ಬಿಜೂರಿನಲ್ಲಿ ಆಟೋ ಚಾಲಕರಿಂದ 73ನೇ ಸ್ವಾತ್ಯಂತ್ರೋತ್ಸವ ಆಚರಣೆ

ಬಿಜೂರು: ಸ್ಥಳೀಯ ಆಟೋ ಚಾಲಕ ವೃಂದ ದಿಂದ ಈ ವರ್ಷ 73ನೇ ಸ್ವಾತ್ಯಂತ್ರೋತ್ಸವ ಆಚರಿಸಲಾಯಿತು. ಎಂದಿನಂತೆ ಬಿಜೂರು ನಿವಾಸಿ ವಿಜಯ ಕುಮಾರ್ ಬೆಸ್ಕೂರು ಮತ್ತು ಅವರ ಪತ್ನಿ ಶ್ರೀಮತಿ ಮೀನ ಬೆಸ್ಕೂರು ರವರು ನಮ್ಮ ದೇಶದ ದ್ವಜಾರೋಹಣ ಮಾಡಿ ವಂದಿಸಿ ರಾಷ್ಟ್ರಗೀತೆ ಹಾಡಲಾಯಿತು.

ಉಪ್ಪುಂದ ದುರ್ಗಾ ಪರಮೇಶ್ವರಿ ಶಾಲೆಯ ಹತ್ತಿರವಿರುವ ಸರಕಾರಿ ಶಾಲೆಯ ಮಕ್ಕಳ ಉಪಸ್ಥಿತಿ ಈ ಸಭೆಗೆ ಮೆರಗು ತಂದಿತ್ತು. ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಗಿದ್ದು ಶಾಲಾ ನೋಟ್ ಬುಕ್ ವಿತರಿಸಲಾಯಿತು.

ನಮ್ಮೂರಿನ ಚಿರಪರಿಚಿತ ಆಟೋ ಚಾಲಕ, ಸಮಾಜ ಸೇವಾ ಮನೋಬಾವದ ಶ್ರೀ ಗೋವಿಂದ ಚಪ್ಪರಮನೆಯವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.


Share