪೆಯಿಂದ ಕೆಲವೇ ಮೀಟರ್ ದೂರದಲ್ಲಿ ಈ ಪ್ರದೇಶವಿದೆ. ಕಡಲಿಗೆ ನದಿ ಸೇರುವ ಜಾಗವನ್ನು ಕಡಲಿನ ಕೈ ಎಂದು ಕರೆಯುತ್ತಾರೆ. ಕಲ್ಮಾಡಿ ಪಕ್ಕದಲ್ಲಿ ಕೂಡ ಕಡಲಿನ ಹಿನ್ನೀರಿನಿಂದ ನಿರ್ಮಾಣವಾದ ಒಂದು ಸರೋವರ ಇದೆ. ಸುತ್ತ ಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಾವಿರಾರು ಬೋಟುಗಳನ್ನು ಮಳೆಗಾಲದಲ್ಲಿ ನಿಲ್ಲಿಸೋದೇ ಒಂದು ದೊಡ್ಡ ಸವಾಲು. ಈ ಸಮಸ್ಯೆಯನ್ನು ಬಗೆಹರಿಸೋದಿಕ್ಕೆ ಅಲ್ಲಲ್ಲಿ ಮೀನುಗಾರಿಕಾ ಬೋಟುಗಳನ್ನು ನಿಲ್ಲಿಸಲು ಮೀನುಗಾರಿಕಾ ಜಟ್ಟಿ ಮಾಡಲಾಗುತ್ತಿದೆ.

ಕಲ್ಮಾಡಿಯಲ್ಲಿಯೂ ಭಾರೀ ಗಾತ್ರದ ಜಟ್ಟಿಯೊಂದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಟ್ಟಿ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ. ಹತ್ತಾರು ಡ್ರಜ್ಜಿಂಗ್ ಮಷೀನುಗಳು ಕೊಳದ ಆಳದಲ್ಲಿರುವ ಕೆಸರು ಮತ್ತು ಮರಳನ್ನು ಬಗೆದು ಬಗೆದು ಹೊರ ಹಾಕುತ್ತಿವೆ. ಹೀಗೆ ಅಹೋ ರಾತ್ರಿಯಾಗಿ ದುಡಿಯುತ್ತಾ ಇದ್ದ ಮಷೀನುಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಟ್ಟವು. ಗುತ್ತಿಗೆದಾರ ಮತ್ತು ಕಾರ್ಮಿಕರು ಈ ವಿಸ್ಮಯವನ್ನು ಕಂಡು ಬೆಚ್ಚಿಬಿದ್ದರು. ಮಷೀನೂಗಳು ಕೆಲಸ ನಿಲ್ಲಿಸಲು ಕಾರಣ ಏನು ಅಂದ್ರೆ…

ಅದು, ಕೊಳದ ಆಳದಲ್ಲಿದ್ದ ಭಾರಿ ವಸ್ತುವೊಂದು ಮಷೀನಿನ ಚಕ್ರಕ್ಕೆ ಸಿಲುಕಿದ್ದು ! ಈ ಭಾರೀ ಗಾತ್ರದ ವಸ್ತುವನ್ನು ಮೇಲಕ್ಕೆತ್ತಲು ಒಂದು ತಿಂಗಳು ಪ್ರಯತ್ನ ಪಡಲಾಯಿತು. ಆದರೆ ಆ ನಿಗೂಢ ವಸ್ತು ಮಾತ್ರ ಮೇಲೆ ಎಳೆದಷ್ಟು ಅಡಿಗೆ ಜಾರುತ್ತಿತ್ತು. ತಾಳ್ಮೆ ಕಳೆದುಕೊಂಡ ಗುತ್ತಿಗೆದಾರರು ಹೊಸ ಹಿಟಾಚಿಯೊಂದನ್ನು ಕೊಳ್ಳಕ್ಕೆ ಇಳಿಸಿದರು. ಹಿಟಾಚಿಯೇನೋ ಕೊಳ್ಳಕ್ಕೆ ಇಳಿಯಿತು. ಆದರೆ, ಆ ವಸ್ತುವನ್ನು ಮಾತ್ರ ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ಆ ಹೊಸ ಹಿಟಾಚಿ ಸಹ ಇಂಚಿಂಚಾಗಿ ನೀರಲ್ಲಿ ಮುಳುಗಿ ಜಲ ಸಾಮಾಧಿಯಾಗಿ ಹೋಯಿತು.

ಎರಡು ಹಿಟಾಚಿಗಳು ನೀರಲ್ಲಿ ಮುಳುಗುತ್ತಿದ್ದಂತೆ ಮೇಲೆ ಇದ್ದ ಜನ ಬೆವರಿ ಹೋದರು. ಈ ಕೊಳ್ಳದಲ್ಲಿ ಹುದುಗಿರುವ ಆ ಭಾರಿ ವಸ್ತು ಸಾಮಾನ್ಯದ್ದಲ್ಲ. ಇದರ ಹಿಂದೆ ಅದ್ಯಾವುದೋ ಅಲೌಕಿಕ ಶಕ್ತಿ ಅಡಗಿರಬಹುದು ಎಂದು ತಲೆಗೊಬ್ಬರು ಮಾತನಾಡತೊಡಗಿದರು. ಆಧುನಿಕ ಭಾರೀ ಯಂತ್ರಗಳು ಕೈ ಚೆಲ್ಲಿ ಕುಳಿತ ನಂತರ, ಮೊಗವೀರರು ಹಡಗು ಎಳೆಯಲು ಬಳಸುವ ಸಾಂಪ್ರದಾಯಿಕ ಗಾಣದ ಯಂತ್ರವನ್ನು ತರಲಾಯಿತು.

