ಮನೆಯವರೇ ಕೈಬಿಟ್ಟ ನತದೃಷ್ಟಿ ಹಿರಿಯ ನಾಗರಿಕ - ಲೋಕಯ್ಯ ದೇವಾಡಿಗ: ಸ್ಪಂದಿಸಿ ಸಹಾಯಮಾಡಿ

ಆಪತ್ಬಾಂಧವ ಸ್ನೇಹದ ಮನೆಗೆ ಹತ್ತನೇ ಸದಸ್ಯ ಲೋಕಯ್ಯ ದೇವಾಡಿಗ. ಜಾಲತಾಣದಲ್ಲಿ ಹರಿದಾಡುತ್ತಿದ್ದ ಮೆಸೇಜ್ ನಾರಾವಿ ಪರಿಸರದಲ್ಲಿ ಅನಾಥರಾಗಿದ್ದ ಲೋಕಯ್ಯ ರನ್ನು ಕಂಡ ರಾಜ್ ಪವಿ ನಾರಾವಿ ಹಾಗೂ ಅವರ ತಂಡ ಆಪದ್ಬಾಂಧವ ಸ್ನೇಹದ ಮನೆಗೆ ಕರೆತಂದಿದ್ದಾರೆ ಎಂದಿನಂತೆ ಅವರನ್ನು ಉಪಚರಿಸಿ ಕಾರ್ನಾಡು ಆರೋಗ್ಯ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಲೋಕಯ್ಯ ದೇವಾಡಿಗರು ನಮ್ಮ ಮನೆಯ ಹತ್ತನೇ ಸದಸ್ಯರಾಗಿದ್ದಾರೆ - ಆಪತ್ಬಾಂಧವ ಆಸಿಫ್

ಮೂಡಬಿದ್ರೆ:  ನಿನ್ನೆಯ (26-05-2019) ದಿನ ನಾರಾವಿಯ ಪೇಟೆಯಲ್ಲಿ ಮೂಡಬಿದ್ರೆಯ ಕಲ್ಲಮುಂಡ್ಕೂರಿನ ನಿವಾಸಿ ಲೋಕಯ್ಯ ದೇವಾಡಿಗ ಎಂಬುವವರನ್ನು ಯಾರೋ ಬಿಟ್ಟು ಹೋಗಿರುತ್ತಾರೆ.

ಸೇವಾ-ಸಂಸ್ಥೆಗಳ-ಮಹಾ-ಸಂಗಮ (Click)

ಈ ಬಗ್ಗೆ ಇಂದು (27-05-2019) ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಡಿದ್ದು ನನಗೆ ಹೇಮಂತ್ ಕುಲಾಲ್ ಕಿನ್ನಿಗೋಳಿ ಯವರು ಲೋಕಯ್ಯ ದೇವಾಡಿಗರ ಮನೆಯವರ ಬಗ್ಗೆ ಮಾಹಿತಿ ಪಡೆದು ನನ್ನನ್ನು ಸಂಪರ್ಕಿಸಿ ಇವರನ್ನು ಮನೆಗೆ ತಲುಪಿಸುವ ಬಗ್ಗೆ ಸಹಕರಿಸುವಂತೆ ಹೇಳಿರುತ್ತಾರೆ. ಅದರಂತೆ ನಾನೂ ಕೂಡ ಲೋಕಯ್ಯ ರವರ ಮನೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಯಾರೂ ಕೂಡ ನಮಗೆ ಸರಿಯಾದ ಸ್ಪಂದನೆ ನೀಡಿರುವುದಿಲ್ಲ.. ಲೋಕಯ್ಯರವರಿಗೆ ಸಂಬಂಧಿಕರು ಇರುವ  ಹಾಗೂ ಅವರೇ ತನ್ನನ್ನು ನಾರಾವಿ ಪೇಟೆಯಲ್ಲಿ ಬಿಟ್ಟು ಹೋಗಿದ್ದಾರೆ ಅಂತ ತಿಳಿಸಿರುವ ಕಾರಣ ನಾರಾವಿಗೆ ಸಂಭಂದಪಡುವ ವೇಣೂರು ಆರಕ್ಷಕ ಠಾಣೆಯವರಿಗೆ ಮಾಹಿತಿ ನೀಡಿ ಲೋಕಯ್ಯ ದೇವಾಡಿಗರನ್ನು ನನ್ನ ಗೆಳೆಯರಾದ ಅಪತ್ಬಾಂದವ ಆಸಿಫ್ ರವರ ಮುಲ್ಕಿಯ ಕಾರ್ನಾಡ್ ನಲ್ಲಿರುವ "ಆಪತ್ಭಾಂದವ ಸೈಕೊ ರಿಹೆಬಿಲಿಟೇಷನ್ ಸೆಂಟರ್" ಗೆ ಕರೆದುಕೊಂಡು ಹೋಗಿರುತ್ತೇವೆ. ನಂತರ ಅಪತ್ಬಾಂದವ ಆಸಿಫ್ ಹಾಗೂ ಸಂಶೀರ್ ಥಾಮಸ್ಕಟ್ಟೆ ಯವರು ಲೋಕಯ್ಯರವರನ್ನು ಶುಚಿಗೊಳಿಸಿ ಹೊಸ ಬಟ್ಟೆಯನ್ನು ನೀಡಿ ನಂತರ ಮುಲ್ಕಿಯ ಸರಕಾರಿ  ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತೇವೆ..

