ಸಮಾಜದ ಸ್ವಸ್ಥ ಹಾಳು ಮಾಡುವವರನ್ನು ವಿರೋಧಿಸಿ: ಶಂಕರ ದೇವಾಡಿಗ

ಕಿರಿಮಂಜೇಶ್ವರ: ದೇವಾಡಿಗ ಸಂಘಟನೆಗಳ ಸಭೆ; ಆಯುಧಗಳಿಂದ ಹಲ್ಲೆ ಘಟನೆ ಖಂಡನೆ

ಉಪ್ಪುಂದ, ಮೇ.23: ಸಮಾಜದ ಸ್ವಸ್ಥ ಹಾಳು ಮಾಡುವವರನ್ನುಎಲ್ಲರು ಒಟ್ಟಾಗಿ ವಿರೋಧಿಸಿ ಬಹಿಷ್ಕರಿಸಬೇಕು. ದೌರ್ಜನ್ಯ ಎಸಗುವ ಹಾಗೂ ಇದಕ್ಕೆ ಪ್ರೇರಣೆ ನೀಡುವ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕು ಎಂದು ಶಂಕರ ದೇವಾಡಿಗ ಹೇಳಿದರು.

ಅವರು ನಾಗೂರು ಗೋಪಾಲಕೃಷ್ಣ ಕಲ್ಚರಲ್ ಸಭಾಭವನದಲ್ಲಿ ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿನಗರದ ಕಾಲೋನಿಯಲ್ಲಿ ಮೇ.18ರಂದು ರಾತ್ರಿ ದೇವಾಡಿಗ ಕುಟುಂಬದವರ ಮೇಲೆ ನಡೆದ ಆಯುಧದಿಂದ ಹಲ್ಲೆ ಘಟನೆಯನ್ನು ಖಂಡಿಸಿ ಉಡುಪಿ ಹಾಗೂ ಬೈಂದೂರು ಎಲ್ಲ ದೇವಾಡಿಗ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮಹಿಳೆಯರು ಇರುವ ಮನೆಯ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡುವುದು ಆಮಾನವೀಯ ಕೃತ್ಯವಾಗಿದ್ದು, ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಪುರಷ್ಕರಿಸಬಾರದು. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಇಂತಹ ದುರ್ಘಟನೆ ಮರುಕಳಿಸದಿರಲು ಎಲ್ಲ ಸಮಾಜ ಭಾಂದವರು ಒಗ್ಗಟ್ಟಾಗಿರಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಈ ಹೇಯ್ಯ ಕೃತ್ಯವನ್ನು ಖಂಡಿಸಲಾಯಿತು. ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕತ್ರ್ಯವ್ಯವನ್ನು ಅಭಿನಂದಿಸಲಾಯಿತು. ಉಳಿದ ಆರೋಪಿಗಳನ್ನು ಶಿಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಲಾಯಿತು. ನೊಂದ ಕುಟುಂಬದವರ ಜೊತೆಗೆ ಸಂಘಟನೆ ಜೊತೆಗಿದ್ದು, ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಲಾಯಿತು. ಸಭೆಯ ಬಳಿಕ ಶಾರದ ದೇವಾಡಿಗ ಇವರ ಮನೆಗೆ ತೆರಳಿ ಸ್ವಾಂತನ ಹೇಳಲಾಯಿತು.

ಈ ಸಂದರ್ಭ ದುಬೈ ಕದಂ, ಉಡುಪಿ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ತ್ರಾಸಿ, ನಾವುಂದ, ಕಿರಿಮಂಜೇಶ್ವರ-ನಾಗೂರು, ಉಪ್ಪುಂದ, ಬೈಂದೂರು ದೇವಾಡಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ವರದಿ: ಕೃಷ್ಣ. ಚ್ . ದೇವಾಡಿಗ, ಬಿಜೂರು

ಹಲ್ಲೆಗೊಳಗಾಗಿದ್ದ ಕಿರಿಮಂಜೇಶ್ವರ ಕುಟಂಬಕ್ಕೆ ಪಕ್ಷ ಭೇದವಿಲ್ಲದೆ ಎಲ್ಲಾ ಸಂಘಟನೆಗಳ ಸಾಂತ್ವನ ಹಾಗೂ ಒಗ್ಗಟ್ಟಿನ ಬೆಂಬಲ

http://devadiga.com/news/details/1012/devadiga

ಹಲ್ಲೆಗೊಳಗಾಗಿದ್ದ ಕಿರಿಮಂಜೇಶ್ವರ ದೇವಾಡಿಗ ಕುಟಂಬಕ್ಕೆ ಸಮಾಜ ಬಾಂಧವರಿಂದ ಸಾಂತ್ವನ-ಸಹಾಯ


Share