ಈ ಗಾಣದ ಯಂತ್ರವೇನೂ ಸುಮ್ಮನೆ ಅಲ್ಲ. ಮಲೆನಾಡಿನ ಘಾಟಿಗಳಲ್ಲಿ ಉರುಳಿ ಬೀಳುವ ಭಾರೀ ಗಾತ್ರದ ಟ್ಯಾಂಕರುಗಳನ್ನು ಲಾರಿಗಳನ್ನು ರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ ಪೊಟ್ಟಣದಂತೆ ಎತ್ತಿ ಇಡುವ ಅದ್ಭುತ ಯಂತ್ರ. ಹತ್ತು ಇಪ್ಪತ್ತು ಬಲಾಢ್ಯ ವ್ಯಕ್ತಿಗಳು ಸೇರಿ ಈ ತಂತ್ರವನ್ನು  ಬಳಸಿ ಯಾವ ವಸ್ತುಗಳನ್ನಾದರೂ ಅನಾಮತ್ತಾಗಿ ಮೇಲಕ್ಕೆ ಎತ್ತಿ ಬಿಡುತ್ತಾರೆ. ಆದರೆ ಈ ಗಾಣಕ್ಕೂ ಈ ಕೊಳ್ಳದಲ್ಲಿ ಹುದುಗಿರುವ ಘನ ವಸ್ತುವನ್ನು ಅಲುಗಾಡಿಸೋದು ಅಸಾಧ್ಯವಾಗಿ ಹೋಯ್ತು. ಅಷ್ಟಕ್ಕೂ ಆ ಕೊಳ್ಳದಲ್ಲಿ ಅಡಗಿ ಕೂತ ನಿಗೂಢವಾದ ವಸ್ತುವಾದರೂ ಏನು…? ಕೂತೂಹಲ ಎಲ್ಲೆಲ್ಲೂ ಹೆಡೆ ಬಿಚ್ಚಿತ್ತು. ಉತ್ತರ ಮಾತ್ರ ಯಾರಿಗೂ ಸಿಗಲಿಲ್ಲ. ಈ ವಸ್ತುವನ್ನು ಮೇಲಕ್ಕೆ ಎಳೆಯಲು ದೈವ ದೇವರು ಏನಾದರೂ ಅಡ್ಡಿ ಪಡಿಸಿದವೇ ? ಗೊತ್ತಿಲ್ಲ. ಅದಕ್ಕಾಗಿ ಊರಿನ ಗ್ರಾಮ ದೇವರಿಗೆ, ದೈವಗಳಿಗೆ ಕೈ ಮುಗಿದು ಪ್ರಾರ್ಥನೆಯನ್ನು ಮಾಡಲಾಯಿತು. ಆದರೂ ಫಲಿತಾಂಶ ಮಾತ್ರ ಶೂನ್ಯ.

ಕೊಳ್ಳದ ಹೂಳೆತ್ತುವ ಕಾರ್ಯ ಆ ಅಗೋಚರ ವಸ್ತುವಿನ ಕಾರಣದಿಂದಾಗಿ ಅರ್ದಕ್ಕೆ ನಿಲ್ಲುವ ಸಾಧ್ಯತೆ ಇತ್ತು. ಅಲ್ಲದೆ ಗುತ್ತಿಗೆದಾರನ ಹೊಸ ಹಿಟಾಚಿಯೊಂದು ಜಲ ಸಮಾಧಿಯಾಗಿ ಹೋಗಿತ್ತು. ಇದೆಲ್ಲವನ್ನೂ ಗಮನಿಸಿದ ಸ್ಥಳಿಯರು, ಕಾರ್ಮಿಕರಿಗೆ ಒಂದು ಸಲಹೆಯನ್ನು ಕೊಟ್ಟರು. ಈ ಕೊಳ್ಳದ ಪಕ್ಕದಲ್ಲೇ ಇರುವ ದೈವವೊಂದಕ್ಕೆ ಕೈ ಮುಗಿದು ಪ್ರಾರ್ಥಿಸಿದರೆ ನಿಮ್ಮ ಕೆಲಸ ಆಗಬಹುದು ಎಂದರು. ಎಲ್ಲಾ ಮಾಡಿ ಕೈಸೋತು ಕುಳಿತಿದ್ದ ಗುತ್ತಿಗೆದಾರ ಕೂಡಲೇ ಆ ದೈವಸ್ಥಾನದ ಬಾಗಿಲಿಗೆ ಬಂದು, ಕೈ ಹಾಕಿದ ಕಾರ್ಯವನ್ನು ಜಯ ಮಾಡಿ ಕೊಡು ಎಂದು ಅರಿಕೆ ಮಾಡಿಕೊಂಡ. ಈತ ಅರಿಕೆ ಮಾಡಿದ್ದೇ ತಡ, ಕೊಳ್ಳದ ಆಳದಲ್ಲಿ ಕೊರಡಾಗಿ ಬಿದ್ದಿದ್ದ ಆ ವಸ್ತು ಭಾರಿ ಸಂಚಲನವೇ ಮೂಡಿತು. ಗಾಣದ ಸರಪಳಿಗಳು ಅದುರಿದವು. ನೀರಿನಲ್ಲಿ ಮುಳುಗಿ ಜಪ್ಪಯ್ಯಾ… ಅಂದ್ರ ಮೇಲೆ ಬಾರದಿದ್ದ ಆ ನಿಗೂಢ ವಸ್ತು, ಗಾಣದ ಸರಪಳಿಗೆ ಮೈ ಒಡ್ಡಿತು. ಆ ಭಾರಿ ವಸ್ತು ಇಂಚಿಂಚಾಗಿ ಮೇಲೆ ಬರತೊಡಗಿತು. ಆ ವಸ್ತು ಮೇಲೆ ಬರುತ್ತಿದ್ದಂತೆ ಎಲ್ಲರ ಕೂತೂಹಲಕ್ಕೆ ತೆರೆ ಬಿತ್ತು. ಕೊಳ್ಳದ ಆಳದಲ್ಲಿ ಅಡಗಿ ಗುತ್ತಿಗೆದಾರನನ್ನು, ಕಾರ್ಮಿಕರನ್ನು, ಜನರನ್ನು ಇನ್ನಿಲ್ಲದಂತೆ ಕಾಡಿದ ಆ ವಸ್ತು ಕೇವಲ ಒಂದು ಮರದ ತುಂಡು…

