ಕರ್ನಾಟಕದ ದೇವಾಡಿಗ ಸಂಘಗಳಿಗೊಂದು ಬಹಿರಂಗ ಪತ್ರ!

ಮಾನ್ಯರೇ 

ದೇವಾಡಿಗರನ್ನು ದೇವಸ್ಥಾನದ ಗಂಟೇ ಬಾರಿಸುವವರು ದೇವಸ್ತಾನದ ದೇವರನ್ನು ಆಡಿಸುವವರು ದೇವಾಡಿಗರಿಲ್ಲದೇ ದೇವಾಲಯಗಳ ಕಾರ್ಯಗಳು ಆಗದು. . . . . . . . .  ಹೀಗೀದ್ದೆಲ್ಲ ಘೋಷಣೆ ಗಳು ನಾವುಗಳು ಕೆಲವು ಸಬೆ-ಸಮಾರಂಭಗಳಲ್ಲಿ ಕಿವಿಗಳಿಗಳಪ್ಪಡಿಸುವ ಕೈಚಪ್ಪಾಳೇಗಳೊಂದಿಗೇ ಗಣ್ಯರುಗಳಿಂದ ಕೇಳುತ್ತೇವ ಅಲ್ಲವೇ?. ಇದನ್ನು ಕೇಳಿದ ನಮ್ಮ ಸಮಾಜ ಭಾಂದವರ ಮನವು  ಹಿಗ್ಗಿ ಉಲ್ಲಸಿತಗೊಳ್ಳುತ್ತದೇ. ಆದರೇ ವಾಸ್ತವದಲ್ಲಿ ನಮ್ಮ ಪೂರ್ವಿಕರು ದೇವಾಲಯಗಳಲ್ಲಿ ಶತಮಾನಗಳಿಂದ ಚಾಕರಿಯನ್ನು ಮಾಡುತ್ತಾ ಬಂದಿದ್ದರೂ ಅಲ್ಲಿ ಚಾಕರಿ ಸೇವೆ ಮಾಡಿದ ನಮ್ಮವರ ಜೀವನ ಮಟ್ಟ ಉನ್ನತ ಮಟ್ಟಕ್ಕೇ ಏರೀದೇಯೇ ಎಂದು ತಿಳಿದುಕೊಳ್ಳಬೇಕಿದೆ. ಧಾರ್ಮಿಕ ದತ್ತಿ ಇಲಾಕೆಗೆ ಒಳ ಪಟ್ಟ ಮತ್ತು ಒಳ ಪಡದ ದೇವಾಲಯಗಳಿಂದ ಅಲ್ಲಿ ಹಲವಾರು ವರ್ಷಗಳಿಂದ ಚಾಕರಿ ಮಾಡುತ್ತಿರುವ ನಮ್ಮ ಜನರಿಗೆ ವೈದ್ಯಕೀಯ ಸವಲತ್ತುಗಳು ಸಿಗುತ್ತಿದೇಯೇ?  ಮತ್ತು ಅವರಿಗೆ ಅಲ್ಲಿಂದ ನಿವ್ರತ್ತಿ ಯ ನಂತರ ಈ ಅಸಂಘಟಿತ ಕಾರ್ಮಿಕರಿಗೆ ಮಾಷಾಸನಗಳು ಸಿಗುತ್ತಿವೇಯೇ?  ಎನ್ನುವುದರ ಬಗ್ಗೆ ದೇವಾಡಿಗ ಅಭ್ಯುದಯಕ್ಕಾಗಿ ಹುಟ್ಟಿಕೊಂಡ  ದೇವಾಡಿಗ ಸಂಘಗಳು ಬಹಳಷ್ಟು ಬೇಗ ಚಿಂತಿಸಬೇಕಿದೆ. 

ಸಂಘಗಳಲ್ಲಿ ಅಧಿಕಾರದಲ್ಲಿದ್ದುಕ್ಕೊಂಡು ಸಮಾಜದ ಜನರ ಹ್ರದಯವೇಂಬ ದೇಗುಲದಲ್ಲಿ ಜೀವನವಂಬ ರಥಕ್ಕೆ  ಸುರಕ್ಷೆಯನ್ನು ಕೊಟ್ಟಾಗ ಮಾತ್ರ ಆ ಅಧಿಕಾರ ಸಾರ್ಥಕ ಇಲ್ಲವಾದಲ್ಲಿ ಅದು ನಿರರ್ಥಕ ಎನ್ನುವುದು ನನ್ನ ವಯಕ್ತಿಕ ಅನಿಸಿಕೆ. 

