ಲಕ್ಞ್ಮೀ ದೇವಾಡಿಗ: ಬನಶಂಕರಿಯ ಸೇವೆಯಲ್ಲಿ ಕಮ್ಮಿಯಾಗದ ಉತ್ಸಾಹ; ಇಳಿವಯಸ್ಸಲ್ಲೂ ಕಟ್ಟುಕಟ್ಟಳೆ ಸೇವೆ

ಉಳ್ಳೂರು 74 ದೇಗುಲದಲ್ಲಿ ನಿತ್ಯ ಕಾಯಕ
ಕಾಡೊಳಗೆ ಮನೆ ಮಾಡಿ ಗುಡುಗು, ಸಿಡಿಲು, ಮಳೆ, ಬಿರುಗಾಳಿ ಎದುರಾದರೂ ತನ್ನ ಪೂರ್ವಿಕರು ನಡೆಸಿಕೊಂಡು ಬಂದಿರುವ ಕಟ್ಟುಕಟ್ಟಳೆ ಸೇವೆಯನ್ನು ಇವತ್ತಿಗೂ ಮುಂದುವರಿಸಿಕೊಂಡು ಬಂದಿರುವ ಮಹಿಳೆಯೊಬ್ಬರು ಗಮನಸೆಳೆಯುತ್ತಿದ್ದಾರೆ.

ತಾಲೂಕಿನ ಉಳ್ಳೂರು 74 ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಬನಶಂಕರಿ ದೇವಾಲಯದಲ್ಲಿ ಕಟ್ಟುಕಟ್ಟಳೆ ಸೇವೆ ಮಾಡಿಕೊಂಡು ಬರುತ್ತಿರುವ 80 ಹರೆಯದ ಲಕ್ಷ್ಮೀ ದೇವಾಡಿಗ ಅವರ ಜೀವನಗಾಥೆಯಿದು. ದೇಗುಲದ ಹೊರಸುತ್ತಿನ ಪರಿವಾರ ದೇವರ ಗುಡಿಯ  ಭೈರವ- ಭೈರವಿಗೆ ಪ್ರತಿದಿನ ಸಂಜೆ 6 ಗಂಟೆಗೆ 1 ಸೇರು ಕೊಚ್ಚಿಗೆ ಅಕ್ಕಿಯನ್ನು ನೈವೇದ್ಯಕಾಗಿ ಸ್ವತಃ ಅವರು ಹಿಡಿದುಕೊಂಡು ಬಂದು ದೇವರಿಗೆ ಅರ್ಪಿಸಿ ಅರ್ಚಕರಿಂದ ಅಕ್ಕಿಗೆ ಪೂಜೆ ತೀರ್ಥ ಪ್ರೋಕ್ಷಣೆಯಾದ ಮೇಲೆ ಗಣಪತಿ, ಬನಶಂಕರಿಗೆ ಪೂಜಾ ಸಮಯದಲ್ಲಿ ಗಂಟೆ ಬಾರಿಸಿ ನೈವೇದ್ಯ ಅಕ್ಕಿಯನ್ನು ಮನೆಗೆ ತಂದು ಅನ್ನ ಮಾಡಿ ಊಟ ಮಾಡುವುದು ಇವರ ಪದ್ದತಿ.

ಪ್ರತಿ ಶುಕ್ರವಾರ ಮಧ್ಯಾಹ್ನ ಪ್ರತಿದಿನ ಸಂಜೆ ದೇಗುಲದ ಶುಚಿತ್ವ ಕಾರ್ಯ ನೆರವೇರಿಸಿ ಪೂಜೆಯಲ್ಲಿ ಪಾಲ್ಗೊಂಡು ಕೈ ಶಾರ್ಥರಾಗುತ್ತಾರೆ. ಇವರದ್ದು 30 ಸದಸ್ಯರಿರುವ ದೊಡ್ಡ ಕುಟುಂಬ. ದೇವರ ರಥೋತ್ಸವ 4ನೇ ದಿನದ ಮೊದಲೇ ಎಲ್ಲಿದ್ದರೂ ಬಂದು ಊರು ಸೇರುತ್ತಾರೆ. ದೊಡ್ಡ ಹುದ್ದೆಯಲ್ಲಿರುವ ಇವರುಗಳು ದೇಗುಲದ ಕಟ್ಟುಕಟ್ಟಳೆ ಸೇವೆಯಲ್ಲಿ ಹಿಂದಿನಂತೆ ನಡೆದುಕೊಂಡು ಬಂದಂತೆ ಈಗಲೂ ನೆರವೇರಿಸುತ್ತಾರೆ.

