ಪುಣೆ ದೇವಾಡಿಗ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ ಮೋಹನ್ ದಾಸ್ ರಿಗೆ ಸನ್ಮಾನ

ಪುನೆ: ಹೊರನಾಡು ಕನ್ನಡಿಗ ವಿಬಾಗದಲ್ಲಿ 2019ನೇ ಸಾಲಿನ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಗಲ್ಫ್ ಕನ್ನಡಿಗ ಬಿ.ಜಿ ಮೋಹನ್ ದಾಸ್  ಅವರಿಗೆ ಪುಣೆ ದೇವಾಡಿಗ ಸಂಘವು ಸಂಘದ 8 ನೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ಯಾಮರಾವ್ ಕಲ್ಮಾಡಿ ಸಭಾಂಗಣದಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಪುಣೆ ದೇವಾಡಿಗ ಸಂಘದ ಅಧ್ಯಕ್ಷ  ನಾರಾಯಣ ದೇವಾಡಿಗ, ಗೌರವ ಅಧ್ಯಕ್ಷ ಅಣ್ಣಯ್ಯ ಶೆರಿಗಾರ, ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ, ಮುಖ್ಯ ಸಲೆಹೆಗಾರ ನರಸಿಂಹ ದೇವಾಡಿಗ, ಉಪಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ ಮತ್ತು ಸುಧಾಕರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ನವೀನ ದೇವಾಡಿಗ, ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರವೀಣ್ ನಾರಾಯಣ ದೇವಾಡಿಗ ಮುಂಬೈ, ಶಶೀಧರ ದೇವಾಡಿಗ ಮೂಡುಬಿದಿರೆ, ಪುಣೆ ತುಳುಕೂಟ ಅಧ್ಯಕ್ಷ, ಮೋಹನ್ ಶೆಟ್ಟಿ ಎಣ್ಣೆಹೊಳೆ, ವಿಶ್ವನಾಥ್ ಪೂಜಾರಿ ಕಡ್ತಲ ಅಧ್ಯಕ್ಷರು ಬಿಲ್ಲವ ಸಂಘ ಪುಣೆ, ಸುಭಾಷ್ ಶೆಟ್ಟಿ ಅಧ್ಯಕ್ಷರು ಅಯ್ಯಪ್ಪ ಸ್ವಾಮಿ ದೇವಸ್ಥಾನ ಪುಣೆ ಹಾಗೂ ಪುಣೆ ದೇವಾಡಿಗ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.


Share