ಸಮಾಜದ ಸಂಘಟನೆಯಲ್ಲಿ ಗುರುತಿಸಿಕೊಳ್ಳಿ- ಅಣ್ಣಯ್ಯ ಶೇರಿಗಾರ್

ಪಾವಂಜೆ  ದೇವಾಡಿಗ ಸಂಘದಿಂದ ವಿದ್ಯಾರ್ಥಿವೇತನ, ಸಮ್ಮಾನ:  

ಪಾವಂಜೆ: ಸಂಘಟನೆಯಲ್ಲಿ ಮುಕ್ತವಾಗಿ ಗುರುತಿಸಿಕೊಂಡು ನಾವು ನಮ್ಮವರು ಎಂಬ ಭಾವನೆಯಿಂದ ದುಡಿದಲ್ಲಿ ನಮ್ಮಲ್ಲಿನ ಸೇವಾ ಮನೋಭಾವನೆ ಜಾಗೃತವಾಗುತ್ತದೆ ಎಂದು ಬಾರ್ಕೂರು ಶ್ರೀ ಏಕನಾಥೇಶ್ವರ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್ ಹೇಳಿದರು.

ಪಾವಂಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಾವಂಜಿಯ ದೇವಾಡಿಗ ಸಮಾಜ ಸೇವಾ ಸಂಘ, ದೇವಾಡಿಗ ಯುವ ವೇದಿಕೆ, ದೇವಾಡಿಗ ಮಹಿಳಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಫೆ. 16ರಂದು ನಡೆದ ವಿದ್ಯಾರ್ಥಿವೇತನ ಹಾಗೂ ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾವಂಜಿ ದೇವಾಡಿಗ ಸಮಾಜಸೇವಾ ಸಂಘದ ಅಧ್ಯಕ್ಷ ಅಶೋಕ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಗಡಿನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬಿ.ಜಿ. ಮೋಹನ್‍ದಾಸ್, ದ,ಕ.ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಶೋಭಾ ಸೋಮನಾಥ, ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಸಾಧು ಶೇರುಗಾರ್ ಬ್ರಹ್ಮಾವರ, ಹಿರಿಯ ಕೃಷಿಕ ದೂಮಪ್ಪ ದೇವಾಡಿಗ ಅರಾಂದ್, ಕಂಬಳ ಓಟಗಾರ್ ಅಭಿಷೇಕ ದೇವಾಡಿಗ ಪಾವಂಜೆ, ಕರಾಟೆ ಪಟು ಸುಶಾನ್ ದೇವಾಡಿಗ ತೋಕೂರು ಅವರನ್ನು ಸಮ್ಮಾನಿಸಲಾಯಿತು.

ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ ದೇವಾಡಿಗ ಕಂಕನಾಡಿ ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್‍ನ ವಿಶ್ವಸ್ಥರಾದ ಜನಾರ್ಧನ ಉಪ್ಪುಂದ, ಸಲಹಾ ಸಮಿತಿಯ ಸದಸ್ಯ ನರಸಿಂಹ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಸ್.ಕೆ ಶ್ರೀಯಾನ, ದೇವಾಡಿಗ ಯುವ ವೇದಿಕೆ ಅಧ್ಯಕ್ಷ ಜೀವನ್ ಪ್ರಕಾಶ್, ಕಾಮರೋಟ್ಟು ಮಹಿಳಾ ವೇದಿಕೆ ಅಧ್ಯಕ್ಷೆ ವಿಮಾಲ ಕೆ. ದೇವಾಡಿಗ ಉಪಸ್ಥಿತರಿದ್ದರು.

ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ದೇವಾಡಿಗ ಸ್ವಾಗತಿಸಿದರು, ಕೋಶಾಧಿಕಾರಿ ಜನಾರ್ದನ ಪಡುಒಣಂಬೂರು ಪ್ರಸ್ತಾವನಗೈದರು. ಸತೀಶ್ ಎಂ, ಗಾಯತ್ರಿ ಉಮೇಶ ದೇವಾಡಿಗ, ಜಗದೀಶ್ ಪಲಿವಾರ್, ಜಯಶ್ರೀ ಯಾದವ ದೇವಾಡಿಗ, ರಮೇಶ್ ದೇವಾಡಿಗ, ಉಮಾ ಸುಧೀರ ಪರಿಚಯಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಭಸ್ಕಾರ್ ದೇವಾಡಿಗ ವಂದಿಸಿದರು. ರಾಮದಾಸ್ ಪಾವಂಜಿ ನಿರೂಪಿಸಿದರು.


Share