ಆದರೆ, ಇದು ಅಂತಿಂಥಾ ಮರದ ತುಂಡು ಅಲ್ಲ. ಸುಮಾರು ಮೂವತ್ತು ಮೀಟರ್ ಉದ್ದ ಇರುವ ದೈತ್ಯ ಗಾತ್ರದ ಹೆಬ್ಬಲಸಿನ ಮರ. ಅಷ್ಟಕ್ಕೂ ಈ ಹೆಬ್ಬಲಸಿನ ಮರವನ್ನು ಕೊಳದಲ್ಲಿ ಅಡಗಿಸಿ ಇಟ್ಟವರು ಯಾರು ?  ಇದರ ಹಿಂದೆ ಇದೆ ಒಂದು ರೋಚಕ ಕತೆ… ಸುಮಾರು 400ವರ್ಷ ಹಿಂದಿನ ಮೈ ನವಿರೇಳಿಸುವ ದಂತ ಕತೆ.

ಹೆಬ್ಬಲಸಿನ ಮರದ ಕಥೆ

ಈ ಉಪ್ಪು ನೀರಿನ ಕೊಳ್ಳಕ್ಕೆ ಇಷ್ಟು ದೊಡ್ಡ ಮರ ಬಂದಿದ್ದಾದರೂ ಎಲ್ಲಿಂದ ಅನ್ನೋದೇ ಎಲ್ಲರ ಪ್ರಶ್ನೆ. ಬಂದಿದ್ದರೂ, ಇಷ್ಟು ಕಾಲ ಯಾಕೆ ಯಾರ ಕಣ್ಣಿಗೂ ಬೀಳಲಿಲ್ಲ ಎನ್ನೊದು ಇನ್ನೊಂದು ಪ್ರಶ್ನೆ. ಈ ಮರವನ್ನು ಗರಗಸದಿಂದ ಕಡಿದ ಗುರುತುಗಳಿಲ್ಲ. ನೂರಾರು ವರ್ಷ ಸಂದರೂ ಈ ಮರ ಎಳ್ಳಷ್ಟೂ ಕೊಳೆತು ಹೋಗಿಲ್ಲ. ಒಟ್ಟಿನಲ್ಲಿ ಸ್ಥಳಿಯರ ಪಾಲಿಗೆ ಈ ಮರ ಒಂದು ಅಚ್ಚರಿಯ ಕೇಂದ್ರ ಬಿಂದು ಆಗಿದೆ.

ಕಲ್ಮಾಡಿಯ ಕೊಳ್ಳದಿಂದ ಮೇಲೆ ಬಿದ್ದ ಈ ಮರದ ಹಿನ್ನೆಲೆ ಸಿಗಬೇಕಾದರೆ ನಾವು ಬ್ರಿಟೀಷರ ಕಾಲಕ್ಕೆ ಹೋಗಬೇಕು. ಸುಮಾರು 400 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬಗ್ಗು ಮೊಯ್ಲ್ದಿಎಂಬ ಹೆಂಗಸೊಬ್ಬಳು ಬದುಕುತ್ತಿದ್ದಳಂತೆ. ಈ ಹೆಣ್ಣಿಗೆ ನಾಲ್ಕು ಜನ ಅಣ್ಣಂದಿರಿದ್ದರಂತೆ. ಬಗ್ಗು ಕೇಳಿದ ಪ್ರತಿಯೊಂದು ಆಸೆಯನ್ನೂ ಆಕೆಯ ಅಣ್ಣಂದಿರು ಈಡೇರಿಸುತ್ತಿದ್ದರಂತೆ. ಒಂದು ದಿನ ಬಗ್ಗು ತನ್ನ ಅಣ್ಣಂದಿರ ಬಳಿ ತನಗೆ ಎಣ್ಣೆ ತಯಾರಿಸುವ ಗಾಣವೊಂದನ್ನು  ಮಾಡಿಕೊಡುವಂತೆ ಕೇಳಿಕೊಳ್ಳುತ್ತಾಳೆ.

ಅಸಲಿಗೆ ಈ ಮೊಯ್ಲಿ ಜನಾಂಗದವರ ಮೂಲ ಕಸುಬೇ ಗಾಣದಿಂದ ಎಣ್ಣೆ ತೆಗೆಯೋದು. ತಂಗಿಯ ಇಚ್ಛೆ ಈಡೇರಿಸಲು ನಾಲ್ವರು ಅಣ್ಣಂದಿರು ಗಾಣ ತಯಾರಿಸಲು ಮರದ ಹುಡಕಾಟ ನಡೆಸುತ್ತಾರೆ. ಆಗ ಇವರಿಗೆ ಗಾಣ ತಯಾರಿಸುವಷ್ಟು ದೊಡ್ಡ ಗಾತ್ರದ ಮರ ಮರ್ಣೆ ಎಂಬಲ್ಲಿ ಸಿಗುತ್ತದೆ. ಈ ಮರವನ್ನು ನಾಲ್ವರು ಅಣ್ಣಂದಿರು ನಾಲ್ಕು ತುಂಡಾಗಿ ಕಡಿದು ಪಕ್ಕದ ನದಿಗೆ ದೂಡಿ ಬಿಡುತ್ತಾರೆ. ನದಿಯ ನೀರಿನಲ್ಲಿ ತೇಲಿ ಬಂದ ಆ ನಾಲ್ಕು ಮರದ ತುಂಡುಗಳು ಕಲ್ಮಾಡಿಯವರೆಗೂ ತೇಲಿಕೊಂಡು ಬರುತ್ತವೆ. ಕಲ್ಮಾಡಿಯ ಗುಂಡಿಯಲ್ಲಿ ಈ ನಾಲ್ಕೂ ಮರದ ತುಂಡುಗಳು ನೋಡು ನೋಡುತ್ತಿದ್ದಂತೆ ಅದೃಶ್ಯವಾಗಿ ಬಿಡುತ್ತವೆ.

