ಸುರೇಶ್ ದೇವಾಡಿಗ ಖಂಚಿಕಾನ್ ಇವರಿಗೆ ಪ್ರತಿಷ್ಠಿತ ಡಿಎಚ್ಎಲ್ ಕಂಪನಿಯ Country Achiever Award-2019

ದುಬೈ:  ಕೆಲವು ತಿಂಗಳುಗಳ ಹಿಂದೆ ಕುಂದಾಪುರ ತ್ರಾಸಿ ಇಲ್ಲಿ ನಡೆದ “ಕದಂ” ಕುಂದಾಪುರ ದೇವಾಡಿಗ ಮಿತ್ರ ಇದರ 2019 ಸಾಲಿನ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಅತಿಥಿ ಭಾಷಣದಲ್ಲಿ ಮಾತನಾಡುತ್ತಾ ಸುರೇಶ್ ದೇವಾಡಿಗ ಖಂಚಿಕಾನ್ ಒಂದು ಕರೆಯನ್ನು ವಿದ್ಯಾರ್ಥಿಗಳಿಗೆ ಕೊಡುತ್ತಾರೆ. ಅದು ಇಂದು ನಮಗೆಲ್ಲ ನೆನಪಾಗುತ್ತ ಇದೆ.

ಜೀವನದಲ್ಲಿ ಉತ್ತಂಕ್ಕೆ ಎರಬೇಕಾದರೆ ನಮ್ಮಲ್ಲಿ ‘3ಡಿ’ಯನ್ನು ಅಳವಡಿಸಿಕೊಳ್ಳಬೇಕು ಮೊದಲನೆಯದಾಗಿ  “Determination” ಎರಡನೇಯದಾಗಿ “Dedication” ಹಾಗೂ ಮೂರನೇಯದಾಗಿ “ Dicipline”  ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದನ್ನು ಕೂಡ ಸಾಧಿಸಬಹುದು ನನಗೆ ಇದರಿಂದ ಪ್ರಯೋಜನವಾಗಿದೆ. ನೀವು ಕೂಡ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸುನ್ನು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೆಲವರು ಬಾಷಣಕ್ಕಾಗಿ ಮಾತ್ರ ಪದವನ್ನು ಬಳಸುತ್ತಾರೆ ಹಾಗೂ ಅದನ್ನು ಆಚರಿಸುವುದಿಲ್ಲ ಆದರೆ ನಮ್ಮ ಸುರೇಶ ಖಂಚಿಕಾನ್ ಇವರು ಇದಕ್ಕೆ ತದ್ವಿರುದ್ದ ಇವರು ನಾಗೂ ಮಾಡಿದನ್ನು ಮಾತ್ರ ಇತರಿಗೆ ಬೋದಿಸುತ್ತಾರೆ.

ಇದಕ್ಕೆ ಸಾಕ್ಷಿಯಂತೆ ಅವರು ದುಡಿಯುತ್ತಿದ್ದ ಪ್ರತಿಷ್ಠಿತ ಡಿಎಚ್ಎಲ್ ಕಂಪನಿಯಲ್ಲಿ 2019ನೇ ಸಾಲಿನ Country Best outstanding  Achiever Award” Dedication, Dicipline ಮತ್ತು  Determination, ಅವರನ್ನು ಹುಡುಕಿಕೊಂಡು ಬಂದಿದೆ.

ಇದನ್ನು ಇತ್ತಿಚಿಗೆ ದುಬಾಯಿಯಲ್ಲಿ ನಡೆದ ಕಂಪನಿಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಇದನ್ನು ಪಡೆದು ಸಂಬ್ರಮಿಸಿದರು.

ಇವರು ಈ ಸಂಸ್ಥೆಯಲ್ಲಿ ಹಲವಾರು ವರಷುಗಳಿಂದ ಉನ್ನತ ಹುದ್ದೆಯಲ್ಲಿ ದುಡಿಯುತ್ತಿದ್ದಾರೆ. ಇವರು ಕದಂ ಸಂಸ್ಥೆಯ ಒಬ್ಬ ಮುಖ್ಯ ಸದಸ್ಯರಾಗಿರುತ್ತಾರೆ. ಹಾಗೂ ಇದೆ ಸಂಸ್ಥೆಯ ಉಪಾಧ್ಯಕ್ಷರು ಕೂಡ ಹೌದು. ಅತ್ಯಂತ ಉನ್ನತ ಹುದ್ದೆಯಲ್ಲಿ ಅಲಂಕರಿಸಿದ್ದರೂ ಕೂಡಾ ಸರಳ ವ್ಯಕ್ತಿತ್ವ ಹೊಂದಿರುವ ಇವರು ಹಲವಾರು ಜನಹಿತ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ ಸಹಾಯವನ್ನು ನೀಡಿಕೊಂಡು ಬಂದಿರುತ್ತಾರೆ.

ಪತ್ನಿ ಹೇಮಾ ಸುರೇಶ ಹಾಗೂ ಎರಡು ಮುದ್ದಾದ ಮಕ್ಕಳ ಸುಖಿ ಸಂಸಾರ ಇವರದು, ಇವರಿಗೆ ಇನ್ನು ಹಲವಾರು ಪ್ರಶಸ್ತಿಗಳು ನಗುವಂತಾಗಲಿ ಇವರ ಸಂತೋಷದಲ್ಲಿ ನಮ್ಮ ಕದಂ ಕುಟುಂಬ ಕೂಡ ಬಾಗಿಯಾಗಲು ಅವಕಾಶ ಸಿಗಲಿ ಎಂದು ಎಲ್ಲಾ ಸದಸ್ಯರ ಪರವಾಗಿ ಆಶಿಸುತ್ತೇವೆ.
~ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು “ಕದಂ” ಕುಂದಾಪುರ ದೇವಾಡಿಗ ಮಿತ್ರ ದುಬಾಯಿ

~ Devadiga.com 


Share