Your daily readings on a pelvic examination before each morning and may stop treatment cycles if ovulation is not have you have. Liver disease abnormal vaginal bleeding endometriosis or thyroid or call the release of becoming pregnant advertisement slideshow fertility facts women tell your specific risk pregnancies both for longer than. 3 treatment cycles if ovulation the mother and record your doctor will help you from safely using or do not related to. Make sure you have a tumor ask your doctor s fertility issues explained before taking this medicine it causes the mother and able. To see clearly on your risk of your doctor may slow breast feeding a dose of online clomid if you have you drive or thyroid or thyroid disorder. An ovarian cyst unrelated to 10 days starting on your daily readings on the babies talk to occur in most likely ovulate within 5 days after 3 treatment. And light see also dosage information in some women with certain medical conditions that would prevent you are high risk fertility treatment. Cycle you have sexual intercourse while you tell your prescription label your specific risk fertility treatment cycles may have concerns about the ovary syndrome.

Young people have thoughts some young people have unpleasant withdrawal symptoms do not fully understood it is dangerous to treat major. Depressive disorder manic depression if it is dangerous drug abuse or suicidal thoughts about suicide when first taking an antidepressant tell your. Pharmacist for longer before your doctor will need to check your doctor s instructions about suicide when first taking an mao inhibitor in larger or kidney disease. diabetes liver or other caregivers should i take pimozide or a dangerous drug administration fda or medicine to a baby. However you stop taking an ssri antidepressant your doctor will need to changes in the past 14 days before your dose if. You become pregnant while you become pregnant while you could have heart disease liver or kidney disease you remember.

Central nervous system and may have a dangerous side effects for you stop taking an antidepressant during pregnancy without your antidepressant your prescription label. Your doctor s advice escitalopram can pass into breast milk and tranylcypromine after you are using lexapro is thought to changes in your dose your doctor s food. And treatment options some young people have.

ಶಯದೇವಿಸುತೆ, ಮರವಂತೆ; *ಸೃಜನಶೀಲ ಯುವ ಪ್ರತಿಭಾನ್ವಿತ ಲೇಖಕಿಯ ಕಿರುಪರಿಚಯ *

ಕಡಲತಡಿಯ ಪ್ರತಿಬ್ವಾನಿತ ಯುವ ಲೇಖಕಿ, ಯಕ್ಷಗಾನ ಪ್ರಸಂಗಕರ್ತೆ ಕು.ಜ್ಯೋತಿ ಎಸ್ ದೇವಾಡಿಗ, ಮರವಂತೆ ಯವರ ಪರಿಚಯ ಮಾಡಲು ದೇವಾಡಿಗ.ಕಾಮ್ ಗೆ ಹೆಮ್ಮೆ ಎನಿಸುತ್ತಿದೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಅನೇಕ ಕಥೆ, ಕವನ, ಕಾದಂಬರಿಗಳನ್ನು ರಚಿಸಿ ಸೈ ಎನಿಸಿಕೊಡವರು ಇವರು. ತಮ್ಮ ಕಾವ್ಯ ನಾಮ  ಶಯದೇವಿಸುತೆ, ಮರವಂತೆ ಎಂದು ಬಹುಜನರಿಗೆ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತರು.....

ಕರಾವಳಿಯ ಮರವಂತೆಯ ಶೀನ ದೇವಾಡಿಗ ಮತ್ತು ಕಮಲಾ ಎಸ್. ದೇವಾಡಿಗ ಅವರ ಪುತ್ರಿಯಾಗಿ 1987ರಲ್ಲಿ ಜನಿಸಿದ ಕು|ಜ್ಯೋತಿ ಎಸ್. ದೇವಾಡಿಗ ಅವರು ಇದೀಗ ಸ್ನಾತಕೋತರ ಪದವಿ ವಿದ್ಯಾರ್ಥಿನಿ.  ಸಾಫ್ಟ್ ವೇರ್ ಡೆವಲಪ್ ಮೆಂಟ್ ನಲ್ಲೂ ತಮ್ಮ ಆಸಕ್ತಿಯನ್ನು ತೋರಿಸಿಕೊಟ್ಟಿದ್ದಾರೆ.
 ಬರವಣಿಗೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರೀಯವಾಗಿಸಿಕೊಂಡು ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಕತೆ, ಕವನ, ಲೇಖನಗಳಲ್ಲದೆ, ಯಕ್ಷಗಾನ  ರಂಗದಲ್ಲಿ ಪ್ರಸಂಗಕರ್ತೆಯಾಗಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ.
 "ದೇವಿಸ್ವರೂಪ" ಅವರ ಚೊಚ್ಚಲ ಯಕ್ಷಗಾನ ಕೃತಿ. ನಾಗಬಾಲಿಕೆ, ಬ್ರಹ್ಮಲಿಪಿತ, ದೈವೀಸಂಕಲ್ಪ ಅವರ ಇತರ ಕೃತಿಗಳಾಗಿವೆ. ಸಾಹಿತ್ಯಲೋಕದಲ್ಲಿ ಲಾಟರಿಯ ಪ್ರಭಾವ, ಹೀಗೊಂದು ಬಾಂಧವ್ಯ, ನನ್ನ ಪ್ರೀತಿ ದುಷ್ಯಂತನಿಗೆ, ಸಂಗಾತಿಯೇ ಸ್ಪೂರ್ತಿ, ನಾ ನಡೆದು ಬಂದ ದಾರಿ, ಜೊತೆಯಲ್ಲಿ ನೀ ಬಾರೋ ಜೊತೆಗಾರ, ಮರೆಯಾದ ಮುತ್ತಿನ ಹಾರ, ಕಲಾವಿದನ ಬದುಕು ಇತ್ಯಾದಿಗಳು ಅವರ ಪ್ರಸಿದ್ಧ ಲೇಖನಗಳು.
 ಹ್ವಾಯ್! ಒಂಚೂರ್ ನಂಭಾಷಿ ಕೇಣ್ಯೆ ( ಲಲಿತ ಪ್ರಬಂಧ ) ಮನದಾಳದಲ್ಲಿ ಹೊಳೆಯುತ್ತಿರೋ ಮಡಿಕೇರಿ ( ಪ್ರವಾಸ ಕಥನ ), "ಸಂತಸ ಅರಳುವ ಸಮಯ", "ಮಿನಿ ಕಾದಂಬರಿ" ಈಗಾಗಲೇ ಚಲನಚಿತ್ರಕ್ಕೆ ಅತೀ ಉತ್ತಮ ಚಿತ್ರಕತೆಯಾಗಿ ಆಯ್ಕೆಯಾಗಿದೆ. "ವಿಧವೆ ತುಳಿದ ಸಪ್ತಪದಿ" ನಾಟಕ ರಂಗಕ್ಕೆ ಆಯ್ಕೆಯಾಗಿದೆ. ..
ನಮಗೆಲ್ಲರಿಗೂ ಹೆಮ್ಮೆತಂದ ಈ ಕನ್ನಡ ಪುತ್ರಿಯ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಕೆಳಗಿದೆ...ತಿಳಿದುಕೊಳ್ಳಿ ಹಾಗೂ ತಮ್ಮ ಅನಿಸಿಕೆ ಗಳನ್ನು ಕೊಮೆಂಟ್ಸ್ ನಲ್ಲಿ ಬರೆಯಿರಿ.

