ದೇವಾಡಿಗ ಮಿತ್ರ ದುಬೈ (ಕದಂ): 9 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಶೈಕ್ಷಣಿಕ ದತ್ತು ಸ್ವೀಕಾರ ಸಮಾರಂಭ

ತ್ರಾಸಿ: ಕುಂದಾಪುರ: ದೇವಾಡಿಗ ಮಿತ್ರ ( ಕದಂ ) ದುಬೈ ಸದಸ್ಯರ ವತಿಯಿಂದ 9 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಅಭಿನಂಧನೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಸಮಾರಂಭ ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ  ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಅಧ್ಯಕ್ಷರು ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ, ಡೈರೆಕ್ಟರ್ ಎಲಿಗೇಂಟ್ ಸಮೂಹ ಸಂಸ್ಥೆ ದುಬೈ, ಶಾರ್ಜಾ ಶ್ರೀಲಂಕಾ ಇವರು ವಹಿಸಿದ್ದರು.

ಸಮಾರಂಭದ ಉದ್ಘಾಟನೆಯನ್ನು ಶ್ರೀ ಶೇಖರ್ ದೇವಾಡಿಗ; ಅರಕ್ಷರು ಅಮಾಸೆಬೈಲು ಠಾಣೆ  ಇವರು ನೆರವೇರಿಸಿದರು. ಶ್ರೀ ಸುರೇಶ್ ದೇವಾಡಿಗ ಕಂಚಿಕಾನ್ ಬಿಜೂರು; ಉಪಾಧ್ಯಕ್ಷರು ಕುಂದಾಪುರ ದೇವಾಡಿಗ ಮಿತ್ರ ಕದಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು.

ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಕಾರ್ಯದರ್ಶಿಯಾದ ಶ್ರೀ ನಾರಾಯಣ ದೇವಾಡಿಗ ಬಡಾಕೆರೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಸ್ಯಾಕ್ಸೋಫೋನ್ ಅಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಸುಂದರ್ ಶೇರಿಗಾರ್ ಅಲೆವೂರು, ಸುಧಾಕರ್ ದೇವಾಡಿಗ ಮುನಿಯಾಲು, ಸತೀಶ್ ದೇವಾಡಿಗ ಸಾಲಿಗ್ರಾಮ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಳೆದ 10 ವರ್ಷಗಳಿಂದ ಕದಂ ನ ಕಾರ್ಯ ವೈಖರಿಯನ್ನು ಶ್ಲಾಘಿಸಿ ಕದಂನ ಎಲ್ಲಾ ಸದಸ್ಯರ ಪರವಾಗಿ ಕದಂ ನ ಅಧ್ಯಕ್ಷರಾದ ದಿನೇಶ್ ಚಂದ್ರಶೇಖರ್ ದೇವಾಡಿಗ ಹಾಗೂ ಅವರ ದರ್ಮಪತ್ನಿಯನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ದೇವಾಡಿಗ ವಿದ್ಯಾರ್ಥಿ ಕು ಅರ್ಚನಾ ಕುಂಬಾಶಿ , ಎಸ್ ಎಸ್ ಎಲ್ ಸಿ ಯಲ್ಲಿ  ರಾಜ್ಯಕ್ಕೆ 3ನೇ ಸ್ಥಾನ ಪಡೆದ ಕು.ವಿದ್ಯಾಶ್ರೀಯನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಪುರಸ್ಕರಿಸಲಾಯಿತು.ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತೇರ್ಗಡೆ ಹೊಂದಿದ ಸಮಾಜದ 250ಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು ಹಾಗೂ 34 ಬಡ ಮಕ್ಕಳನ್ನು ದತ್ತು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಧರ್ಮಪಾಲ ಯು ದೇವಾಡಿಗ, ಗೌರವಾಧ್ಯಕ್ಷರು ಏಕಾನಾಥೇಶ್ವರಿ ದೇವಸ್ಥಾನ ಟ್ರಸ್ಟ್ ರಿ. ಬಾರ್ಕುರು; ಶ್ರೀ ರಾಜು ದೇವಾಡಿಗ ತ್ರಾಸಿ, ಗೌರವಾಧ್ಯಕ್ಷರು ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ; ಶ್ರೀ. ಶೀನ ದೇವಾಡಿಗ ಮರವಂತೆ, ಗೌರವಾಧ್ಯಕ್ಷರು ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ; ಶ್ರೀಮತಿ ಗೌರಿ ದೇವಾಡಿಗ, ಜಿಲ್ಲಾ ಪಂಚಾಯತ್ ಸದಸ್ಯರು ಉಡುಪಿ; ಶ್ರೀ ಎಚ್ ಮೋಹನದಾಸ್, ವಿಶ್ವಸ್ಥರು ಶ್ರೀ ಏಕಾನಾಥೇಶ್ವರಿ ದೇವಸ್ಥಾನ ಬಾರಕೂರು; ಶ್ರೀ ರವಿ ಎಸ್ ದೇವಾಡಿಗ ಮುಂಬೈ ಅಧ್ಯಕ್ಷರು ದೇವಾಡಿಗ ಸಂಘ ಮುಂಬೈ; ರಮೇಶ್ ದೇವಾಡಿಗ ವಂಡ್ಸೆ, ಕೈಗಾರಿಕೋದ್ಯಮಿ ಹಿಂದ್ ಪ್ಯಾಕ್ ಇಂಡಸ್ಟ್ರಿ ಬೆಂಗಳೂರು; ಶ್ರೀ ವಿಶಾಲಾಕ್ಷಿ ದೇವಾಡಿಗ ಅಧ್ಯಕ್ಷರು ಮಹಿಳಾ ಘಟಕ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ;  ಶ್ರೀ ರಘುರಾಮ ದೇವಾಡಿಗ ಆಲೂರು, ಅಧೀಕ್ಷಕರು ವನ್ಯ ಜೀವಿ ವಿಭಾಗ ಶಿವಮೊಗ್ಗ;  ಶ್ರೀ ಜನಾರ್ದನ ದೇವಾಡಿಗ ಉಪ್ಪುಂದ, ಉದ್ಯಮಿ ಮುಂಬೈ;  ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು, ಶ್ರೀ ನಾಗರಾಜ್ ದೇವಾಡಿಗ ಪಡುಕೋಣೆ ಉದ್ಯಮಿ ಮುಂಬೈ,  ಶ್ರೀ ರಾಮದಾಸ್ ಬಂಟ್ವಾಳ, ಪ್ರವೀಣ್ ನಾರಾಯಣ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ರವಿ ದೇವಾಡಿಗ ತಲ್ಲೂರು ಸ್ವಾಗತಿಸಿದರು.ಮಹೇಶ ದೇವಾಡಿಗ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿದರು ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು


Share