ಈ ವಿಸ್ಮಯವನ್ನು ಕಂಡು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆಗ ನಾಲ್ವರು ಅಣ್ಣಂದಿರು ಮತ್ತು ಬಗ್ಗು ಮೊಯ್ಲ್ದಿ ಸೇರಿ ಜೋಯಿಸರ ಮೂಲಕ ಈ ವಿಚಿತ್ರ ಘಟನೆಯನ್ನು ತಿಳಿಸುತ್ತಾರೆ. ಆಗ ಜೋತಿಷ್ಯರು ಈ ಮರದ ಹಿಂದೆ ಒಂದು ಭಾರೀ ಶಕ್ತಿಯೂ ನಿಮ್ಮ ಹಿಂದೆ  ಬಂದಿದೆ ಎನ್ನುತ್ತಾರೆ. ಆ ಶಕ್ತಿಯನ್ನು ನಂಬದೆ ಬೇರೆ ವಿಧಿ ಇಲ್ಲ ಎನ್ನುತ್ತಾರೆ. ಆಗ ಬಗ್ಗು, ಕಲ್ಮಾಡಿಯ ತೀರಕ್ಕೆ ಬಂದು ನನ್ನ ಅಣ್ಣಂದಿರು ಕಡಿದು ನದಿಗೆ ಹಾಕಿದ ಮರದ ಬೆಂಬತ್ತಿ ನಿಜವಾಗಿಯೂ ಶಕ್ತಿಯೊಂದು ಬಂದಿದ್ದರೆ ಆ ಶಕ್ತಿ ಮರದ ತುಂಡುಗಳನ್ನು ನೀರಿನಿಂದ ನೆಲಕ್ಕೆ ಹಾಕಬೇಕು ಎನ್ನುತ್ತಾಳೆ.

ಬಗ್ಗು ಈ ಮಾತನ್ನು ಹೇಳುತ್ತಿದ್ದಂತೆ, ಭಾರೀ ಗಾತ್ರದ ಸುಂಟರಗಾಳಿಯೊಂದು ಕಲ್ಮಾಡಿಯ ಕೊಳ್ಳದಿಂದ ಮೇಲೇಳುತ್ತದೆ. ಆ ಮೂರು ಮರದ ತುಂಡುಗಳೂ ಗಾಳಿಯೊಂದಿಗೆ ತಿರುಗುತ್ತಾ ಮೇಲೆದ್ದು ಪ ( to be contd)....

ಪ್ರವೇಶ ಪರಿಚಯ

baggu_panjurli_70.JPG

ತುಳುನಾಡು ಪರಶುರಾಮ ಸೃಷ್ಟಿಯಲ್ಲಿ ಅನೇಕ ಶಕ್ತಿಗಳ ಉದ್ಭವ ಸ್ಥಳವೆಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಅಂತಹ ಶಕ್ತಿಗಳಲ್ಲಿ ದೈವಗಳೂ, ನಾಗದೇವರೂ ಕೂಡ ಒಂದು. ದೈವಗಳಲ್ಲಿ ಅನೇಕ ಪ್ರಭೇದಗಳಿವೆ. ಅದರಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿ ಎಂದರೆ ಪಂಜಿಯ ಕುರ್ಲೆ ( ಹಂದಿಯ ಮರಿ ) ಎಂದರ್ಥ.

ಈ ಪಂಜುರ್ಲಿ ದೈವಗಳಲ್ಲಿ ಅನೇಕ ಪ್ರಭೇದಗಳಿವೆ. ವರ್ತೆಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ತೇಂಬ್ಯೇಲ್ ಪಂಜುರ್ಲಿ, ಪಟ್ಟದ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಗೋಳಿದಡಿ ಪಂಜುರ್ಲಿ, ಗುಳಿಗ ಪಂಜುರ್ಲಿ, ಬೈಕಡ್ತಿ ಪಂಜುರ್ಲಿ, ಜೋಡು ಪಂಜುರ್ಲಿ ಇತ್ಯಾದಿ.

ಅದೇ ರೀತಿ ಬಗ್ಗು ಪಂಜುರ್ಲಿಯೂ ಒಂದು. ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದ ಕಲ್ಯಾಡಿ ಎಂಬ ಊರಿನಲ್ಲಿ ಹೆಸರಾಂತ ಮನೆತನ ಬಗ್ಗುಮುಂಡ, ಇದು ಕಲ್ಮಾಡಿಯ ಹೊಳೆಯ ಬದಿಯಲ್ಲಿದೆ. ಬಗ್ಗು ಮೊಯ್ದಿಲಿಯ ನಿಷ್ಠೆ ಹಾಗೂ ಸತ್ಯ ಧರ್ಮದಿಂದ ಈ ಮನೆತನಕ್ಕೆ ಅವಳದೇ ಹೆಸರು ಬಂದಿದೆ. ಹಾಗೂ ದೈವ ಪಂಜುರ್ಲಿಯನ್ನು ಬಗ್ಗುನಿಲ್ಲದ ಪಂಜುರ್ಲಿ ಈ ರೀತಿಯಲ್ಲಿ ಕರೆದು ಕೊನೆಗೆ ಬಗ್ಗು ಪಂಜುರ್ಲಿ ಎಂದು ಆಗಿರಬೇಕೆಂದು ಹಿರಿಯರು ಅಭಿಪ್ರಾಯ ಪಡುತ್ತಾರೆ.

