ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಶೋಭಾ ಸೋಮನಾಥ ದೇವಾಡಿಗ ಪಾವಂಜೆಯವರಿಗೆ ಸನ್ಮಾನ

ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಣ್ಣಗುಡ್ಡ , ಮಂಗಳೂರು ಹಾಗೂಮಹಿಳಾ ಮತ್ತು ಯುವ  ಸಂಘಟನೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ "ದೀಪಾವಳಿ ಸಂಭ್ರಮ 2019 " ಕಾರ್ಯಕ್ರಮವು ಯಶಸ್ವಿಯಾಗಿ ದಿನಾಂಕ 03-11-2019ರಂದು ನಡೆಯಿತು . ಕಾರ್ಯಕ್ರಮ ಉದ್ಘಾಟಕರಾಗಿ  ದಕ್ಷಿಣ ಕನ್ನಡ ಜಿಲ್ಲಾ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಆಗಮಿಸಿದ್ದರು.

 ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿಶಿಷ್ಟ ಸಾಧನೆ ಸಾಧನೆಗೈದ ನಮ್ಮ ಸಮಾಜದ ಕೀರ್ತಿಯನ್ನು ಹಬ್ಬಿಸಿ ,   ಹೊರನಾಡ  ಕನ್ನಡಿಗರಾಗಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಕಂಪನ್ನು ದೇಶ-ವಿದೇಶಗಳಲ್ಲಿ ಪಸರಿಸಿ 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಬಿ. ಜಿ ಮೋಹನ್  ದಾಸ್, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಶೋಭಾ ಸೋಮನಾಥ ದೇವಾಡಿಗ  ಪಾವಂಜೆ  ಹಾಗೂ ಶ್ರೀ ಸಾಧು ಸೇರಿಗಾರ್ ಬೆನಗಲ್ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ. ರಾ. ದೇ. ಸಂಘ ಮಣ್ಣಗುಡ್ಡ, ಮಂಗಳೂರು  ಅಧ್ಯಕ್ಷರಾದ ಶ್ರೀ ದೇವರಾಜ್. ಕೆ. ವಹಿಸಿದ್ದರು.ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮೊಯ್ಲಿ,  ಪ್ರಧಾನ ಕಾರ್ಯದರ್ಶಿ ಶ್ರೀ  ಶಿವಾನಂದ ಮೊಯ್ಲಿ, ಖಜಾಂಚಿ ಶ್ರೀಮತಿ ಗೀತಾ ಕಲ್ಯಾಣ್ ಪುರ ಹಾಗೂ ಗಿರಿಗಿಟ್  ಚಲನಚಿತ್ರದ ನಿರ್ದೇಶಕರಾದ ಶ್ರೀ ರಾಕೇಶ್ ಕದ್ರಿ  ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶೋಭಾ ಸೋಮನಾಥ್ ದೇವಾಡಿಗ ಪಾವಂಜೆ! (Click)


Share