ಸಭೇ ಸಮಾರಂಭದಲ್ಲಿ ಮುಜರಾಯಿ ಸಚಿವರನ್ನು ಕರೆಸಿ ಅವರ ಭಾಷಣ ಕೇಳಿ ಕೇವಲ  ಚಪ್ಪಾಳೇಗಳಿಗೇ ಸಮಾಜವನ್ನು ಸೀಮಿತವಾಗಿರಿಸಿದರೇ ಅದ್ಯಾವ ಪ್ರಯೋಜನಕ್ಕೂ ಬಾರದು ಎಂದು ಸಮಾರಂಭದ ಆಯೋಜಕರು ಮೊದಲು ತಿಳಿಯಬೇಕಿದೆ

ಇತ್ತೀಚೆಗೆ ದೇವಸ್ಥಾನಗಳ ನಿರ್ಮಾಣಗಳಲ್ಲಿ ದೇವಾಡಿಗ ಸಂಘ ಮತ್ತು ಸಮಾಜ ಒಂದಾಗಿದೇ. ಪೊಳಲಿಯ ರಥ ನಿರ್ಮಾಣದಲ್ಲಿ  ಒಂದಾಗಿದೇ , ಅದೇ ರೀತಿ ದೇವಾಲಯಗಲ್ಲಿ ಚಾಕರಿ ಮಾಡುತ್ತಿರುವ ಈ ಅಸಂಘಟಿತ ಕಾರ್ಮಿಕರ ಹಕ್ಕನ್ನು ಕೊಡಿಸುವಲ್ಲಿ ಸಂಘಗಳಲ್ಲಿ ಅಧಿಕಾರ ಹಿಡಿದ ಅಧ್ಯಕ್ಷರುಗಳು ಮತ್ತು ಪದಾದೀಕಾರಿಗಳು ಕೈಜೋಡಿಸುವ ಅಗತ್ಯತೇ ಇದೆ. 

ಬಾರಕೂರಿನಲ್ಲಿನ ನಮ್ಮ ಸಮಾಜದ ದೇವಸ್ಥಾನದಲ್ಲಿ ವ್ಯವಸ್ಟಾಪನಾ ಸಭೇಯಲ್ಲಿ  ಸಂಘಗಳು ಸಭೆ ಸೇರಿದಾಗ ಇದರ ಬಗ್ಗೆ ಒಂದು ಚರ್ಚೆ ನಡೆಸಿ ಈ ಅಸಂಘಟಿತ ಕಾರ್ಮಿಕರಿಗೆ ಒಂದು ಭರವಸೆಯ ಬೆಳಕನ್ನು ನೀಡುವ ಬಗ್ಗೆ ಹೋರಾಟ ನಡೆಸಬೇಕೆಂದು ನನ್ನ ಕಳಕಳಿಯ ಮನವಿ. ಇದಕ್ಕಾಗಿ ಸಮಾಜದಲ್ಲಿನ ಎಲ್ಲಾ ಪಕ್ಷಾತೀತವಾಗಿ ರಾಜಕೀಯ ಧುರೀಣರು, ನಮ್ಮವರೇ ಆದ ಗ್ರಾಮ ಪಂಚಾಯತ ಸದಸ್ಯರಿಂದ ಹಿಡಿದು ಮೇಯರ್ ನವರ ಸಹಕಾರ ಪಡೇದುಕೊಂಡು ಮುಂದಿನ ಪೀಳಿಗೇಗೆ ಹೆಜ್ಜೆ ಗುರುತು ಮೂಡಿಸಬೇಕು.

ಮತ್ತೊಮ್ಮೇ ಭೇಟಿಯಾಗೋಣ.

ಇಂತೀ ನಿಮ್ಮ ;

ಪಯಣಿಗ


Share