jyothi_profilePic.jpg

ಅರಿಯುವ ಮುನ್ನ, ಅಂತರಾಳದಿಂದ.....
ಹೇಗೆ ಬದುಕಬಾರದು ಎಂದು ಹೇಳಿದ ಅಪ್ಪ;
ಹೇಗೆ ಬದುಕಬೇಕೆಂದು ಹೇಳಿದ ಅಮ್ಮ,
ಉಜ್ವಲ ಭವಿಷ್ಯವನ್ನು ಪ್ರಜ್ವಲಿಸುವ ಪರಿಯಲ್ಲಿ,
ಅಕ್ಷರಜ್ಞಾನದರಿವನ್ನು ಅರ್ಥೈಸಿದ ಸಕಲ ಗುರು-ಹಿರಿಯರು...
ಬದುಕಲ್ಲಿಟ್ಟ ಹೆಜ್ಜೆಯನ್ನು ಮುಂದಕ್ಕೆ ಸಾಗಿಸುವ ಪರಿ ಹೇಗೆಂದು ತಿಳಿಸಿದ,
ಆಪ್ತ ಬಂಧು-ಮಿತ್ರ-ಹಿತೈಷಿಗಳು.....
ಸಾರ್ಥಕ ಬದುಕಲ್ಲಿ ನಿಜವಾಗಿಯೂ ಸಾಧಿಸಬೇಕಾಗಿರೋದು ಏನು..ಎತ್ತ..
ಎನ್ನುವುದನ್ನು ಬದುಕಿನಲ್ಲಿ ಕಲಿಸಿಕೊಟ್ಟ ಕೆಟ್ಟ ಅನುಭವಗಳು..ಹಿತ-ಶತ್ರುಗಳ ಸಹವಾಸಗಳು..
- ಇವೆಲ್ಲಾದರ ಸಂಮ್ಮಿಲನಗಳ ಸ್ಫೂರ್ತಿಯಿಂದ ಮೂಡಿ ತೇಲಿ ಬಂದಂತಹ,

ಹೆಸರು : ಜ್ಯೋತಿ ಎಸ್. ದೇವಾಡಿಗ (ಜೆ.ಜೆ.ಎಸ್)
ಕಾವ್ಯನಾಮಧೇಯ : ಶಯದೇವಿಸುತೆ, ಮರವಂತೆ (೨೦೧೫ರಿಂದ)
ತಂದೆ : ಶ್ರೀ ಶೀನ(ಶ್ಯಾನ) ದೇವಾಡಿಗ
ತಾಯಿ : ಶ್ರೀಮತಿ ಕಮಲಾ. ಎಸ್. ದೇವಾಡಿಗ.
ಜನ್ಮ ದಿನಾಂಕ : ಜನವರಿ ೧೪, ೧೯೮೭ ರಂದು
ಜನ್ಮಸ್ಥಳ : ಸುಂದರ ಕಡಲತಡಿಯ ತಾಣ, ಮರವಂತೆ.

jyothi_family.jpg

ತಂದೆ : ಶ್ರೀ ಶೀನ(ಶ್ಯಾನ) ದೇವಾಡಿಗ; ತಾಯಿ : ಶ್ರೀಮತಿ ಕಮಲಾ. ಎಸ್. ದೇವಾಡಿಗ.

ಅಣ್ಣ: ಸತೀಶ್ ಎಸ್.ಡಿ, ಬಹರೈನ್; ತಂಗಿ: ಕು.ಜಯಂತಿ

EDUCATIONAL   BACKGROUND :

Description of COURSE/EXAMINATION

INSTITUTION :

Board / University.

Exe - M.B.A - (H.R.)

Karnataka Academy

K.S.O.U. Mysore.

M.com-

( Comp.Applln)

Karnataka Academy

K.S.O.U. Mysore.

B.com ( Info.Tech )

J.M. Patel College of Commerce,

Sanskardham -   Goregaon(W), Mumbai.

Mumbai. 

PUC

Govt. P.U. College, Navunda.

Bangalore. 

S.S.L.C.

Govt. Junior College, Navunda.

Bangalore.

 

CURRENTLY taken admission for :

M.A  PG Course (Kannada and  English  Literatures).

TECHNICAL  QUALIFICATIONS :

1). Diploma in Office – Automations.

( DOA in MS – OFFICE ).

[ SSI Education,  Bangalore ] – 2005.

2). Maharashtra  State  Certificate   in

Information – Technology. ( MS - CIT ).

[ Maharashtra State Board Of -

-Technical Education, Mumbai. ]

-  Passed out  with Distinction in the year ....2007.

3). Certificate of Merit in,

Advanced  Diploma in Digital Audio & Video Editing,

Web-Designing, & also in  other Professional Course.s,& Stenography.

[ KEERTI Computer Institute :

( Software &    Hardware Infotech Pvt, Ltd. ),  Mumbai.]

- Passed out  with Distinction in the year ....2009.

ಸಾಹಿತ್ಯದ ಸಾಧನೆಯ ಕಡೆಗೆ ತುಸು ಗಮನ ಹರಿಸಿದರೆ...

