ಕಾರ್ಕಳ: ದೇವಾಡಿಗ ಸುಧಾರಕ ಸಂಘ (ರಿ): ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ

ಕಾರ್ಕಳ: ದೇವಾಡಿಗ ಸುಧಾರಕ ಸಂಘ (ರಿ) ಕಾರ್ಕಳ , ಇದರ ವತಿಯಿಂದ 2019 -20ನೇ ಸಾಲಿನ S.S.L.C. ಮೇಲ್ಪಟ್ಟು, ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ.7 -7 -2019 ನೇ ಭಾನುವಾರ ಕಾರ್ಕಳ ತಾಲೂಕು ಆಫಿಸ್ ರಸ್ತೆ ಬಳಿ ಇರುವ ಸಂಘದ ಸಮುದಾಯದ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಳಿಕ ನಡೆಯಿತು.

ಇದರೊಂದಿಗೆ 2017 -18 ನೇ ಸಾಲಿನ ವಾರ್ಷಿಕ ಮಹಾಸಭೆಯೂ ನೆರವೇರಿತು.

ಸಂಘಧ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಕೆ. ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದ್ರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರತ್ನಾಕರ್ ಸಿ. ಮೊಯಿಲಿ ಮತ್ತು ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರಾದ ಶ್ರೀಮತಿ ಚೈತನ್ಯ ಅನೂಪ್ ಶ್ರೀಯಾನ್ ಭಾಗವಹಿಸಿದ್ದರು.

ಇದೇ ಸಂಧರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕು. ರಕ್ಷಿತಾ ದೇವಾಡಿಗ, ಕು. ಸಾಕ್ಷಿ, ಕು. ನಿರೀಕ್ಷಾ, ಕು.ರಮ್ಯಾ ಆರ್, ಹೇಮಂತ್ ಕುಮಾರ್, ಶ್ರೇಯಸ್, ಕು.ಕೃತಿಕಾ, ಇವರನ್ನು ಅಭಿನಂದಿಸಲಾಯಿತು. ಅವಿಭಜಿತ ಕಾರ್ಕಳ ತಾಲೂಕು ವ್ಯಾಪ್ತಿಯ ಸುಮಾರು 70 ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕುಮಾರಿಯರಾದ ಮಂಜುಳಾ, ಮಮತಾ, ಸ್ವರ್ಣ ಪ್ರಾರ್ಥನೆಗೈದರು, ಪ್ರ. ಕಾರ್ಯದರ್ಶಿ ವಿಶ್ವನಾಥ್ ಮುಲ್ಕಿ ವರದಿ ಮಂಡಿಸಿದರು ,

ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಕುಸುಮಾಂಜರಿ ಕೋಶಾಧಿಕಾರಿಯವರ ಪರವಾಗಿ ಲೆಕ್ಕ ಪತ್ರ ಮಂಡಿಸಿದರು, ಉಪಾಧ್ಯಕ್ಷೆ ಶ್ರೀಮತಿ ವತ್ಸಲಾ ಶ್ರೀಯಾನ್ ಶುಭಾಶಂಶನೆಗೈದರು. ಸಂಘದ ಗೌ.ಅಧ್ಯಕ್ಷರಾದ ಶ್ರೀಯುತ ರಾಜು ದೇವಾಡಿಗ, ಮಹಿಳಾ ವಿಭಾಗದ ಗೌ. ಅಧ್ಯಕ್ಷೆ ಶ್ರೀಮತಿ ಶಾಂತಾಬಾಯಿ, ಕೋಶಾಧಿಕಾರಿ ಶ್ರೀಮತಿ ಸೀಮಾ ಕಾರ್ಕಳ, ಯುವ ವಿಭಾಗದ ಪ್ರ. ಕಾರ್ಯದರ್ಶಿ , ಮನೋಹರ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ವಿಭಾಗದ ಕು. ಪ್ರಜ್ಞಾ ಶೇರಿಗಾರ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಪ್ರಕಾಶ್ ದೇವಾಡಿಗ ಧನ್ಯವಾದವಿತ್ತರು. ದಯಾನಂದ ಕೆ. ಸಹಕಾರವಿತ್ತರು.

ಪೂರ್ವಾಧ್ಯಕ್ಷರಾದ ರವಿಶಂಕರ್ ಶೇರಿಗಾರ್ , ಲಕ್ಷ್ಮೀನಾರಾಯಣ ಕೆ. ಹಾಗೂ ರವೀಂದ್ರ ಮೊಯಿಲಿ, ಮತ್ತು ಮಹಾಬಲ ಮೊಯಿಲಿ, ಸದಾಶಿವ ದೇವಾಡಿಗ, ಸಂಜೀವ ದೇವಾಡಿಗ, ನವೀನ್ ದೇವಾಡಿಗ, ನಾರಾಯಣ ದೇವಾಡಿಗ, ದಯಾನಂದ ಮೊಯಿಲಿ, ಗೋಪಾಲ್ ಶೇರಿಗಾರ್, ರವೀಂದ್ರ ಮೆಸ್ಕಾಮ್, ಶಿವ ದೇವಾಡಿಗ, ಅಶೋಕ್ ವಿ. ಮೊಯಿಲಿ, ಪ್ರವೀಣ್ ದೇವಾಡಿಗ, ರಕ್ಷಿತ್ ದೇವಾಡಿಗ, ಕೆ.ಕೆ. ದೇವಾಡಿಗ ಮುಂತಾದ ಗಣ್ಯರು ಉಪಸ್ಥಿತರಿದ್ದರು.


Share