ದೇವಾಡಿಗ ಸಂಘ ಮುಂಬೈ - ಮಹಿಳಾ ವಿಭಾಗದ ವತಿಯಿಂದ " ಆಟಿದ ಒಂಜಿ ದಿನ " ಆಚರಣೆ
ದಾದರ್ ಪೂರ್ವದ ದೇವಾಡಿಗ ಸೆಂಟರ್ ನಲ್ಲಿ ದೇವಾಡಿಗ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿದ ಒಂಜಿ ದಿನ ಕಾರ್ಯಕ್ರಮವು ದಿನಾಂಕ 22 ಶನಿವಾರ ಮದ್ಯಾಹ್ನ ಬಹಳ ಅದ್ದೂರಿಯಾಗಿ ಜರುಗಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ಜಾತಿ ಭಾಂಧವರ ಸದಸ್ಯತನದ ಗಣತಿ ಮತ್ತು ವೈದ್ಯಕೀಯ ನಿಧಿ ಸಂಗ್ರಹ಼ದ ಬಗ್ಗೆ ಸಹಕಾರ ನೀಡುವಂತೆ ಸಂಘದ ಸದಸ್ಯರಲ್ಲಿ ವಿನಂತಿಸಿದರು. ಅಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮವು ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ ಮತ್ತು ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ವಿ. ಶೇರಿಗಾರ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ರಘು ಮೊಯ್ಲಿ ಯವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪ ಸಮಿತಿಯ ಸದಸ್ಯರು, ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಗಳ ಪಧಾಧಿಕಾರಿಗಳು, ಯುವ ವಿಭಾಗದವರು ಹಾಗೂ ಮಹಿಳಾ ಸದಸ್ಯರನ್ನು ಸ್ವಾಗತಿಸಿದರು. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸದಸ್ಯೆಯರಿಗೆ ವಿನಂತಿ ಮಾಡಿದರು.
ಊರಿನಲ್ಲಿ ಆಟಿ ತಿಂಗಳಿನಲ್ಲಿ ಜನರು ಕಾರ್ಯ ಕೆಲಸಗಳ, ಆಚರಿಸುವ ಹಬ್ಬಗಳ, ಆಟಿ ಕಲಿಂಜ ಮುಂತಾದ ಮಾಹಿತಿಯನ್ನು ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಆರ್ ಮೊಯಿಲಿಯವರು ನೀಡಿದರು. ಮಹಿಳಾ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ವಾಸು ದೇವಾಡಿಗರು ಪ್ರತಿಭಾ ಸ್ಪರ್ಧೆ ಏರ್ಪಡಿಸಿದ್ದು ಮಾತ್ರವಲ್ಲದೆ ಅದರ ಬಹುಮಾನಗಳ ಪ್ರಾಯೋಜಕತ್ವ ವಹಿಸಿದರು.
ಆಯಾ ವಸ್ತುಗಳ ಬ್ರಾಂಡ್ ಹೆಸರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶ್ರೀಮತಿ ಸುಜಾತ ಆರ್ ಶೇರಿಗಾರ್, ದ್ವಿತೀಯ ಬಹುಮಾನ ಶ್ರೀಮತಿ ಪ್ರಭಾ ಆರ್ ದೇವಾಡಿಗ ಹಾಗೂ ತೃತೀಯ ಬಹುಮಾನ ಶ್ರೀಮತಿ ಸೀಮಾ ಆರ್ ದೇವಾಡಿಗರು ಪಡೆದರೆ, ಟ್ಯಾಗ್ ದ ಲ್ಯನ್ ಸ್ಪರ್ದೆಯಲ್ಲಿ ಮೊದಲನೆಯದಾಗಿ ಕುಮಾರಿ ಐಶ್ವರ್ಯ ಆರ್ ಮೊಯಿಲಿ, ದ್ವಿತೀಯ ಕುಮಾರಿ ಶ್ರುತಿ ದೇವಾಡಿಗ ಹಾಗೂ ತೃತೀಯ ಕುಮಾರಿ ಅಪೇಕ್ಷ ದೇವಾಡಿಗರು ಬಹುಮಾನ ಪಡೆದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿಯವರು ಸಹಕರಿಸಿದರೆ, ತುಳುನಾಡಿನ ಬಗ್ಗೆ ಪ್ರತಿಭಾ ಸ್ಪರ್ಧೆಯನ್ನು ಶ್ರೀಮತಿ ಜಯಂತಿ ಆರ್ ಮೊಯಿಲಿಯವರು ಪ್ರಾಯೋಜಿಸಿದರು.
ಶ್ರೀಮತಿ ಲಕ್ಷ್ಮಿ ಜಿ ದೇವಾಡಿಗ, ಕುಮಾರಿ ಶೇಫಾಲೀ ದೇವಾಡಿಗ, ಶ್ರೀಮತಿ ಲೋಲಾಕ್ಶಿ ದೇವಾಡಿಗ ಮತ್ತು ಶ್ರೀಮತಿ ಸರೋಜಿನಿ ದೇವಾಡಿಗರು ತುಳು ಜಾನಪದ ಮತ್ತು ಭಾವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮಹಿಳಾ ಸದಸ್ಯರು ಆಟಿ ತಿಂಗಳ ವ್ಯಂಜನಗಳನ್ನು ಪ್ರದರ್ಶಿಸಿ ತಮ್ಮ ಪಾಕ ವಿಶೇಷತೆಯನ್ನು ಮೆರೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣವನ್ನು ಸುಂದರವಾಗಿ ವಿನ್ಯಾಸ ಮಾಡಿದ ಯುವ ವಿಭಾಗದ ನೀತೇಶ್ ದೇವಾಡಿಗರನ್ನು ಅಭಿನಂದಿಸಲಾಯಿತು.
ಮಾಜಿ ಅಧ್ಯಕ್ಷರಾದ ವಾಸು ದೇವಾಡಿಗರು, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ ಮತ್ತು ಯುವ ವಿಭಾಗದ ಮಾರ್ಗದರ್ಶಕ ಶ್ರೀ ಗಿರೀಶ್ ದೇವಾಡಿಗರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ಕೆ.ಮೋಹನ್ದಾಸ್, ಹಿರಿಯಡ್ಕ ಮೋಹನ್ದಾಸ್, ಉಪಾಧ್ಯಕ್ಷ ಶ್ರೀ ಭಾಸ್ಕರ್ ರಾವ್, ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಜತೆ ಕೋಶಾಧಿಕಾರಿ ಶ್ರೀ ದಯಾನಂದ್ ದೇವಾಡಿಗ, ಮತ್ತು ಸಂಘದ ವೈದ್ಯಕೀಯ ಘಟಕದ ಕಾರ್ಯಾಧ್ಯಕ್ಷ ಶ್ರೀ ಜನಾರ್ಧನ ದೇವಾಡಿಗರು ಹಾಗೂ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಶ್ರೀಮತಿ ಪ್ರಮಿಳಾ ವಿ. ಶೇರಿಗಾರ್ ನಿರೂಪಿಸಿದರೆ, ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗರು ವಂದನಾರ್ಪಣೆಗೈದರು.