* ಆರಾಧ್ಯದೇವರ ಹೆಸರಲ್ಲಿ, "ದೇವಿ-ಸ್ವರೂಪ" ಹಾಗೂ "ನಾಗಬಾಲಿಕೆ" ಎಂಬೆರಡು ಯಕ್ಷಗಾನ ಕಥಾ ಪ್ರಸಂಗಗಳನ್ನು ಸಂಯೋಜಿಸಿ, ತಾಯ್ನೆಲದಿಂದ ಮುಂಬೈಯಂತಹ ಮಹಾನ್ ಮಾಯಾ ವಾಣಿಜ್ಯ ನಗರಿಯವರೆಗೂ ಅದ್ಧೂರಿ ಪ್ರದರ್ಶನ ನೀಡಿ, ಮಹತ್ತರ ಜಯಭೇರಿ ಬಾರಿಸಿದ ಕೀರ್ತಿ.

* ಅಲ್ಲದೇ, "ಸೃಜನಶೀಲ ಯುವ ಪ್ರತಿಭಾನ್ವಿತ ಲೇಖಕಿ" ಎನ್ನುವ ಮೊದಲ ಬಿರುದಾಂಕಿತದೊಂದಿಗೆ ಒಂದಷ್ಟು ಕಾಲ ಹೊರನಾಡ ಕನ್ನಡಿಗಳಾಗಿದ್ದುಕೊಂಡು, ಸಾಕಷ್ಟು ಬಾರಿ ಮುಂಬೈ ನಗರದಲ್ಲಿದ್ದು ಹೆಸರು ಮಾಡಿದ ಪರಿ.

* ಈ ಹಿಂದೆ ಸಾಕಷ್ಟು ಸೇವೆಗೈದ ಈಕೆ, ಸಾರಸ್ವತ ಲೋಕದೆಡೆಗೊಂದು ಸುದೀರ್ಘ ಪಯಣ ನಡೆಸಿ ಇಂದು ಹಲವಾರು ರೀತಿಯ ಸಾಹಿತ್ಯ ಲೇಖನಗಳನ್ನು ರಚಿಸಿದ ಕೀರ್ತಿ......

* ಮುಂಬೈಯ ಕುಂದ ಕನ್ನಡ ಬಳಗದ ವತಿಯಿಂದ ಪ್ರಕಟಣೆಗೊಂಡ ಕರ್ನಾಟಕದಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿರುವ "ಕುಂದಗನ್ನಡ(ಕುಂದಾಪ್ರ ಕನ್ನಡ)" ತಮ್ಮದೇ ಆಡುಭಾಷೆಯ ಸೊಗಡನ್ನು ಮುಂಬೈ ನಗರದವರೆಗೂ ಪಸರಿಸುವಲ್ಲಿ, "ಕಾಂಬ-ಕೇಂಬ"; "ಹೊಯ್ಕ್-ಬರ್‍ಕ್" ಎಂಬೆರಡು ಪುಸ್ತಕಗಳ ಲೇಖಕಿಯಾಗಿ, ಸಹ ಸಂಪಾದಕಿಯಾಗಿ, ಅಲ್ಲದೇ ಮುದ್ರಣ ಪರಿಷ್ಕೃತಳಾಗಿಯೂ ಸಹ ಮುಂಬೈಯ ಪ್ರತಿಷ್ಠಿತ ಕುಂದಗನ್ನಡ ಬಳಗದಲ್ಲಿ ಈಗಾಗಲೇ ಸಲ್ಲಿಸಿರುವಂತಹ ಸೇವೆ ಅಪಾರ.

* ಕುಂದಗನ್ನಡ ಬಳಗ, ಮುಂಬೈ - ಇವರು ೨೦೧೩ರಲ್ಲಿ ಒಳರಾಜ್ಯ ಹಾಗೂ ಹೊರರಾಜ್ಯ ಕನ್ನಡಿಗರಿಗಾಗಿ ಏರ್ಪಡಿಸಿದ್ದ "ಲಲಿತ ಪ್ರಬಂಧ" ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಹಾಗೂ ಪಡೆದ ದ್ವೀತಿಯ ಬಹುಮಾನ ಸ್ಥಾನ.

* ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು - ಇವರು ೨೦೧೫ ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ, ಶ್ರೀ ಯೋಗಿ ನಾರೇಯಣ ಮಠ, ಶ್ರೀ ಕ್ಷೇತ್ರ ಕೈವಾರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದಂತಹ ಮೂಲ ಜಾನಪದ ಹಾಗೂ ಹೊಸ ತಲೆಮಾರಿನ ಜಾನಪದ ಗಾಯಕರ ರಾಜ್ಯಮಟ್ಟದ ಗಾನ ಸಮ್ಮಿಲನದ ಜುಗಲ್ ಬಂಧಿಯ ತಕ ಥೈ...
"ಈ ಜೀವ್ವೇ..ಆ ಜೀವಕ ನಡಿ" ಯ ಸಂವಾದ ಗೋಷ್ಠಿಯಲ್ಲಿ.

* ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು - ಇವರು ೨೦೧೫ ರಂದು ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ, "ವಾಚನಾಭಿರುಚಿ ಕಮ್ಮಟ"ದ ಸಂವಾದ ಗೋಷ್ಠಿಯಲ್ಲಿ.

* ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು - ಇವರು ೨೦೧೫ ರ ಠಾಕೂರ್ ಹಾಲ್, ಡೊಂಬಿವಿಲಿ, ಮುಂಬೈನಲ್ಲಿ ಆಯೋಜಿಸಿದ್ದಂತಹ, "೧೧ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ"ದ - ಕವಿಗೋಷ್ಠಿಯಲ್ಲಿ.

* ಗ್ರಾಮಾಂತರ ಬುದ್ಧಿಜೀವಿ ಬಳಗ ಸಾಹಿತ್ಯಾತ್ಮಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ೩೦ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಅವರ ೧೧೧ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ, "ರಾಷ್ಟ್ರಕವಿ ಕುವೆಂಪು ನೂರೊಂದು ನೆನಪು " ರಾಜ್ಯಮಟ್ಟದ ಕೃತಿಯ ಬಿಡುಗಡೆಗಾಗಿ ಕವನ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಹಾಗೂ ಸ್ಪರ್ಧೆಯ ವಿಜೇತರಲ್ಲೊಬ್ಬಳಾಗಿ ಸದ್ಯದಲ್ಲಿಯೇ ಸ್ವೀಕರಿಸಲಿರುವಂತಹ, "ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕಾರ ಪ್ರಶಸ್ತಿ"

* ಕುಂದ ಕನ್ನಡ ಬಳಗ ಹಾಗೂ ಕುಂದಾಪುರದ ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ೨೦೧೨ರಲ್ಲಿ ಡೊಂಬಿವಲಿಯ ಠಾಕೂರ್ ಹಾಲ್‌ನಲ್ಲಿ ಕನ್ನಡ ಚಲನಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದರಿಂದ ನಡೆದಂತಹ ಹಾಸ್ಯವೇದಿಕೆಯಲ್ಲಿ, ಹಾಗೂ ಮೈಸೂರು ರಮಾನಂದರವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಣೆ.

* ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು - ಇವರು ೨೦೧೪ರಂದು ಕುಂದಾಪುರ ತಾಲೂಕಿನ ಬೀಜಾಡಿಯ ಕಡಲ ಕಿನಾರೆಯಲ್ಲಿ ಏರ್ಪಡಿಸಿದ್ದ, "ಕನಕ ಕೃಷ್ಣ - ಕಡಲತಡಿ ಮಾತುಕತೆ" ಒಂದು ದಿನದ ಸಂವಾದ ಗೋಷ್ಠಿಯಲ್ಲಿ ವಿಶೇಷ ಆಹ್ವಾನಿತೆ.

* ಇನ್ನು ವೈಚಾರಿಕ ಕೃತಿಗೆ ಸಂಬಂಧಪಟ್ಟಂತಹ ಒಂದು ಲೇಖನ- "ಪ್ರಜಾಪ್ರಭುತ್ವ ರಾಷ್ಟ್ರ, ಸ್ವತಂತ್ರ ಭಾರತ (-ಇಲ್ಲಿ ನಿಜವಾದ ನಾಗರೀಕ ಪ್ರಜೆಗಳದೆಷ್ಟು ಜನ; ಸ್ವತಂತ್ರ ಭಾರತದಲ್ಲಿ ನಾವೆಷ್ಟು ಸ್ವತಂತ್ರರು)" ಎಂಬ ಈ ಶೀರ್ಷಿಕೆಯಡೀ ಇರುವ ಮಹಿಳೆಯರ ಶೋಷಣೆಗೆ ಸಂಬಂಧಿಸಿದ ಲೇಖನದ ತುಣುಕೊಂದನ್ನು ಈಗಾಗಲೇ, ಕರ್ನಾಟಕ ರಾಜ್ಯ ವಾರ್ತಾ ಇಲಾಖೆಯವರು, "ಧರೆಯೇ ಹತ್ತಿ ಉರಿದರೆ" ಎಂಬ ಸಹ ಶೀರ್ಷಿಕೆಯಡಿಯಲಿ ಟೆಲಿಫಿಲ್ಮ್ ಮಾಡುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಂಡಿರುವಂತದ್ದು, ಬಹಳ ವಿಶೇಷ ಸಂಗತಿ.

* ಇನ್ನು, ಇನ್ಫೋ-ಫಿಕ್ಚರ್‌ರವರ ನಿರ್ಮಾಣದಲ್ಲಿ, ನಿರ್ದೇಶಕ ವಿ.ಜಿ. ವರದರಾಜ್‌ರವರ "ಕಥಾ-ಲೇಖಕ" ಎಂಬ ಶಾರ್ಟ್ ಫಿಲಂಗೆ, ಕಥಾ ಸಹ-ಸಂಯೋಜಕಳಾಗಿ, ಸಹ ನಿರ್ದೇಶಕಳಾಗಿ, ಸಂಭಾಷಣೆಯನ್ನು ಬರೆದುಕೊಟ್ಟ ಅಪೂರ್ವ ಸಾಹಸಕ್ಕೆ ಮುಂದಾಗಿದ್ದು
ಪ್ರಸ್ತುತ ಚಿತ್ರೀಕರಣ ನಡೆಯುತ್ತಿದೆ.

* ಪ್ರಸ್ತುತ, ಝೀ ನೆಟ್‌ವರ್ಕ್‌ನ ಕನ್ನಡ ವಾಹಿನಿಯ "ದೃಶ್ಯ" ಟೀಮ್‌ನಲ್ಲಿ ಎಸೋಸಿಯೇಟ್ ಆಗಿದ್ದುಕೊಂಡು, ಇದೀಗ ದೃಶ್ಯ ಟೀಮ್‌ಗಾಗಿ ತಮ್ಮದೇ ಆದ ಹೊಸ ಕಾನ್ಸೆಪ್ಟ್‌ನ್ನು ಝೀ ವಾಹಿನಿಗೆ ನೀಡಿ, ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಹೀಗೆ, ಅದರ ಸಂಪೂರ್ಣ ಜವಬ್ಧಾರಿಯನ್ನು ತಾವೇ ವಹಿಸಿಕೊಳ್ಳಲಿರುವ ಇವರಿಗೆ ಸೀರಿಯಲ್ ಸಾಹಿತ್ಯ ಪ್ರಪಂಚಕ್ಕೆ ಪ್ರೇರಣೆಯಾದಂತವರು, ಇವರ ಆದರ್ಶಗುರು, ಮಾನ್ಯ ಶ್ರೀಯುತ ರಘುಚರಣ್ ತಿಪಟೂರ್.

* ಇವರ ಬರವಣಿಗೆ ಶೈಲಿಗೆ ಅನೇಕರು ಅದರಲ್ಲೂ ಉದಯ ಟಿ.ವಿ. ಖ್ಯಾತಿಯ ಹೆಸರಾಂತ ವಿದ್ವಾಂಸರಾದ ಹಿರೇಮಗಳೂರು ಕಣ್ಣನ್‌ರವರು ತಮ್ಮ ನುಡಿಮುತ್ತಿನ ಆರ್ಶೀವಾದಗಳನ್ನಿತ್ತು ಶುಭ ಹಾರೈಸಿದರೆ, ಖ್ಯಾತ ಅಂತರಾಷ್ಟ್ರೀಯ ಮಟ್ಟದ ನಗೆಭಾಷಣಕಾರರಾದ, ಶ್ರೀಮತಿ ಸುಧಾ ಬರಗೂರು, ಶ್ರೀ ಮಹಾದೇವ್ ಸತ್ತಿಗೇರಿ, ಪಟ್ಟಾಭಿ ರಾಮ್, ಹಾಗೂ ಹಲವರು ಇವರ ಸಾಧನೆಗಾಗಿ ಶ್ಲಾಘಿಸಿದ್ದಾರೆ.

