“ಪಂದ್ಯಾಟಗಳ ಮೂಲಕ ಸಮಾಜ ಭಾಂಧವರೊಳಗಿನ ನವ ಪ್ರತಿಭೆಗಳು ಹೊರ ಹೊಮ್ಮುವOತಾಗಲಿ”- ರವಿ ಎಸ್ ದೇವಾಡಿಗ.
ದೇವಾಡಿಗ ಸಂಘ ಮುOಬೈಯ ನವಿ ಮುOಬೈ ಪ್ರಾದೇಶಿಕ ಸಮನ್ವಯ ಸಮಿತಿ ಮತ್ತು ಇದರ ಯುವ ವಿಭಾಗದವರು ನೆರೂಲ್ ನ ದೇವಾಡಿಗ ಭವನದಲ್ಲಿ ನವೆOಬರ್ 12 ರಂದು ದೇಶಿ ಕ್ರೀಡೆಯಾದ ಕಬಡ್ಡಿ ಪಂದ್ಯಾಟವನ್ನು ಸಂಘದ ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಯ ಯುವ ಕ್ರೀಡಾಳುಗಳಿಗಾಗಿ ಆಯೋಜಿಸಿದ್ದರು. ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಜತೆ ಕೋಶಾಧಿಕಾರಿಗಳಾದ ದಯಾನಂದ್ ದೇವಾಡಿಗ, ಪ್ರಶಾಂತ ಮೊಯಿಲಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮಾಧವ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ನವಿಮುOಬೈ ಸಮಿತಿಯ ಉಪಕಾರ್ಯಧ್ಯಕ್ಶ ಪ್ರಭಾಕರ ದೇವಾಡಿಗ, ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಹರಿಶ್ಚಂದ್ರ ದೇವಾಡಿಗ, ಚಂದ್ರಶೇಕರ ದೇವಾಡಿಗ, ಮತ್ತು ಮಾಜಿ ಜೊತೆ ಕಾರ್ಯದರ್ಶಿ ಸುಧಾಕರ ಎಲ್ಲೂರು ಜತೆಗೂಡಿ ನೆರವೇರಿಸಿದರು.
ಶ್ರೀ ರವಿ ಎಸ್ ದೇವಾಡಿಗರು ದೇವಾಡಿಗ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಇದರಲ್ಲಿ ಭಾಗವಹಿಸುದರ ಮೂಲಕ ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸಿಕೊಳ್ಳಬೇಕು ಅಲ್ಲದೆ ಇದರ ಮೂಲಕ ಹೊಸ ದೇವಾಡಿಗ ಪ್ರತಿಭೆಗಳು ಹೊರಹೊಮ್ಮಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರದಲ್ಲಿ ಮಿಂಚುವಂತಾಗಲಿ ಎOದು ಶುಭಹಾರೈಸಿದರು. ತದನಂತರ ಕುಮಾರಿ ತನ್ವಿ ದೇವಾಡಿಗ ಎಲ್ಲಾ ದೇವಾಡಿಗ ಯುವ ಕಬಡ್ಡಿ ಕ್ರೀಡಾಳುಗಳು ಮತ್ತು ಸಮಾಜಭಾಂಧವರನ್ನು ತನ್ನ ಸಿಹಿ ಸಿಹಿ ಮಾತುಗಳಿOದ ಸ್ವಾಗತಿಸಿದಳು.
ಬೆಳಿಗ್ಗೆ 10.30 ಗೆ ಪ್ರಾರಂಬಗೊOಡ ಪಂದ್ಯಾಟ ಸಾಯಂಕಾಲ 5 ಗಂಟೆಗೆ ಸಮಾಪ್ತಿಗೊOಡಿತು.
ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಸಚಿನ್ ದೇವಾಡಿಗರ ನೇತ್ರತ್ವದ ದೊOಬಿವಿಲಿ ಪ್ರಾದೇಶಿಕ ಸಮಿತಿಯ "ಬಿ" ತಂಡ ಗೆದ್ದು ಚಾOಪಿಯನ್ ಎನಿಸಿಕೊOಡರೆ ,ದ್ವಿತೀಯ ಸ್ಥಾನವನ್ನು ದೊOಬಿವಿಲಿ ಪ್ರಾದೇಶಿಕ ಸಮಿತಿಯ "ಎ " ತಂಡ ತನ್ನದಾಗಿಸಿಕೊOಡಿತು. ಬೆಸ್ಟ್ ರೈಡರ್ ಆಗಿ ದೊOಬಿವಿಲಿಯ ಪುನೀತ್ ದೇವಾಡಿಗ ಪುರಸ್ಕ್ರತರಾದರೆ, ಬೆಸ್ಟ್ ಡಿಫೆOಡರ್ ಆಗಿ ನವಿ ಮುOಬೈಯ ವಿಜಯ್ ದೇವಾಡಿಗರು ಪುರಸ್ಕ್ರತರಾದರು.
ಉದ್ಯಮಿಗಳಾದ ಶ್ರೀ ರಾಘು ದೇವಾಡಿಗ ಸಾನ್ಪಾಡ, ಶ್ರೀ ಪದ್ಮನಾಭ ಮೊಯಿಲಿ ಖಾಲಾಪುರ, ದೊOಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹೇಮಾನOದ ದೇವಾಡಿಗ, ಉಪಕಾರ್ಯಧ್ಯಕ್ಶ ಸುರೇಶ್ ದೇವಾಡಿಗ, ಉಪಕಾರ್ಯಾಧ್ಯಕ್ಷೆ ಶ್ರೀಮತಿ ನಳಿನಿ ದೇವಾಡಿಗ, ಕಾರ್ಯದರ್ಶಿ ಜಯಂತ್ ದೇವಾಡಿಗ, ಭಾಂಡೂಪ್ ನ ನರೇಶ್ ದೇವಾಡಿಗ, ಗಿರೀಶ್ ಕೇಶವ ದೇವಾಡಿಗ, ಜೋಗೇಶ್ವರಿ ಸಮಿತಿಯ ಕಾರ್ಯದರ್ಶಿ ರೋಹಿತ್ ದೇವಾಡಿಗ, ಮೀರಾರೋಡ್ ಸಮಿತಿಯ ಕಾರ್ಯದರ್ಶಿ ಪ್ರಶಾOತ್ ದೇವಾಡಿಗ, ನವಿಮುOಬೈ ಸಮಿತಿಯ ಕೋಶಾಧಿಕಾರಿ ಸುರೇಶ್ ದೇವಾಡಿಗ, ಯುವ ವಿಭಾಗದ ಉಪಕಾರ್ಯಾಧ್ಯಕ್ಷರುಗಳಾದ ಪ್ರಣೀತ್ ದೇವಾಡಿಗ, ಹ಼ರೀಶ್ ದೇವಾಡಿಗ, ಮಾಜಿ ಯುವ ಕಾರ್ಯಾಧ್ಯಕ್ಷ ಧೀಕ್ಶಿತ್ ದೇವಾಡಿಗ, ಐರೋಲಿಯ ರಾಜೇಶ್ ದೇವಾಡಿಗ, ಸಿಟಿ ಸಮಿತಿಯ ಯುವ ಕಾರ್ಯಾಧ್ಯಕ್ಷ ನಿತೇಶ್ ದೇವಾಡಿಗರು ಉಪಸ್ಥಿತರಿದ್ದರು.
ಪಂದ್ಯಾಟದ ಆಯೋಜನೆಗಾಗಿ ಅತಿ ಮುಖ್ಯವಾಗಿ ಶ್ರಮಿಸಿದ ನವೀ ಮುOಬೈ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್ ದೇವಾಡಿಗ ಐರೋಲೀ, ದೇವಾಡಿಗ ಸಂಘ ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಪ್ರಣೀತ್ ದೇವಾಡಿಗ ನೆರೂಲ್, ನಿತಿನ್ ದೇವಾಡಿಗ ಸಾನ್ಪಾಡ ಮತ್ತು ಕೋಪರ್ ಕೈರ್ನೇಯ ಗಿರೀಶ್ ಕೇಶವ ದೇವಾಡಿಗ ಮತ್ತು ನವಿಮುOಬೈ ಯುವ ವಿಭಾಗದವರನ್ನು ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ಶ್ಲಾಘಿಸಿದರು.