ಶ್ರೀ. ಕೃಷ್ಣ ಬಂದು ನೆಲೆಸಿದ ಸ್ಥಳವೆಂದೇ ಪ್ರಸಿದ್ಧಿ ಪಡೆದ ಉಡುಪಿಯ ಮೂಡುಬದಿಯಿಂದ ಸುಮಾರು 15ಕಿ.ಮೀ. ದೂರದಲ್ಲಿದೆ. ಮರ್ಣೆ ಎಂಬ ಪುಟ್ಟ ಗ್ರಾಮ. ಮರ್ಣೆಯಿಂದ ಕಲ್ಮಾಡಿ ಬಗ್ಗು ಮುಂಡಕ್ಕೆ ಸುಮಾರು 20ರಿಂದ 25ಕಿ.ಮೀ ದೂರದ ರಸ್ತೆ ದಾರಿಯಿದೆ. ಹಿಂದೆ ಹೊಳೆಯಲ್ಲಿ ಬರುವಾಗ ಇದಕ್ಕಿಂತಲೂ ದೂರದ ದಾರಿಯನ್ನು ಕ್ರಮಿಸಬೇಕಾಗಿತ್ತು. ಮರ್ಣೆಯಿಂದಲೇ ಪಂಜುರ್ಲಿ ಗಾಣದ ಜಿಡ್ಡೆಯ ಮರದ ಜೊತೆಗೆ ಬಂದಿದ್ದಾನೆ ಎಂಬ ಕಥೆಗೆ ಪೂರಕವಾಗಿ ಕಥೆಯಲ್ಲಿ ಬರುವಂತೆ ಗಣಪಡಲೆರು ( ಗಣಪ ಹೆಗಡೆ ) ಯವರ ಮನೆ ಇತ್ತು ಎನ್ನುವುದಕ್ಕೆ ಈಗಲೂ ಅವರ ಮನೆ ಇದ್ದ ಸ್ಥಳವಿದೆ. ಮನೆ ಬಿದ್ದು ಹೋಗಿ ಆ ಸ್ಥಳದಲ್ಲಿ ಚಿಕ್ಕ ಗುಡ್ಡದ ರೂಪದಲ್ಲಿದೆ. ಮರ್ಣೆಯಲ್ಲಿ ಪಂಜುರ್ಲಿ ದೈವಸ್ಥಾನವಿದ್ದು ಪೂರ್ವದಲ್ಲಿ ಮಣ್ಣಿನ ಗೋಡೆ ಹಾಗೂ ಹುಲ್ಲಿನ ಮಾಡು ಇದ್ದ ದೈವಸ್ಥಾನವನ್ನು ಸುಮಾರು 15 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು, ಈಗ ಹಂಚಿನ ಮಾಡಿನ ಪಂಜುರ್ಲಿ ದೈವಸ್ಥಾನ ಇದೆ. ಕಂಚಿನ ಪಂಜುರ್ಲಿಯ ಚಿಕ್ಕದಾದ ಮುಖವಿದ್ದು ಸಂಕ್ರಾಂತಿಯಿಂದ ಸಂಕ್ರಾಂತಿಗೆ ಪೂಜೆ ನಡೆಯುತ್ತದೆ. ಈ ಪಂಜುರ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ನಾಗಬ್ರಹ್ಮಸ್ಥಾನವೂ ಇದೆ.


ಪಾಡ್ಡನದಲ್ಲಿ ಬರುವಂತೆ ಮರ್ಣೆಯಲ್ಲಿ ಮರ್ಣೆಯ ಗುಂಡಿ ಈಗಲೂ ಇದೆ. ಆ ಜಾಗವೂ ಶೆಟ್ರ ಮನೆತನಕ್ಕೆ ಸೇರಿದೆ. ಆದರೆ ಪಾಡ್ಡನದಲ್ಲಿ ಬರುವ ಗಾಣದ ಜಿಡ್ಡೆಯ ಮರದ ಬುಡ ಮಾತ್ರ ನಶಿಸಿ ಹೋಗಿದೆ. ಇದರ ಬುಡವನ್ನು ಕಂಡಂತಹ ವ್ಯಕ್ತಿಗಳೂ ಈಗಲೂ ಮರ್ಣೆಯಲ್ಲಿದ್ದಾರೆ. ಮರದ ಬುಡವನ್ನು ಕಂಡಂತಹ ಪ್ರತ್ಯಕ್ಷಿದರ್ಶಿಗಳು ಹೇಳಿದ ಜಾಗದಲ್ಲಿ ಹುಡುಕಿದರೂ, ಮರದ ಬುಡದ ಕುರುಹು ಸಿಗಲಿಲ್ಲ.

