ಮಂಬಯಿ ದೇವಾಡಿಗ ಸಂಘದಿಂದ ದಿ|ವೇಣೂರಿನ ಪದ್ಮಪ್ರಸಾದ್ ರವರ ಕುಟುಂಬದವರಿಗೆ ಧನಸಹಾಯ

ವೇಣೂರು: ಕ್ಯಾನ್ಸರ್ ರೋಗದಿಂದ ಇತ್ತೀಚೆಗೆ ನಿಧನರಾದ ವೇಣೂರಿನ ಪದ್ಮಪ್ರಸಾದ್ ರವರ ಕುಟುಂಬದವರಿಗೆ ಮಂಬಯಿ ದೇವಾಡಿಗ ಸಂಘದ ಸಾಂತ್ವನ ನಿಧಿಯಿಂದ ಕೊಡಮಾಡಲ್ಪಟ್ಟ ಬಂದ ಚೆಕ್ ನ್ನು ವೇಣೂರು ದೇವಾಡಿಗ ಸಂಘದ ಅಧ್ಯಕ್ಷರಾದ ವಿ ಅಶೋಕ್ ದೇವಾಡಿಗ, ಕಾರ್ಯದರ್ಶಿ ಜಗನ್ನಾಥ ದೇವಾಡಿಗ, ಕೋಶಾಧಿಕಾರಿ ಪ್ರಶಾಂತ ದೇವಾಡಿಗ, ದಯಾನಂದ ದೇವಾಡಿಗ, ಉಮೇಶ್ ದೇವಾಡಿಗ, ಹರೀಶ್ ದೇವಾಡಿಗ ರವರು ಪದ್ಮಪ್ರಸಾದ್ ರವರ ತಾಯಿ ವಾರಿಜಾ ದೇವಾಡಿಗ ರವರಿಗೆ ಹಸ್ತಾಂತರಿಸಿದರು.

ಕಡು ಬಡತನದಿಂದ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ  ವೇಣೂರು ದೇವಾಡಿಗ ಸಂಘದ ಮನವಿಗೆ ಸ್ಪಂದಿಸಿ ಸಹಾಯಧನ ಬಿಡುಗಡೆ ಮಾಡಿದ ದೇವಾಡಿಗರ ಸಂಘ ಮುಂಬಯಿ ಇದರ ಗೌರವಾನ್ವಿತ ಅಧ್ಯಕ್ಷರಿಗೆ,ಪದಾಧಿಕಾರಿಗಳಿಗೆ ಹೃದಯಸ್ಪರ್ಶಿಯಾದ ಕೃತಜ್ಞತೆಗಳು.


Share