ಹಚ್ಚ ಹಸುರಿನ ರಮ್ಯ ನೆಲೆ 
ಕುಂದಾಪುರ : ತಾಲೂಕಿನ ಉಳ್ಳೂರು 74 ಗ್ರಾಮದಲ್ಲಿರುವ ಬನಶಂಕರಿ ದೇವಾಲಯದ ಪರಿಸರ ಹಚ್ಚ ಹಸರಿನ ರಮ್ಯ ನಲೆಯಾಗಿದೆ. ಯುಧಿಷ್ಠರ ಶಕ 219ರಂದು ದೇವಾಲಯವನ್ನು ಜನಮೇಜಯ ರಾಜನು ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕ್ರಿ.ಶ 13-14ನೇ ಶತಮಾನದಷ್ಟು ಹಿಂದೆ ವಿಜಯನಗರ ಹಾಗೂ ಕೆಳದಿಯ ಅರಸರ ಕಾಲದಲ್ಲಿ ಆಗಿ ಹೋದ ಶೈವ ಸಂಪ್ರದಾಯದ ಹೊನ್ನೆ ಕಂಬಳಿ (ಕ್ರಿ.ಶ. 1500-1618) ದೇಗುಲದ ಪುನರ್ ಪ್ರತಿಸ್ಟಾಪನೆ ನೆರವೇರಿಸಿದ್ದರು ಎನ್ನಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇಗುಲ ಪೂಜಾರ್ಚನೆಯನ್ನು ಬಾದಾಮಿಯ ಹೊಯ್ಸಳ ಕರ್ನಾಟಕ ಬ್ರಾಹ್ಮಣರಾದ ಶಂಕರನಾರಾಯಣಯ್ಯ ಕುಟುಂಬಿಕರು ನಡೆಸಿಕೊಂಡು ಬರುತ್ತಿದ್ದಾರೆ.

ದೇವರ ಸೇವೆ ನಿರಂತರ :

ಹಿಂದೆ ನಮ್ಮ ಬನಶಂಕರಿ ದೇಗುಲದ ಸಾಕಷ್ಟು ಉಂಬಳಿ ಭೂಮಿ ದೇವರ ಸೇವೆ ಮಾಡುವ ಸಮುದಾಯಕ್ಕೆ ನೀಡಲಾಗಿದ್ದು ಭೂ ಮಸೂದೆ ಕಾಯದೆಯಡಿ ಎಲ್ಲ ಭೂಮಿ ಹೋಯಿತು. ಆದರೆ ಭೂಮಿ ಪಡೆದು ಫಲಾನುಭವಿಗಳು ಈಗಲೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಬ್ಬ ಹರಿದಿನಗಳಲ್ಲಿ ಹಿಂದಿನಿಂದಲೂ ತಮ್ಮ ತಮ್ಮ ಸಮುದಾಯಕ್ಕೆ ಮೀಸಲಿಟ್ಟ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. - ಸಂಪಿಗೇರಿ ಸಂಜೀವ ಶೆಟ್ಟಿ (ಮೊಕ್ತೇಸರರು)

ಉತ್ಸಾಹ, ಉಲ್ಲಾಸದ ಪ್ರತಿಬಿಂಬ:

ಲಕ್ಷ್ಮೀ ದೇವಾಡಿಗ ಅವರು ಉತ್ಸಾಹ, ಉಲ್ಲಾಸದ ಪ್ರತಿಬಿಂಬ, ಇಳಿವಯಸ್ಸಿನಲ್ಲಿಯೂ ದೇವರ ಸೇವೆಯಲ್ಲಿ ತನ್ಮಯತೆಯಿಂದ ಪಾಲ್ಗೊಳ್ಳುವ ಅವರ ಸೇವೆ ಮಾದರಿ ಆಗಿದೆ. ಬನಶಂಕರಿ ದೇಗುಲ ಪ್ರಾಚೀನ ಇತಿಹಾಸದ ಕೊಂಡಿ. 2020ರ ಜ.10ರಂದು ವಾರ್ಷಿಕ ಮನ್ಮಹಾರಥೋತ್ಸವ ನಡೆಯಲಿದ್ದು ಉತ್ಸವದಲ್ಲಿ ದೇವರ ಸೇವೆಗೆ ನಿಯೋಜಿತ ಪ್ರತಿಯೊಂದು ಸಮುದಾಯ ಪಾಲ್ಗೊಳ್ಳುವುದು ವಿಶೇಷವಾಗಿದೆ. – ಚಿಟ್ಟೆರಾಜ್ ರಾಜ್‍ಗೋಪಾಲ್ ಹೆಗ್ಡೆ.

ಕ್ತಿ ಇರುವಷ್ಟ ದಿನ ಸೇವೆ : ಬಾಲ್ಯದಿಂದಲೂ ತಾಯಿಯ ಸೇವೆ ಮಾಡಿಕೊಂಡು ಬಂದವಳು ನನಗೆ ಇಲ್ಲಿಯವರೆಗೆ ಸೇವೆ ಮಢಲು ತಾಯಿ ಶಕ್ತಿ ಕೊಟ್ಟಿದ್ದಾಳೆ. ಇನ್ನೆಷ್ಟು ದಿನ ಕೊಡುವಳೊ ಅಷ್ಟು ದಿನ ಸೇವೆ ಮಾಡುವೆ.- ಲಕ್ಞ್ಮೀ ದೇವಾಡಿಗ


Share