ನೊಂದ ದೇವಾಡಿಗರ ಜೊತೇ ದೀಪಾವಳಿ ಆಚರಿಸಿದ ದೇವಾಡಿಗ ಅಕ್ಷಯ ಕಿರಣ

ಉಡುಪಿ: ನೊಂದ ದೇವಾಡಿಗ ಸ್ಪಂದನೆಯೇ ಮೂಲ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿರುವ ದೇವಾಡಿಗ ಅಕ್ಷಯ ಕಿರಣ ಅಕ್ಟೋಬರ್ ತಿಂಗಳಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂರು ವೈದ್ಯಕೀಯ ಮನವಿಗಳನ್ನು ತುರ್ತು ಸೇವಾ ಯೋಜನೇಯ ಅಡಿ ಗುರುತಿಸಲಾಗಿತ್ತು. ಅದರಂತೆ ಸಂಸ್ಥೆಯ ಸೇವಾದಾರರು ಅಕ್ಟೋಬರ್ ತಿಂಗಳ 27 ನೇ ತಾರೀಕು ದೀಪಾವಳಿ ದಿನದಂದು ಅತೀ ಸಂಕಷ್ಟದಲ್ಲಿರುವ ವೈದ್ಯಕೀಯ ಸಮಸ್ಯೆ ಯಿಂದ ಬಳಲುತ್ತಿರುವ ತಲೆಯ ನರದಲ್ಲಿ ರಕ್ತ ಹೆಪ್ಪುಗಟ್ಟಿ ದೇಹದ ಬಲ ಬಾಗದ ಸ್ವಾಧೀನ ಕಳೆದುಕೊಂಡಿರುವ ಬೈಂದೂರು ಯಡೇರಿ ಹೊನ್ನಿತೋಡ್ ಮನೇಯ ಶ್ರೀ ಸೂರ ದೇವಾಡಿಗರ ಮನೆಗೇ ತೆರಳಿ ರೂ 20,000/- ವೈದ್ಯಕೀಯ ನೇರವು ನೀಡಿ ತಮ್ಮ 47 ನೇ ಸೇವಾಯಜ್ಣವನ್ನು ಪೂರೈಸಿದರು. 

ಬೈಂದೂರು ಯಡೇರಿ ಹೊನ್ನಿತೋಡ್ ಮನೇಯ ಶ್ರೀ ಸೂರ ದೇವಾಡಿಗ

ಅಲ್ಲಿಂದ ಸೇವಾದಾರರು ಪಡುಬಿದ್ರಿಯ ಕ್ಯಾನ್ಸರ್ ಪೀಡಿತೇಯ ಮನೆಗೆ ಭೇಟಿ ನೀಡಿ ರೂ 20,000/- ವೈದ್ಯಕೀಯ ನೇರವು ನೀಡಿ ತಮ್ಮ 48 ನೇಯ ಸೇವಾ ಯಜ್ಣವನ್ನು ಪೂರೈಸಿದರು. ಅದೇ ದಿನ ಮತ್ತೊಂದು ಕಡೇ ಸೇವಾದಾರರು ಕುಂದಾಪುರ ತಾಲೂಕಿನ ಶಂಕರನಾರಾಯಣಕ್ಕೆ ತೇರಳಿ ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿರುವ  ಕಮಲ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 12,500/ ವೈದ್ಯಕೀಯ ನೇರವು ನೀಡಿ ತಮ್ಮ 49 ನೇಯ ಸೇವಾಯಜ್ಣವನ್ನು ಪೂರೈಸಿದರು. 

ದೀಪಾವಳಿಯ ದಿನದಂದು ಎಲ್ಲರೂ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೇ ದೀಪಾವಳಿಯನ್ನು ಆಚರಿಸಿದರೆ ದೇವಾಡಿಗ ಅಕ್ಷಯ ಕಿರಣ ದ ಸೇವಾದಾರರು ದೀಪಾವಳಿಯ ದಿನದಂದು ನೊಂದವರ ಮನೆಗೇ ತೇರಳಿ ಅವರ ಮನದಲ್ಲಿ ಒಂದು ಆಶಾಕಿರಣದ  ಜ್ಯೋತಿಯನ್ನು ಬೆಳಗಿಸಿದ್ದು ಇಡೀ ಸಮಾಜಕ್ಕೇ ಒಂದು ಪ್ರೇರಣೇಯಾದರು. 

ಅಂದಿನ ಸೇವಾ ಕಾರ್ಯದಲ್ಲಿ ಸೇವಾದಾರರಾದ ಶ್ರೀ ಡಾ.ಮಧುಕರ ದೇವಾಡಿಗ ಸೌದಿ ಅರೇಬಿಯಾ,  ಶ್ರೀ ನಾಗೇಂದ್ರ ದೇವಾಡಿಗ ಉಪ್ಪುಂದ, ಶ್ರೀ ರಾಮ ದೇವಾಡಿಗ ಬೈಂದೂರು,  ಶ್ರೀ ಮಧುಕರ ದೇವಾಡಿಗ ಉಪ್ಪುಂದ, ಶ್ರೀ ಪುರುಷೋತ್ತಮ ದಾಸ್ ಉಪ್ಪುಂದ, ಶ್ರೀ ರಾಜ ದೇವಾಡಿಗ ಗಂಗೋಳ್ಳಿ, ಶ್ರೀ ಅಭಿಷೇಕ ದೇವಾಡಿಗ ಆಲೂರು,  ಶ್ರೀ ಜಗದೀಶ ದೇವಾಡಿಗ ಉಪ್ಪುಂದ,  ಶ್ರೀ ಮೋಹನ್ ದೇವಾಡಿಗ ಬಿಜೂರು,  ಶ್ರೀ ಸತೀಶ ದೇವಾಡಿಗ ಕಾರ್ಕಡ , ಶ್ರೀ ನಾಗೇಶ ದೇವಾಡಿಗ ಉದ್ಯಾವರ, ಶ್ರೀ ಸಂತೋಷ ದೇವಾಡಿಗ ಮಂಗಳೂರು, ಶ್ರೀ ಬಾಲಕೃಷ್ಣ ದೇವಾಡಿಗ ಪಡುಬಿದ್ರಿ, ಶ್ರೀ ರಮೇಶ ಮೊಯ್ಲಿ ಪಡುಬಿದ್ರಿ, ಶ್ರೀ ರಾಮಚಂದ್ರ ದೇವಾಡಿಗ ಶಂಕರನಾರಾಯಣ, ಶ್ರೀ ನಾಗರಾಜ ತಲ್ಲಂಜೆ, ಶ್ರೀ ಗುರುರಾಜ ದೇವಾಡಿಗ ಶಂಕರನಾರಾಯಣ ಹಾಗೂ  ಶ್ರೀ ನಾಗರಾಜ ದೇವಾಡಿಗ ಬ್ಯಾಡ್ಗಿರಿ ಜಡ್ಡು ಉಪಸ್ತಿತರಿದ್ದರು.


Share