ಚಿತ್ತೂರು-ಮಾರಣಕಟ್ಟೆ: ಶೀನ ದೇವಾಡಿಗ ಕೊಟಪಾಡಿ ಇವರಿಂದ ಉಚಿತ ಪುಸ್ತಕ ವಿತರಣೆ

ಚಿತ್ತೂರು: ದೇವಾಡಿಗ ಸಮಾಜ ಸೇವಾ ಸಂಘ ಚಿತ್ತೂರು ಇದರ ದ್ವಿತೀಯ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ತಾ.9-6-2019 ರಂದು ನಡೆಯಿತು.  

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕೈಗಾರಿಕೋದ್ಯಮಿ ರಮೇಶ್ ದೇವಾಡಿಗ ವಂಡ್ಸೆಯವರು ಮಾತನಾಡುತ್ತಾ ಸರ್ವ ಸದಸ್ಯರ ಏಳಿಗೆಯೇ ಸಂಘದ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಮಂಗಳಾ ದೇವಾಡಿಗ ಮಾರಣಕಟ್ಟೆ ವಹಿಸಿ ವಾರ್ಷಿಕ ವರದಿ ವಾಚನಗೈದರು. 

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ  ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು. ಅಭಿನಂಧನಾ ಪತ್ರವನ್ನು ಮಂಜುನಾಥ್ ದೇವಾಡಿಗ ವಾಚಿಸಿದರು. 

ಮಕ್ಕಳಿಗೆ ಪುಸ್ತಕವನ್ನು ಯಶೋಧ ಮತ್ತು ಶೀನ ದೇವಾಡಿಗ ಕದಂ ದುಬೈ ಉಚಿತವಾಗಿ ನೀಡಿದರು. 

ಸಭೆಗೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಬಿ ಎಮ್ ಸುಕುಮಾರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ ಮಡಿವಾಳ, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರಾಜು ದೇವಾಡಿಗ ತ್ರಾಸಿ, ಸಪ್ತ ಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ, ವಾಸು ದೇವಾಡಿಗ ಕದಂ ದುಬೈ, ಪ್ರಿಯದರ್ಶಿನಿ ಬೆಸ್ಕೂರು, ಕಾರ್ಕಳ ತಾಲೂಕು ವಿಸ್ತರಣಾ ಅಧಿಕಾರಿ ಮಂಜು ದೇವಾಡಿಗ ಉಪಸ್ಥಿತರಿದ್ದರು.

ಸಭೆಗೆ ಬಂದ ಅತಿಥಿಗಳನ್ನು ಶಿಕ್ಷಕರಾದ ಚಂದ್ರಶೇಖರ್ ದೇವಾಡಿಗ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸತೀಶ್ ದೇವಾಡಿಗ ಮಾರಣಕಟ್ಟೆ ನಿರ್ವಹಿಸಿದರು. ರವಿ ದೇವಾಡಿಗ ತಲ್ಲೂರು ಧನ್ಯವಾದಗೈದರು.

ಜೂ.9: ದೇವಾಡಿಗ ಸಮಾಜ ಸೇವಾ ಸಂಘ; ಚಿತ್ತೂರು-ಮಾರಣಕಟ್ಟೆ: ಪುಸ್ತಕ ವಿತರಣೆ (Click)


Share