ಇಂತಹ ವೃದ್ಧರಿಗೆ ಅಪತ್ಕಾಲದಲ್ಲಿ ನೆರವಾಗುವ ಅಪತ್ಬಾಂದವ ಆಸಿಫ್ ರವರ ತಂಡಕ್ಕೆ ಲೋಕಯ್ಯರವರನ್ನು ಸುರಕ್ಷಿತವಾಗಿ ಒಪ್ಪಿಸಿ ವಾಪಸ್ ನಾರಾವಿಗೆ ಬರುವಾಗ ನನ್ನ ಜೊತೆಯಿದ್ದ ಗೆಳೆಯ ಕೀರ್ತನ್ ದೇವಾಡಿಗ ಹಾಗೂ ನಾನು ಲೋಕಯ್ಯರವರ ಮನೆಯವರನ್ನು ಭೇಟಿಯಾಗಿ ಅವರಲ್ಲಿ ಲೋಕಯ್ಯರವರ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು, ನಾವು ಮಾಡಿರುವ ಕಾರ್ಯದ ಬಗ್ಗೆ ತಿಳಿಸಿ ನಂತರ ಲೋಕಯ್ಯರವರನ್ನು ಆರೈಕೆ ಮಾಡುತ್ತಿರುವ ಆಶ್ರಮಕ್ಕೆ ಸಹಕರಿಸುತ್ತಿರುವಂತೆ ವಿನಂತಿಸಿರುತ್ತೇವೆ. 

ಲೋಕಯ್ಯರವರು ತನ್ನನ್ನು ಮನೆಯವರೇ ಬಿಟ್ಟು ಹೋಗಿದ್ದಾರೆ ಅಂತ ತಿಳಿಸಿರುವ ಕಾರಣ ಹಾಗೂ ನಾವು ಅವರ ಸಂಭಂದಿಕರನ್ನು ಸಂಪರ್ಕಿಸಿದರೂ ಸರಿಯಾಗಿ ಸ್ಪಂದಿಸಿರದ ಕಾರಣ ಹಾಗೂ ಇನ್ನೆಲ್ಲಿಯೂ ಈ ರೀತಿಯ ಘಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದ ಈ ಬಗ್ಗೆ ವೇಣೂರು ಠಾಣೆಯಲ್ಲೂ ದೂರು ದಾಖಲಿಸುವ ಬಗ್ಗೆ ಸಂಭಂದ ಪಟ್ಟ ಪೊಲೀಸ್ ರವರೊಂದಿಗೆ ಮಾತನಾಡಿರುತ್ತೇನೆ.

ಲೋಕಯ್ಯರವರನ್ನು ಕರೆದುಕೊಂಡು ಹೋಗಲು ಉಚಿತವಾಗಿ ವಾಹನವನ್ನು ನೀಡಿದ ಹಾಗೂ ನನ್ನ ಜೊತೆ ಇದ್ದು ಸಹಕರಿಸಿದ ಜಯ ನಾರಾವಿ ಮತ್ತು ಕೀರ್ತನ್ ದೇವಾಡಿಗ ಕುತ್ಲೂರು, ಕುಲಾಲ್ ವರ್ಲ್ಡ್ ನ ಹೇಮಂತ್ ಕುಲಾಲ್ ಕಿನ್ನಿಗೋಳಿ ಹಾಗೂ ಆಪತ್ಬಾಂಧವ ಆಸಿಫ್ ರವರ ತಂಡಕ್ಕೆ ಹಾಗೂ ನಾರವಿಯಲ್ಲಿದ್ದ ವೃದ್ಧರನ್ನು ಕಂಡು ಉಪಚರಿಸಿ ತಿಂಡಿ ತಿನಸುಗಳನ್ನು ಹಾಗೂ ಬಟ್ಟೆಯನ್ನು ನೀಡಿದ ಸಹೃದಯಿಗಳಿಗೂ ಮನಪೂರ್ವಕ ಧನ್ಯವಾದಗಳು

~RajPavi Billava

ಹಿರಿಯರ ಚಿಕಿತ್ಸೆ ಸಹಾಯ ಅಗತ್ಯ, 
ಇತ್ತೀಚೆಗೆ ನಾರಾವಿಯ ಪೇಟೆಯಲ್ಲಿ ಮೂಡಬಿದ್ರೆಯ ಕಲ್ಲಮುಂಡ್ಕೂರಿನ ನಿವಾಸಿ ಲೋಕಯ್ಯ ದೇವಾಡಿಗ ಪತ್ತೆಯಾದಗ ಸ್ಥಳೀಯರು ಹಾಗೂ ಕೆಲವು ಸಂಘ ಸಂಸ್ಥೆಯವರು ರಕ್ಷಿಸಿದರು.

ಈಗ ಅವರ ಚಿಕಿತ್ಸೆಗೆ ಹಣಕಾಸಿನ ಅಗತ್ಯ ಇದೆ,ಕುಟುಂಬದರು ಆರ್ಥಿಕವಾಗಿ ಹಿಂದುಳಿದವರು ಅದ ಕಾರಣ,ಸಹಾಯ ಮಾಡಲು ಇಚ್ಛಿಸುವವವರು ಶ್ರೀ ರಾಜ್ ಪವಿ ಬಿಲ್ಲವ ಅವರನ್ನು ಸಂಪರ್ಕಿಸಿ, Raj Pavi +91 87229 66030..


Share