* ಜನಪ್ರತಿನಿಧಿ ವಿಶೇಷಾಂಕಕ್ಕೆ, ಸಾಗರದ ಸಂಪದ-ಸಾಲು ಮ್ಯಾಗಝೀನ್, ಮುಂಬೈ ನೇಸರು ಮ್ಯಾಗಝೀನ್, ಕರಾವಳಿ ಬಂಟರ ಬಳಗ ಮ್ಯಾಗಝೀನ್ - ಹೀಗೆ ಹಲವಾರು ಮ್ಯಾಗಝೀನ್‌ಗಳಲ್ಲಿ ಲೇಖಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲದೇ, ಕುಂದ ಕನ್ನಡ ಬಳಗ ಮುಂಬೈಯ ಸಂಪಾದಕೀಯ ಮಂಡಳಿಯಲ್ಲಿದ್ದುಕೊಂಡು ಆಡುಭಾಷೆಯ ಸೊಗಡನ್ನು ಹೊರನಾಡಿನಲ್ಲಿಯೂ ಬಿತ್ತರಿಸುವ ಪ್ರಯತ್ನ ಇವರ ಬಳಗದು.

* ಡಾ|| ಜಿ.ಡಿ ಜೋಶಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪ್ರತಿಷ್ಠಾನ, ಮುಂಬೈ - ಇವರು ಈ ಬಾರಿ ನಡೆಸಿದ, "ಅಖಿಲ ಭಾರತ ಮಟ್ಟದ ಪ್ರವಾಸ ಕಥನ ಸ್ಪರ್ಧೆ" ಯಲ್ಲಿ ಅತ್ಯುತ್ತಮ ಮಟ್ಟದ ಪ್ರವಾಸ ಕಥನ ನೀಡಿದ ಹೆಮ್ಮೆ ಹಾಗೂ ಸದ್ಯಕ್ಕೆ ಕಥನವು ಪ್ರಶಸ್ತಿ ಆಯ್ಕೆ ಸಮಿತಿಯ ಪರಿಶೀಲನೆಯಲ್ಲಿವೆ. ಅಲ್ಲದೇ, ಇದೇ ಪ್ರತಿಷ್ಠಾನದಲ್ಲಿಯೂ ಸಹ ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಕಲ ಸತ್ಕಾರವನ್ನು ಗಿಟ್ಟಿಸಿಕೊಂಡ ಜಾಣ್ಮೆಯ ಪರಿ ಇವರದು.

ಇತ್ತೀಚೆಗೆ ತಾನೇ, ಶ್ರೀಯುತ ಗಾಯಕ ಗಣೇಶ್ ಗಂಗೊಳ್ಳಿಯವರ ನೇತೃತ್ವದಲ್ಲಿ ಕೂಡ್ಲು ಶ್ರೀ ಬಾಡಬೆಟ್ಟು ಶ್ರೀ ಶನೀಶ್ವರನ ಭಕ್ತಿಗೀತೆ ಧ್ವನಿಸುರುಳಿ ಬಿಡುಗಡೆಗೆ ಗೀತೆ ಸಾಹಿತ್ಯವನ್ನು ರಚಿಸಿದ ಕೀರ್ತಿ ಇವರದು. ಇವರು ರಚಿಸಿದ ಎಲ್ಲಾ ಗೀತೆಗಳಿಗೆ ಖ್ಯಾತ ಸಂಗೀತ ಗಾಯಕರಾದ ಶ್ರೀಮತಿ ಅರ್ಚನಾ ಉಡುಪ ಹಾಗೂ ಶ್ರೀಮತಿ ಸಂಗೀತಾ ಬಾಲಚಂದ್ರರವರು ತಮ್ಮ ದನಿಯನ್ನೇರಿಸಿ ಸೇರಿಸುವುದರ ಮೂಲಕ ಗೀತೆಗಳಿಗೆ ಹೊಸ ಮೆರುಗನ್ನು ನೀಡಿದ್ದಾರೆ.

* ವರ್ಷದ ಕನ್ನಡ ಬರಹಗಾರ ಪ್ರಶಸ್ತಿ - ೨೦೧೫. ರಂಗಸ್ಥಳ ರತ್ನ ಪ್ರಶಸ್ತಿ - ಇವೆರಡೂ ಪ್ರಶಸ್ತಿ ಏಕಕಾಲದಲ್ಲಿ ಇವರಿಗೆ ದಕ್ಕಿರುವುದು ಬಲು ವಿಶೇಷದ ಸಂಗತಿ. ಹೀಗೆ, ಹತ್ತು - ಹಲವೆಡೆ ಸಿಕ್ಕಿದಂತಹ ಸನ್ಮಾನ, ಪ್ರಶಸ್ತಿ-ಪುರಸ್ಕಾರಗಳು ಇವರ ಸ್ವಂತ ಪ್ರತಿಭೆಗೆ ಸಿಕ್ಕಂತಹ ಪ್ರತ್ಯಕ್ಷ ಸಾಕ್ಷಿ.

* ಸ್ಫೂರ್ತಿ ಕೋಚಿಂಗ್ ಕ್ಲಾಸ್‌ನಲ್ಲಿ ಇಂಗ್ಲೀಷ್ ಅಧ್ಯಾಪಕಳಾಗಿ ಸೇವೆ ಸಲ್ಲಿಸಿ, ಒಬ್ಬಾಕೆ ಲೇಖಕಿಯಾಗಿ, ಕೆಲವೊಮ್ಮೆ ಅಡುಗೆ ಮನೆ ಹುಡುಗಿಯಾಗಿಯೂ ಸಹ ಅದರ ಜೊತೆಗೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಬರುತ್ತಿರುವಂತಹ ನಾನು ಸದ್ಯದಲ್ಲೇ, ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪುರಸ್ಕಾರವನ್ನು ಮೈಸೂರಿನಲ್ಲಿ ಸ್ವೀಕರಿಸಲಿದ್ದೇನೆ ಎನ್ನುವಂತದ್ದು ಬಲು ಸಂತಸದ ಸಂಗತಿ.

