ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ತ್ರಾಸಿಯ ಪ್ರತಿಭಾನ್ವಿತ ನ್ರತ್ಯ ಪ್ರತಿಭೆ ಭಾವನಾ ಆರ್ ದೇವಾಡಿಗ

ಪುಣೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ತ್ರಾಸಿಯ ಪ್ರತಿಭಾನ್ವಿತ ನ್ರತ್ಯ ಪ್ರತಿಭೆ ಭಾವನಾ ಆರ್ ದೇವಾಡಿಗ.

ನವೆಂಬರ್ 2ರಂದು ಥೈಲ್ಯಾಂಡ್ ನಲ್ಲಿ ನೆಡೆದ "ಇಂಡಿಯಾಸ್ ಇಂಟರ್ ನ್ಯಾಷನಲ್ ಗ್ರೂವ್ ಫೆಸ್ಟ್-2019" ರಲ್ಲಿ ಭಾಗವಹಿಸಿ ಮೂರನೇ ಸ್ಥಾನ ಹಾಗೂ ಚಿನ್ನದ ಪದಕ ಗಳಿಸಿರುತ್ತಾರೆ.

ಭಾವನಾ ಆರ್ ದೇವಾಡಿಗ ಹಾಗೂ ಅವರ 30 ವಿದ್ಯಾರ್ಥಿಗಳ ತಂಡ  "ಮಹಾಭಾರತದ" ತುಣುಕನ್ನು ನ್ರತ್ಯ ರೂಪದಲ್ಲಿ ನೀಡಿದ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಅಂತರಾಷ್ಟ್ರೀಯ ವೇದಿಕೆಯಲ್ಲಿ 105 ತಂಡ ಇದ್ದು ಅವರಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮೂರಿನ ಘನತೆಯನ್ನು ಹೆಚ್ಚಿಸಿದ್ದಾರೆ.ಇನ್ನೂ ಹೆಚ್ಚಿನ ಸಾಧನೆ ನಿಮ್ಮದಾಗಲಿ.
ನಿಮಗೂ ಹಾಗೂ ನಿಮ್ಮ ತಂಡಕ್ಕೆ ಹಾರ್ದಿಕ ಅಭಿನಂದನೆಗಳು


Share