ಕಲ್ಮಾಡಿಯ ಬಗ್ಗು ಮುಂಡದಲ್ಲಿರುವ ಬಗ್ಗು ಮನೆಯಲ್ಲಿ ಈಗಲೂ ಗಾಣದ ಜಿಡ್ಡೆ ಮತ್ತು ಕತ್ತರಿ ಇದೆ. ಇದನ್ನು ಕೋಣೆಯಲ್ಲಿ ಇಡಲಾಗಿದೆ. ಬಗ್ಗು ಮೊಯ್ದಿಲಿಯ ಕಾಲದಲ್ಲಿ ಮಾಡಿದ ಮಣೆ ಮಂಚಗಳು ಈಗಲೂ ಇದ್ದು ಇದೇ ಮಣೆಮಂಚಗಳಲ್ಲಿ ಮೂಲ ಮೈಸಂದಾಯ ಮತ್ತು ಬಗ್ಗು ಪಂಜುರ್ಲಿ ದೈವವನ್ನು ಆರಾಧಿಸುತ್ತಿದ್ದಾರೆ. ಪಾಡ್ಡನದಲ್ಲಿ ಬರುವಂತೆ ಗಾಣದ ಜಿಡ್ಡೆಯ ಮರವು ಬಗ್ಗು ಮುಂಡಕ್ಕೆ ಬಂದು ಬಿತ್ತು. ನಾಲ್ಕು ಜನ ಅಣ್ಣ ತಮ್ಮಂದಿರು ಮತ್ತು ನಾಲ್ಕು ಮನೆತನದ ಮೊಗವೀರರು ಸೇರಿ ಮರವನ್ನು ಎಳೆದು ಹಾಕಿದರು. ಹಾಗೂ ಬಗ್ಗು ಮನೆಯಲ್ಲಿ ಸೇರಿಗಾರರು, ಬಡಗಿಗಳನ್ನು ಕರೆಸಿ ಗಾಣದ ಜಿಡ್ಡೆಯ ಕೆಲಸ ಮಾಡಿಸಿ ಮೊಗವೀರರ ಜೊತೆಗೆ ಅಣ್ಣತಮ್ಮಂದಿರು ಸೇರಿ ಗಾಣದ ಜಿಡ್ಡೆಯನ್ನು ಹೂಳಿದರು ಹಾಗೂ ಬಗ್ಗು ಪಂಜುರ್ಲಿ ದೈವವನ್ನು ನಂಬಿದರು ಎಂಬುದಕ್ಕೆ ಈಗಲೂ ಕಲ್ಮಾಡಿಯಲ್ಲಿ ಬಗ್ಗು ಮುಂಡ ಎಂಬ ಸ್ಥಳವಿದ್ದು, ಸಾವಿರಾರು ಮೊಗವೀರ ಕುಟುಂಬಿಕರು ಈ ಬಗ್ಗು ಪಂಜುರ್ಲಿಯನ್ನು ನಂಬಿ ಆರಾಧಿಸಿಕೊಂಡು ಬಂದಿದ್ದಾರೆ. ಮಾತ್ರವಲ್ಲದೆ, ಸಂಕೇಶದಲ್ಲಿ ದೈವಸ್ಥಾನವನ್ನು ಕಟ್ಟಿ ಆರಾಧಿಸಿಕೊಂಡು ಬರುತ್ತಿದ್ದಾರೆ.

ಪಾಡ್ದನದಲ್ಲಿ ಬರುವ ಕಥೆಗೆ ಪೂರಕವಾಗಿ ಇಲ್ಲಿ ಸಾಕ್ಷಿಗಳು ಇದ್ದು, ಇದು ಕಥೆಯಲ್ಲ ನಿಜ ಘಟನೆ ನಡೆದಿದ್ದು. ದೈವ ಪಂಜುರ್ಲಿಯು ಮರ್ಣೆಯಿಂದ ಕಲ್ಮಾಡಿ ಬಗ್ಗು ಮುಂಡಕ್ಕೆ ಗಾಣದ ಜಿಡ್ಡೆಯ ಜೊತೆಗೆ ಬಂದು ಬಗ್ಗು ಮೊಯ್ದಿಲಿಯ ಸತ್ಯ ಧರ್ಮಕ್ಕೆ ಮೆಚ್ಚಿ ಬಗ್ಗು ಪಂಜುರ್ಲಿಯಾಗಿ ಕಾರ್ಣಿಕವನ್ನು ಮೆರೆದು ನೆಲೆಯಾಗಿದ್ದಾನೆ ಎಂಬ ವಿಚಾರ ಎಂದಿಗೂ ಸುಳ್ಳಾಗುವುದಿಲ್ಲ. ಏಕೆಂದರೆ ಇಷ್ಟು ಸಾಕ್ಷಾಧಾರಗಳಿರುವ ಒಂದು ನೈಜ ಘಟನೆಯ ಐನೂರು ವರ್ಷಗಳ ಇತಿಹಾಸವಿರುವ, ಭಕ್ತಾಧಿಗಳ ಇಷ್ಟಾರ್ಥವನ್ನು ಈಡೇರಿಸಿ ಸಾವಿರಾರು ಭಕ್ತರ ಭಕ್ತಿಯ ಕೇಂದ್ರವಾಗಿ ಮೆರೆದಿದ್ದಾನೆ ಕಲ್ಮಾಡಿಯ ಬಗ್ಗು ಮುಂಡದ ಬಗ್ಗು ಪಂಜುರ್ಲಿ.

baggu_panjurli_52.JPG

baggu_panjurli_50.JPG

baggu_panjurli_36.JPG

baggu_panjurli_17.JPGಕ್ಷೇತ್ರ ಪರಿಚಯ...

