ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೀಜಿಯವರಿಗೆ ಸಮುದಾಯ ಸಂಸ್ಥೆಗಳ ಹಾಗೂ ಮಿತ್ರರಿಂದ ಅವರ ವಾಸಸ್ಥಳದಲ್ಲೇ ಸನ್ಮಾನ

ಮಣಿಪಾಲ: ದುಬೈ ಕರ್ನಾಟಕ ಸಂಘ ದುಬೈಯ ಮಾಜಿ ಅದ್ಯಕ್ಷರಾಗಿ (೧೯೮೯) ಹಾಗೂ ಗಲ್ಫ್ ಕನ್ನಡಿಗ.ಕಾಮ್ ಕನ್ನಡ ವೆಬ್ ಸೈಟ್ ನಿಂದ ಕನ್ನಡ ಪತಾಕೆಯನ್ನು ಹಾರಿಸಿ, ಕನ್ನಡ ಕಂಪನ್ನ ಪಸರಿಸಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ.ಜಿ.ಮೋಹನ್ ದಾಸ್ ರಿಗೆ(೨೦೧೯) ಸಮುದಾಯ ಸಂಸ್ಥೆಗಳ ಹಾಗೂ ಮಿತ್ರರಿಂದ ಅವರ ವಾಸಸ್ಥಳದಲ್ಲೇ ಸನ್ಮಾನಿತರಾಗಿದ್ದರು. ಅವುಗಳ ವಿವರ ಕೆಳಗೆ ಇದೆ..

1) 2019ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ, ದುಬೈಯಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿ, ಮಾತೃ ಭಾಷೆಯ ಬಗ್ಗೆ ಅನನ್ಯ ಸಾಧನೆ ಮಾಡಿದ, ಆತ್ಮೀಯರಾದ ಶ್ರೀ ಬಿ.ಜಿ ಮೋಹನದಾಸ್ ಅವರನ್ನು ಅವರ ನಿವಾಸಕ್ಕೆ ಗೆ ತೆರಳಿ  ರೋಟರಿ ಕ್ಲಬ್ ಉಡುಪಿ ರಾಯಲ್ ನ ಸದಸ್ಯರ ನಿಯೋಗ ಅಭಿನಂದಿಸಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಯಶವಂತ್ ಬಿ.ಕೆ, ಸ್ಥಾಪಕಾಧ್ಯಕ್ಷ ರತ್ನಾಕರ್ ಇಂದ್ರಾಳಿ, ನಿಯೋಜಿತ ಅಧ್ಯಕ್ಷ ಮಂಜುನಾಥ್ ಮಣಿಪಾಲ್, ತೇಜೇಶ್ವರ್ ರಾವ್,  ಗುರುಪ್ರಸಾದ್ ಪಾಲನ್, ವೇಣುಗೋಪಾಲ್ ಕೆಂಜೂರ್, ಲಕ್ಷ್ಮೀಕಾಂತ್ ಬೆಸ್ಕೂರ್, ಜ್ಯೋತಿ ಕೃಷ್ಣಮೂರ್ತಿ, ದಿವ್ಯಾ ಶೆಟ್ಟಿ ಉಪಸ್ಥಿತರಿದ್ದರು..

2) ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಿ 2019ನೇ ಸಾಲಿನ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಬಿ. ಜಿ.ಮೋಹನದಾಸ್ ಇವರನ್ನು ನರಸಿಂಹ ದೇವಾಡಿಗ ಪುಣೆ (ಹೇರಂಜಾಲು), ಪ್ರಭಾಕರ ದೇವಾಡಿಗ ಪುಣೆ (ಮಣಿಪಾಲ) ರಾಜೇಶ್ ದೇವಾಡಿಗ ಕಂಬದಕೋಣೆ, ಮಂಜುನಾಥ ದೇವಾಡಿಗ ಹೇರಂಜಾಲು, ಮತ್ತು ಸತೀಶ್ ಭಟ್ ಹೊನ್ನಾವರ   ಇವರೆಲ್ಲ ಮಿತ್ರರು ಸೆರಿ   ಅಭಿನಂದಿಸಿದರು. ಶ್ರೀ ಏಕನಾಥೇಶ್ವರಿ ದೇವಿ ತಮ್ಮನ್ನು ಸದಾ ಹರಸಲಿ ಎಂದು ಹಾರೈಸಿದರು.

3) ಹೊರ ನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಿ 2019ನೇ ಸಾಲಿನ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ B. G. ಮೋಹನದಾಸ ಇವರನ್ನು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಪರವಾಗಿ ವಿಶ್ವಸ್ಥಮಂಡಳಿಯ ಉಪಾಧ್ಯಕ್ಸರು ಶ್ರೀ ಜನಾರ್ಧನ ದೇವಾಡಿಗ ಬಾರ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ನರಸಿಂಹ ಉಡುಪಿ, ಸಂಚಾಲಕರು ಶ್ರೀ ಹಿರಿಯಡ್ಕ ಮೋಹನದಾಸ, ಆಡಳಿತಾಧಿಕಾರಿ ಶ್ರೀ ಜನಾರ್ಧನ  ಪಾಡುಪಣಂಬೂರ್ ರವರು  ಅಭಿನಂದಿಸಿದರು. ಶ್ರೀ ಏಕನಾಥೇಶ್ವರಿ ದೇವಿ ತಮ್ಮನ್ನು ಸದಾ ಹರಸಲಿ ಎಂದು ಹಾರೈಸಿದರು.

 

4) 
ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಬಿಜಿ ಮೋಹನ್ ದಾಸ್ ಅವರ ಮನೆಗೆ ಭೇಟಿ ನೀಡಿ ಸಾಲು ಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ರವಿ ದೇವಾಡಿಗ ತಲ್ಲೂರು, ಪುರುಷೋತ್ತಮದಾಸ್ ಉಪ್ಪುಂದ,ಸುಧಾಕರ್ ದೇವಾಡಿಗ ಹೆಮ್ಮಾಡಿ, ನಿತಿನ್ ದೇವಾಡಿಗ ಉಪಸ್ಥಿತರಿದ್ದರು.


Share