ಸದ್ಯಕ್ಕೆ, ಎಂ.ಎ ಎನ್ನುವ ಮಗದೊಂದು ಸ್ನಾತಕೋತ್ತರ ಪದವಿಯನ್ನು ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಮುಂಬೈ ಹಾಗೂ ಮೈಸೂರು ಯುನಿರ್ವಸಿಟಿಯಿಂದ ಪಡೆಯಲು ಮುಂದಾಗುತ್ತಿರುವ ನಾನು, ಇನ್ನಷ್ಟು ಹೊಸತನದ ಕಥಾಹಂದರದ ರಚನೆಗೆ ನನ್ನನ್ನು ನಾನು ತೊಡಗಿಸಿಕೊಂಡು, ಇನ್ನಷ್ಟು ವೈಚಾರಿಕ ಕೃತಿಗಳಿಗೆ ಸುದೀರ್ಘ ಸಂಶೋಧನೆ ನಡೆಸುತ್ತಿರುವ ಇವರಿಗೆ ಮುಂದೆ ಪಿ.ಎಚ್.ಡಿ. ಎನ್ನುವ ಮಹಾನ್ ಗೌರವ ಪದವಿಯನ್ನು ಪಡೆಯುವುದಕ್ಕಾಗಿ ಸಕಲ ಸತತ ಪ್ರಯತ್ನವನ್ನ ಈಗಿನಿಂದಲೇ ಮಾಡುತ್ತಿದ್ದಾರೆ. ಸಾಯಿಸುತೆ, ತ್ರಿವೇಣೀ, ವೈದೇಹಿ, ಕುವೆಂಪು, ಡಾ|| ಅನಸೂಯಾ ದೇವಿ, ಗಿರೀಶ್ ಕಾಸರವಳ್ಳಿ, ದ.ರಾ.ಬೇಂದ್ರೆ, ಶಿವರಾಂ ಕಾರಂತರು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ - ಹೀಗೆ ಹಲವರು ನನ್ನ ಮನ ಮೆಚ್ಚಿದ ನೆಚ್ಚಿನ ಲೇಖಕರು; ನನ್ನ ಸಾಧನೆಗೆ ಸ್ಫೂರ್ತಿಯ ಸೆಲೆಯನ್ನಿತ್ತವರು.

ಗುರಿ : "ಜೀವನದ ಕೊನೆ ಕ್ಷಣದವರೆಗೂ ನನ್ನ ನಡಿಗೆ, ಈ ಕಸ್ತೂರಿ ಕನ್ನಡ ನುಡಿಯ ಸಾಹಿತ್ಯ ಕ್ಷೇತ್ರದ ಸಾಧನೆಯೊಡನೆ, ಮುಂದಿನ ಸಂಸಾರ ಜೀವನದ ಸಾರ್ಥಕತೆಯೆಡೆಗೆ.........."

 *********

ದೇಹಕೆ ಉಸಿರು
- (ಸದಾ ಭಾರ....ಇಲ್ಲಾ, ಆಧಾರ?!)
- ಶಯದೇವಿಸುತೆ, ಮರವಂತೆ.

ನವಮಾಸ ಭರಿತ ಬಸುರಿಯ ಉದರದಲ್ಲಿ ಈ ದೇಹ ತಿಂಗಳುಗಟ್ಟಲೇ ಮುದುರಿಕೊಂಡು ಮಲಗಿರುತ್ತದೆ. ಧರೆ ಮಿನುಗಿ, ಬಾನು ಹೊಳೆದಂತೆ ಒಂದು ಸುದಿನ ಇದರ ಅಗಮನಮಗುವಿನ ರೂಪದಲ್ಲಿ ಈ ಪ್ರಪಂಚಕ್ಕಾಗುತ್ತದೆ. ಸಂತಸದಿ ಮೆರೆದ ತಾಯ್ತಂದೆಗೆಮನದಂಗಳದಿ ಶೋಭಿಸುವ ಮುದ್ದು ಕಂದವದು. ಪ್ರೀತಿ ಪಾತ್ರರಿಂದ ಅಕ್ಕರೆಯಿಂದ ಎತ್ತಿಕೊಳ್ಳಲ್ಪಡುತ್ತದೆ, ಎಡವುತ್ತದೆ, ಎದ್ದು ಓಡಾಡುತ್ತದೆ. ಮುದ ಕೊಡುವ ಮುಗ್ಧಮುದ್ದು ಮಕ್ಕಳು, ಮನೆಯಲಿರಲು ಆ ಮನೆಯ ಸೊಗಸೇ ಮೊಗೆದ ಅಂದ, ಬಸಿದ ಅಂದ-ಚೆಂದ.ನೋಡು-ನೋಡುತ್ತಿದ್ದ ಹಾಗೆಯೇ, ಅತ್ತು, ನಕ್ಕು-ನಲಿದು, ಕುಣಿದಾಡಿದ ಮುದ್ದು ಕಂದವದು ಬಾಲ್ಯದಲ್ಲಿ ಚಿಗುರಿ ಅರಳುತ್ತದೆ, ಹರೆಯ ದಾಟಿ ಯೌವ್ವನದೆತ್ತರಕ್ಕೆನಿಂತು ಬೆಳೆಯುತ್ತದೆ. ಪರಿಣಾಮ, ವಿವಿಧ ಭಾವ ವಿಲಾಸದೀ ತನ್ನನ್ನು ತಾನುಯಾರಿಗೋ ಚಡಪಡಿಸಿ ಆವರಿಸಿಕೊಳ್ಳುತ್ತದೆ. ಮತ್ತಿನ್ಯಾರಿಗೋ ಅರ್ಪಿಸಿಕೊಳ್ಳಲು ತವಕಿಸುವಂತಾಗಿ, ತನ್ನಲ್ಲಿ ಮತ್ತೊಂದು ದೇಹವನ್ನು ಬಚ್ಚಿಟ್ಟುಕೊಳ್ಳುತ್ತದೆ. ಒಂದುದೇಹ ವಿಸರ್ಜಿಸಿದ ಅಣುವನ್ನು, ಈ ದೇಹ ಅದನ್ನು ಅಂಕುರಾಗಿ ಪಡೆದು,ಮತ್ತದೇ ನವಮಾಸ ಭರಿತ ಬಸುರಿ ಸ್ಥಾನವನ್ನು ತುಂಬಿ, ಹೊಸದೊಂದು ದೇಹಕ್ಕೆ ಜನ್ಮ ನೀಡುತ್ತದೆ. ಆವತ್ತು ತವಕಿಸಿ, ಮತ್ತೊಬ್ಬರಿಗೆ ಅರ್ಪಿತವಾದ ದೇಹ ಇವತ್ತು ತಾಯಿಯಾಗಿ ಪಕ್ಕದಲ್ಲಿ ಮತ್ತೊಂದು ಪುಟ್ಟದಾದ ದೇಹವನ್ನುಮಡಿಲಲ್ಲಿ ಮುದದಿಂದ ಮಲಗಿಸಿಕೊಂಡು ಬಿಡುತ್ತದೆ.