ಕಲ್ಮಾಡಿಯ ಬಗ್ಗು ಮುಂಡದಲ್ಲಿರುವ ಮೊಯಿಲ್ದಿ ಸಂಸಾರ ( ಸೇರಿಗಾರ ) ದಲ್ಲಿ ಸುಮಾರು ೩೦ ಸೆಂಟ್ಸ್ ಸ್ಥಳದಲ್ಲಿ ಬಗ್ಗು ಪಂಜುರ್ಲಿ ದೈವಸ್ಥಾನ ಅತೀ ಪುರಾತನವಾದ ೫೦೦ ವರ್ಷ ಇತಿಹಾಸವನ್ನು ಸಾರುವ ಗೋಳಿಮರದ ಕೆಳಗೆ ನಾಗ ದೇವರ ಬನ, ಪರಿವಾರ ಶಕ್ತಿಗಳಾದ ರಕ್ತೇಶ್ವರಿ, ನಂದಿಕೇಶ್ವರ ಹಾಗೂ ಬಬ್ಬರ್ಯ, ಬೈಕಾಡ್ತಿ, ನೀಚ ಹಾಗೂ ರಾಹು ದೈವಗಳು ಸಾನಿಧ್ಯದಲ್ಲಿ ಆರಾಧಿಸಲ್ಪಡುತ್ತವೆ. ಬಗ್ಗು ಪಂಜುರ್ಲಿಯ ದೈವಸ್ಥಾನದ ಮುಂಭಾಗದಲ್ಲಿ ಕೋಲ ಚಪ್ಪರ ಹಾಗೂ ದೈವಸ್ಥಾನಕ್ಕೆ ಸರಿಯಾದ ಹೆಬ್ಬಾಗಿಲಿದೆ.

 ಬಗ್ಗು ಪಂಜುರ್ಲಿಯ ದೈವಸ್ಥಾನವು ಸುಮಾರು ೯ ಕೋಲು ಉದ್ದ, ೫ ಕೋಲು ಅಗಲವಿದ್ದು ಬಗ್ಗು ಪಂಜುರ್ಲಿಯ ಮಣೆ ಮಂಚವು ಒಂತಿ ಕಂಬದ ರೂಪದಲ್ಲಿದ್ದು ಈ ಮಣೆ ಮಂಚವು ಬಗ್ಗು ಮೊಯಿಲ್ದಿಯ ಕಾಲದ್ದೇ ಆಗಿದ್ದು ಮೈಸಂದಾಯ ಮಣೆಮಂಚವು ನಾಲ್ಕು ಕಾಲಿನಿಂದ ಮಾಡಿದ ಮಣೆ ಮಂಚವಾಗಿದ್ದು ಇದೂ ಕೂಡ ಬಗ್ಗು ಮೊಯಿಲ್ದಿಯ ಕಾಲದ್ದೇ ಆಗಿರುತ್ತದೆ.

 ಮುಂಚೆ ಬಗ್ಗು ಪಂಜುರ್ಲಿಯ ಮುಖವು ಕಂಚಿನ ಮುಖ ಆಗಿದ್ದು ಈಗ ದೈವಾನುಗ್ರಹದಿಂದ ಬೆಳ್ಳಿಯ ಮುಖದಲ್ಲಿ ದೈವವನ್ನು ಆರಾಧಿಸುತ್ತಿದ್ದಾರೆ. ಹಂದಿಯ ಮೇಲೆ ಕುಳಿತಿರುವ ಪಂಜುರ್ಲಿಯ ಮೂರ್ತಿ ಹಾಗೂ ಅದರ ಹಿಂದಿನ ಪ್ರಭಾವಳಿಯಿಂದ ಕೂಡಿದ ಅತೀ ಸುಂದರವಾದ ಮೂರ್ತಿಯು ಸಾನಿಧ್ಯದಲ್ಲಿ ಆರಾಧಿಸಲ್ಪಡುತ್ತಾರೆ.

 ದೈವ ಬಗ್ಗು ಪಂಜುರ್ಲಿಯ ದೈವಸ್ಥಾನದ ಬಲ ಭಾಗದಲ್ಲಿ ಗಾಣದ ಜಿಡ್ಡೆಯನ್ನು ಪ್ರತ್ಯೇಕ ಕಟ್ಟದಲ್ಲಿ ಜೋಪಾನವಾಗಿ ಇಡಲಾಗಿತ್ತು. ಗಾಣದ ಜಿಡ್ಡೆಯು ೩ ಅಡಿ ಎತ್ತರ ೮.೫ ಅಡಿ ಸುತ್ತಳತೆ ಇದ್ದು ಇದರಲ್ಲಿ ದೈವದ ಅಂಶವಿದೆ ಎಂಬ ನಂಬಿಕೆಯು ಸಂಸಾರ ಹಾಗೂ ಭಕ್ತಾಧಿಗಳಲ್ಲಿ ಇದೆ. ದೈವ ಬಗ್ಗು ಪಂಜುರ್ಲಿಗೆ ಹಾಗೂ ಗಾಣದ ಜಿಡ್ಡೆಗೆ ಸಂಬಂಧವೆಂಬಂತೆ ಗರ್ಭ ಗುಡಿಯ ದಕ್ಷಿಣ ಪೂರ್ವ ಮೂಲೆಯಲ್ಲಿ ಕಿಟಕಿ ಇದ್ದು ಗರ್ಭ ಗುಡಿಯ ಒಳಗೆ ಬೇರೇ ಯಾವುದೇ ಕಿಟಕಿ ಇರುವುದಿಲ್ಲ. ಗಾಣದ ಜಿಡ್ಡೆಯ ಕಟ್ಟಡದ ಪೂರ್ವದಲ್ಲಿ ಶಾಶ್ವತ ಕೋಲ ಚಪ್ಪರವಿದೆ. ಎಣ್ಣೆ ತೆಗೆಯಲು ಉಪಯೋಗಿಸುವ ಗಣೆ ಮರ, ಕತ್ತರಿ ಮೊದಲಾದ ಇತರ ಸಾಮಾಗ್ರಿಗಳು ಹಾಳಾಗಿ ನಶಿಸಿ ಹೋಗಿವೆ.

