ಎರಡು ವರ್ಷಗಳಲ್ಲಿ 62 ಸೇವಾಯಜ್ನಗಳನ್ನು ಪೂರೈಸಿದ ನೊಂದವರ ಆಶಾಕಿರಣ - ದೇವಾಡಿಗ ಅಕ್ಷಯ ಕಿರಣ

ನೊಂದ ಅಸಾಹಯಕರ ಪಾಲಿಗೆ ಹೆಗಲು ಕೊಡುವ ಸೇವೆಯೇ ದೇವರಿಗಿಷ್ಟ ವಾದ ಸೇವೆ ಎನ್ನುವ ವೇದವಾಕ್ಯ ದೊಂದಿಗೆ ತೆರೆಮರೆಯಲ್ಲಿ ಸದಾ ನಿಸ್ವಾರ್ಥ ಸೇವೆಯ ಪಥದಲ್ಲಿ ಸಾಗುವ ಸಾಮಾನ್ಯರಲ್ಲಿ ಅಸಮಾನ್ಯರು ನಮ್ಮ ಸೇವಾದಾರರು.ಶ್ರಮ ಜೀವಿಗಳು, ತಾನು ದುಡಿಯುವ ಪಾಲಲ್ಲಿ ಒಂದು ಪಾಲನ್ನು ಸಮಾಜದ ನೋಂದ ಜೀವಗಳ ಪಾಲಿಗೆ ಮೀಸಲಿಟ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ನಿಮ್ಮೆಲ್ಲರ  ಶ್ರೇಷ್ಠ ಗುಣ ಕೋಟಿ ಕೊಟ್ಟರು ಸಿಗದಿರುವ ಹೃದಯ ಶ್ರೀಮಂತರು ನೀವು.

ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ವನ್ನೇ ಮನಸ್ಸಲ್ಲಿಟ್ಟು ಅಶಕ್ತರ,ದುರ್ಬಲರ, ಕಷ್ಟಗಳಿಗೆ ಸ್ಪಂದಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ನಿಮ್ಮೇಲ್ಲರ  ಕನಸು,ಹಂಬಲ, ಛಲ,ಗುರಿ, ಧ್ಯೇಯಕ್ಕೆ ಎಂದೂ ತೊಡಕಾಗದಿರಲಿ.

ತನ್ನ ದುಡಿಮೆಯ ನಂತರ ಸಿಗುವ ಅಲ್ಪ ಸಮಯವನ್ನು  ಸಮಾಜದ ಹಿತಕ್ಕಾಗಿ,ಅಶಕ್ತರ ಪಾಲಿಗಾಗಿ ಮೀಸಲಿಡುವ ಸೇವಾದಾರರ ಶ್ರೇಷ್ಠ ಚಿಂತನೆ ಯುವ ಜನಾಂಗಕ್ಕೆ ಮಾದರಿಯಗಲಿ.

ನಿಮ್ಮಂತ ನಿಸ್ವಾರ್ಥ ಸೇವಕರ ಮುಂದಾಳತ್ವ ದಲ್ಲಿ ಸೇವೆಎಂಬ ದೀಪ ಸದಾ ಬೆಳಗುತಿರಲಿ ಹಾಗೂ ಅಶಕ್ತರ ಪಾಲಿಗೆ ಬೆಳಕಾಗಿ ನೊಂದ ಜೀವಗಳ ಮುಖದಲ್ಲಿ ಮಂದಹಾಸ ದ ನಗುವನ್ನು ತರಿಸುವ ಸೇವಾ ರತ್ನವಾಗಿ ಕಂಗೊಳಿಸಿ ಎಂದು ದೈವ ದೇವರಲ್ಲಿ ನಮ್ಮ ಪ್ರಾರ್ಥನೆ..

.~ಓರ್ವ ಅಭಿಮಾನಿ


Share