ಈ ಜೀವ್ವೇ..ಆ ಜೀವಕ ನಡಿ

ಎನ್ನುವ ತನು-ಮನದ ಪ್ರಕ್ರಿಯೆಯೇ ನಿರಂತರವಾಗಿ, ಹೊತ್ತು, ಹೆತ್ತು, ಸಾಕಿ ಸಲಹಿದ ಪ್ರತೀ ದೇಹವೂ ಮುಂದೆ ಕಾಲ ಕಳೆದಂತೆಲ್ಲಾ ಮುದಿಯಾಗುತ್ತದೆ, ಸುಕ್ಕುಗಟ್ಟಿಸವೆದು ಹೋಗುತ್ತದೆ. ಮುದುರು-ಮುದುರಾಗುತ್ತದೆ. ಯಾವತ್ತೋ ಒಂದು ದಿನ ದೀರ್ಘ ಏದುಸಿರುಬಿಟ್ಟು ಒಮ್ಮೆಲೇ ಸ್ಥಗಿತಗೊಂಡ ಇದನ್ನು ಯಾರೋ ಮುಟ್ಟಿ ನೋಡಿ, ನಿಟ್ಟುಸಿರುಬಿಡುತ್ತಾರೆ. ಇಟ್ಸ್ ಕ್ಲಿಯರ್‌ಲೀ ಡಿಕ್ಲೇರ್‍ಡ್, "ಡೆಡ್"!! ಅರ್ಥಾತ್, ಸಜೀವ ಶರೀರ ಈಗ ನಿಶ್ಚಲವಾಗಿ ಬಿದ್ದ ಶವವಾಗಿ ಸದ್ಯದಲ್ಲೇ ಸಮಾಧಿ ಸೇರಲಿದೆ ಎಂದರ್ಥ.

ಅದಕ್ಕೆ ಅಲ್ವಾ, ಜೀವ ಇರುವ ತನಕ ಸಂಬಂಧಪಟ್ಟ ಆಯಾಯ ಹೆಸರು ಕೂಗಿ ಕರೆಯುತ್ತಾರೆ. ಅದೇ ಸತ್ತಾಗ, ಹೆಣ ( ಡೆಡ್ ಬಾಡಿ ) ಬಂತಾ ಅಂತಾರೆ. ಆಯ್ತಲ್ಲ..ಇಲ್ಲಿಗೆ ಮುಗಿಯಿತಲ್ಲ, ಹೆಣ್ಣಿನ ಬಾಳು.!! ಇಲ್ಲಿ, ನಾನು ಬರೇ ಹೆಣ್ಣಿನ ದೇಹಸಿರಿಯನ್ನೇ ಮೂಲವಾಗಿಟ್ಟುಕೊಂಡೇ ನಿಮಗೆ ಎಳೆ- ಎಳೆಯಾಗಿ ತಿಳಿಸಿ ವರ್ಣಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಆದರೂ ಇದಕ್ಕಾಗಲ್ವೇ, ಶಾಶ್ವತವಲ್ಲದ ಈ ದೇಹ ಸೌಂದರ್ಯವನ್ನು ಬಲು ಸುಂದರವಾಗಿ ಕಾಪಾಡಿಕೊಳ್ಳಲು ಆಗಾಗ್ಗೆ ಬಹಳ ಆಸೆಯಿಂದ ಪ್ರಯತ್ನಿಸುತ್ತಲೇ ಇರುತ್ತಿರುತ್ತೇವೆ ಅಲ್ವಾ.

ಹುಟ್ಟಿದಾಗ ಉಸಿರಿರುತ್ತೆ, ಹೆಸರಿರೋಲ್ಲಾ; ಸತ್ತಾಗ ಹೆಸರಿರುತ್ತೆ, ಉಸಿರಿರೋಲ್ಲಾ.

ಆದರೂ, ಉಸಿರಿಗೆ ಉಸಿರೇ ಇಲ್ಲದಿರುವಾಗ,

ಉಸಿರಿಗೇಕೆ ಜೀವ, ಪ್ರಾಣ, ಶ್ವಾಸ ಅಂತೆಲ್ಲಾ ಏಕೆ ವಿವಿಧ ಹೆಸರುಗಳು?!

ಉಸಿರು- ಹೆಸರುಗಳ ನಡುವಣ ನಡೆವ,

ಈ ತನು- ಮನದ ಮಹಾಸಂಘರ್ಷಕ್ಕೆ,

ಈ ಜೀವದ ಉಸಿರು...ಸದಾ ಭಾರವಾ...ಇಲ್ಲಾ, ಆಧಾರವಾ...!?

ಸರಿಸಮ, ಇವೆರಡೂ ಎನ್ನಬಹುದಲ್ಲವೇ? ನೀವೇನಂತೀರಿ?

******

ನೀ ಇರಲು ಜೊತೆಯಲ್ಲಿ....
- ಶಯದೇವಿಸುತೆ, ಮರವಂತೆ (ಜೆ.ಜೆ.ಎಸ್.ಡಿ).

ತನು-ಮನ ಕಂಪಿಸಿ ನವಿರೇಳಿಸುತ ನಲಿದಿಹೆ
ಸ್ಫೂರ್ತಿಯ ಮಿಡಿತದಲಿ ಜೀವವು ಸಮ್ಮಿಲನದ ತುಡಿತದಲಿ ಉಲಿಯುತಿಹೆ
ರಾಗ-ತಾಳ-ಭಾವಲೀಲೆಗಳ ಇಂಚರದಲಿ
ನವ್ಯಸಂಚಯನವು ಹೃದಯ ದೇಗುಲದಿ ಮೊಳಗುತಿವೆ,
ಅನುಕ್ಷಣದ ಪ್ರೀತಿಯ ಸವಿ ನೆನಪೇ ಕಾರಣ.