 ಸುಗ್ಗಿ ತಿಂಗಗಳಲ್ಲಿ ( ಮಾರ್ಚ್ ತಿಂಗಳು ) ಕಾಪು ಮಮ್ಮಾಯಿಯ ಮಾರಿ ಪೂಜೆ ಸೇವೆ ನಡೆದ ಮೂರನೆ ದಿನ ( ಶುಕ್ರವಾರ ) ಬಗ್ಗು ಪಂಜುರ್ಲಿ ಮತ್ತು ಪರಿವಾರ  ದೈವಗಳ ಕೋಲ ನಡೆಯುತ್ತದೆ. ಈ ಸಾನಿಧ್ಯದಲ್ಲಿ ಬಗ್ಗು ಪಂಜುರ್ಲಿ, ಬಬ್ಬರ್ಯ, ಬೈಕಾಡ್ತಿ, ನೀಚ ಈ ದೈವಗಳಿಗೆ ಮಾತ್ರ ಕೋಲ ನಡೆಯುತ್ತಿದ್ದು ಬಬ್ಬರ್ಯನು ಬಗ್ಗು ಮುಂಡಕ್ಕೆ ಸವಾರಿ ಹೋಗುವ ಕ್ರಮವಿದ್ದು ಸವಾರಿಯ ಸಮಯದಲ್ಲಿ ಹಾಲು ಮತ್ತು ಸೀಯಾಳವನ್ನು ಭಕ್ತಾಧಿಗಳು ಬಬ್ಬರ್ಯನಿಗೆ ನೀಡುತ್ತಾರೆ.

baggu_panjurli_72.JPG

ಬಗ್ಗು ಮುಂಡದಲ್ಲಿನ ಬಗ್ಗು ಪಂಜುರ್ಲಿ ದೈವಸ್ಥಾನದಲ್ಲಿ ಸೇವೆ ಮಾಡಿಕೊಂಡು ಬಂದಿರುವ ಸಾನಿಕರುಗಳು :

 ರಾಜ ಸೇರಿಗಾರ

 ಸೂರ್ಯ ಸೇರಿಗಾರ

 ತಂಬು ಸೇರಿಗಾರ

 ಗುಡ್ಡ ಸೇರಿಗಾರ ( ಕಥೆಯಲ್ಲಿ ಬರುವಂತೆ )

 ( ನಂತರದ ಸಾನಿಕರುಗಳ ಹೆಸರುಗಳು ಲಭ್ಯವಿಲ್ಲದೆ ಸಂಸಾರದವರು ತಿಳಿಸಿದ ರೀತಿಯ ಪ್ರಕಾರ )

 ದಿ| ಶ್ರೀ. ಕೊರಗ ಸೇರಿಗಾರ

 ದಿ| ಶ್ರೀ. ಗಂಗಯ್ಯ ಸೇರಿಗಾರ

 ಶ್ರೀ. ಚಂದ್ರಶೇಖರ್ ಶೇರಿಗಾರ ( ಈಗಿನ ಸಾನಿಕರು ).

 ಕಲ್ಮಾದಿ ಬಗ್ಗು ಪಂಜುರ್ಲಿ ಸಾನಿಧ್ಯದಲ್ಲಿ ಮತ್ತು ನಾಗಬನದಲ್ಲಿ ಪೂಜಾವಿಧಿಗಳನ್ನು ನಡೆಸಿಕೊಂಡು ಬಂದಿರುವ ಕುಲೋತ್ತಮರು, ಪಾದೆಗಣಪತಿ ಮಠದ ಮನೆತನದವರು

 ದಿ | ಶ್ರೀ.ಕೃಷ್ಣ ಭಟ್ ( ಸುಬ್ರಮಣ್ಯ ಭಟ್ರ ತಂದೆ )

 ದಿ | ಶ್ರೀ. ಸುಬ್ರಹ್ಮಣ್ಯ ಭಟ್ ( ರಘುರಾಮ ಭಟ್ರ ತಂದೆ )

 ದಿ | ರಘುರಾಮ್ ಭಟ್ ( ಅಚ್ಚುತ ಭಟ್ರ ತಂದೆ )

 ಶ್ರೀ. ಅಚ್ಚುತ ಭಟ್ ( ಗಣೇಶ್ ಭಟ್ರ ತಾತ )

 ಶ್ರೀ. ಗಣೇಶ್ ಭಟ್ ( ಈಗಿನ ಪೂಜೆ ಭಟ್ರು )

 ಕದಿಕೆ ಮನೆತನದ ಬಗ್ಗು ಪಂಜುರ್ಲಿ ದೈವಸ್ಥಾನದಲ್ಲಿ ಪೂಜೆ ಮಾದಿದ ಸಾನಿಕರು :

 ದೇಜ ಬೆರ್ಮು ಸೇರಿಗಾರ ( ಕಥೆಯಲ್ಲಿ ಇದ್ದಂತೆ )

 ಅಣ್ಣಪ್ಪ ಸೇರಿಗಾರ

 ರಾಮ ಸೇರಿಗಾರ

 ಮೈಂದ ಸೇರಿಗಾರ

 ತುಕ್ರ ಸೇರಿಗಾರ

 ಸೀನ ಸೇರಿಗಾರ ( ೭೫ ವರ್ಷ ಈಗಿನ ಸಾನಿಕರು. ಮನೆತನದವರು ತಿಳಿಸಿದ ರೀತಿಯಲ್ಲಿ )

baggu_panjurli_71.JPG

baggu_panjurli_49.JPG

baggu_panjurli_19.JPG

baggu_panjurli_1.JPG

baggu_panjurli_11.JPG

baggu_panjurli_10.JPG

baggu_panjurli_49.JPG

 

baggu_panjurli_4.JPG

baggu_panjurli_38.JPG

baggu_panjurli_37.JPG

 

baggu_panjurli_9.JPG

baggu_panjurli_8.JPG

baggu_panjurli_45.JPG

baggu_panjurli_46.JPG

 

X

Right Click

No right click