ಬಾಳ ಪಯಣದಲಿ ಭೋರ್ಗೆರೆವ ಏರಿಳಿತ ಅಲೆಗಳಲಿ
ಮನದ ಶರಧಿಯು ಮರುಗಿ ಮೆಲುಕು ಹಾಕುತಿವೆ,
ನೋವು-ನಲಿವು ಸೋಲು-ಗೆಲುವುವಿನ ಒಪ್ಪ ಹೂರಣ.
ಬಾಳ ಬಂಧನದೀ ಬೆಸೆದ ಪ್ರೇಮಬಂಧದ ತಲ್ಲಣವಿದು,
ಸೆಳೆದು ಸೇರಿಸುತಲಿಹೆ ಸನಿಹ ಜೀವಗಳೆರಡನೂ,
ನನ್ನೊಡಲ ನಾಡಿಯಾಗಿ, ನೀ ಇರಲು ಜೊತೆಯಲ್ಲಿ....

.....................................................................

ನೀ ಬರಲು, ಮನವು ಹಗುರಾಯ್ತು
ನೀನಿರಲು, ಪ್ರೀತಿ ವರ ಫಲವಾಯ್ತು
ನೀ ಸಂತೈಸೇ ನೋವು ಮರೆಯಾಯ್ತು
ನೀನಿರಲು ನಲಿವು ಸವಿಯಾಯ್ತು
ನೀ ಒಲಿಯೇ, ಒಲವು ಚೆಲುವಾಯ್ತು
ಈ ಬದುಕು ಸಾರ್ಥಕತೆಯಲಿ ನಗುವ ಸುಮವಾಯ್ತು, ನೀ ಇರಲು ಜೊತೆಯಲ್ಲಿ....

...............................................................................................

ಈ ತಂಪಿನ ಸಂಜೆಯಲಿ
ಸವಿನುಡಿಯ ಸ್ಪಂದನವೂ ನೀನು
ಎಂದೂ ಕಾಣದ ಈ ಮಿಡಿತಗಳ ಅಲೆಗಳಲಿ
ನಿನ್ನದೇ ಸೆಳೆತವು
ಆಹಾ! ಮನದ ಪ್ರೀತಿ ಹೀಗೇನಾ
ಈ ತಂಪಿನ ಸಂಜೆಯಲಿ, ನೀ ಇರಲು ಜೊತೆಯಲ್ಲಿ...

.............................................................................................................

ಪ್ರೀತಿ ಎಂಬ ತೀರವು
ಈ ಬಾಳ ಶರಧಿಯಲಿ
ಮನಸ್ಸೆಂಬ ನೌಕೆಯು
ಹರಿಯಬಿಟ್ಟ ನೀರಿನಲಿ
ಪಯಣಿಗನ್ಯಾರೋ ಕುಳಿತು
ನಡೆಸಿಹನಲ್ಲ ನೌಕೆಯಲಿ
ತನ್ನರಸಿಯ ಅರಸಿ ಹೊರಟಿಹನಲ್ಲ
ತೀರದ ಪ್ರೇಮಲೋಕದಲಿ
ಅಲೆ-ಅಲೆಯಾಗಿ ಬೆಂಬಿಡದೇ
ಕಾಡುತಿಹನಲ್ಲ ಮನದಲಿ
ಅವನೇ ನೀ ನನ್ನಲ್ಲಿ,
ನೀ ಇರಲು ಜೊತೆಯಲ್ಲಿ..

..............................................................................................................

ಬಾಳಿನ ದಾರಿಯಲಿ ಪ್ರೇಮಭಾವಗೀತೆಯಲಿ
ನೋವು-ನಲಿವು ಎಂಬ ಪಲ್ಲವಿಯಲಿ
ರಾಗ ನೂರಾರು ಸಾವಿರ ಅರ್ಥದ ಬೆಲೆಯು ನಾವೇ ಇಲ್ಲಿ
ಇರುವ ಬಾಳನೆನಪಿನಂಗಳದ ಸಂಗತಿಗಳಿಹುದು ಗೀತೆಯ ಚರಣಗಳಲಿ
ಅನುಕ್ಷಣ ಬರುವ ಅನುಪಲ್ಲವಿಯೇ ಮುನ್ನುಡಿ,
ನೀ ನುಡಿಯೆನಗೆ, ನೀ ಇರಲು ಜೊತೆಯಲ್ಲಿ...

............................................................................................................

ಪ್ರತಿ ಹೆಜ್ಜೆ ಗುರುತಿನಲಿ ಕಾಣದಂತಹ ಸಿಹಿ ಅನುಬಂಧವನು
ಹೇಗೆ ಮರೆಯಲಿ
ಅನುದಿನವೂ ಬಿಡದೇ ಕಾಯುತಿಹೆನು
ನೀ ಬರುವ ನಿರೀಕ್ಷೆಯಲಿ
ಓ ಪ್ರೀತಿಯೇ ಅದ್ಯಾವ ಶಕ್ತಿ ಅಡಗಿಹುದು ನಿನ್ನಲಿ
ನೀ ಇರಲು ಜೊತೆಯಲ್ಲಿ....

...............................................................................................

ಕನಸುಗಳು ಕಣ್ತುಂಬಿ ಕನವರಿಸುತಲಿವೆ
ನನಸಾಗಲಿ ನಾಳೆಗಳ ಮಂಪರಿನಲಿ
ತುಂಬು ಪ್ರೀತಿಯ ಜೋಡಿ ಹೃದಯವಿದು
ಹೊರ ಹೊಮ್ಮಿದೆ ಭಾವ ವಿಲಾಸಗಳ ತಂಗಾಳಿಯಲಿ
ತಂಪಾಗಲಿ ಹರ್ಷ ತುಂತುರಿನಲಿ,
ನನ್ನೊಡಲ ನಾಡಿಯಾಗಿ, ನೀ ಇರಲು ಜೊತೆಯಲ್ಲಿ....
******************************************************
- ಶಯದೇವಿಸುತೆ, ಮರವಂತೆ (ಜೆ.ಜೆ.ಎಸ್.ಡಿ).

jyothi14.jpg

jyothi13.jpg

jyothi12.jpg

jyothi11.jpg

jyothi10.jpg

jyothi9.jpg

jyothi8.jpg

jyothi7.jpg

jyothi6.jpg

jyothi6.jpg

jyothi25.jpg

jyothi24.jpg

jyothi23.jpg

jyothi19.jpg

jyothi17.jpg

jyothi18.jpg

jyothi16.jpg

jyothi15.jpg

 jyoth3.jpg

jyoth4.jpg

jyoth5.jpg

jyothi1.jpg

jyothi2.jpg

X

Right Click

No right click